ಗದಗ ಜಿಲ್ಲೆಯಾದ್ಯಂತ ಮುಸ್ಲಿಮರಿಂದ ಪವಿತ್ರ ರಂಜಾನ್ ಆಚರಣೆ

| Published : Apr 12 2024, 01:04 AM IST

ಸಾರಾಂಶ

ಗದಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಮುಸ್ಲಿಮರು ಪವಿತ್ರ ರಂಜಾನ್ ಹಿನ್ನೆಲೆಯಲ್ಲಿ ಶ್ರದ್ಧಾ ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

gadag, holy ramadan, mass prayer, hk patil, dambal naka, ಗದಗ, ರಂಜಾನ್, ಸಾಮೂಹಿಕ ಪ್ರಾರ್ಥನೆ, ಡಂಬಳ ನಾಕಾ, ಎಚ್.ಕೆ. ಪಾಟೀಲ್

ಗದಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಮುಸ್ಲಿಮರು ಪವಿತ್ರ ರಂಜಾನ್ ಹಿನ್ನೆಲೆಯಲ್ಲಿ ಶ್ರದ್ಧಾ ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಗದಗ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಮುಸ್ಲಿಮರು ಪವಿತ್ರ ರಂಜಾನ್ ಹಿನ್ನೆಲೆಯಲ್ಲಿ ಶ್ರದ್ಧಾ ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಗದಗ ನಗರದ ಡಂಬಳ ನಾಕಾ ಬಳಿ ಇರುವ ಈದ್ಗಾ ಮೈದಾನ ಸೇರಿದಂತೆ ಅವಳಿ ನಗರದ ಹಲವು ಪ್ರಾರ್ಥನಾ ಸ್ಥಳಗಳಲ್ಲಿ ಹಿರಿಯರು, ಯುವಕರು, ಮಕ್ಕಳು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಆನಂತರ ತಮ್ಮ ತಮ್ಮ ಸ್ನೇಹಿತರಿಗೆ, ಪ್ರೀತಿಪಾತ್ರರಿಗೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ರಂಜಾನ್-ಲಕ್ಷ್ಮೇಶ್ವರದಲ್ಲಿ ಸಾಮೂಹಿಕ ಪ್ರಾರ್ಥನೆ:

ಪಟ್ಟಣದ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ರಮ್ಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಗುರುವಾರ ಪಟ್ಟಣದ ಈದ್ಗಾದಲ್ಲಿ ಹಾಫೀಜ ಶಕೀಲ್ ಅವರು ಸಾಮೂಹಿಕ ಪ್ರಾರ್ಥನೆಯ ಸಾರಥ್ಯ ವಹಿಸಿದ್ದರು.ಈ ವೇಳೆ ಮಾತನಾಡಿದ ಅವರು, ಪವಿತ್ರ ರಂಜಾನ್ ಹಬ್ಬವು ಸಹಬಾಳ್ವೆಯ ಸಹೋದರತೆಯ ಸಂಕೇತವಾಗಿದೆ. ಅಲ್ಲಾಹನಲ್ಲಿ ಪ್ರಾರ್ಥನೆ ಮಾಡುವ ಮೂಲಕ ಜಗತ್ತಿನಲ್ಲಿ ಶಾಂತಿ ಹಾಗೂ ನೆಮ್ಮದಿ ಮೂಡುವಂತಾಗಲಿ. ದಯಾಮಯನಾದ ದೇವರು ನಮ್ಮೆಲ್ಲರ ಕಷ್ಟಗಳನ್ನು ದೂರ ಮಾಡಿ ಆರೋಗ್ಯಯುತ ಜೀವನ ದಯಪಾಲಿಸಲಿ. ದುಶ್ಚಟಗಳಿಂದ ದೂರವಿದ್ದು ಸಮಾಜದ ಒಳಿತಿಗೆಗ ಸದಾ ಶ್ರಮಿಸೋಣ. ಪರಸ್ಪರ ಸೌಹಾರ್ದತೆ ಸಮಾನತೆ ಹಾಗೂ ಸಹಬಾಳ್ವೆಯ ಜೀವನ ನಿಮ್ಮದಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಹೊಸ ಬಟ್ಟೆ ತೊಟ್ಟು ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು.ಪಟ್ಟಣದ ದೂದಪೀರಾ ದರ್ಗಾದಿಂದ ಸಾಮೂಹಿಕವಾಗಿ ಮೆರವಣಿಗೆಯು ಮೂಲಕ ಈದ್ಗಾ ತಲುಪಿದ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ಆನಂತರ ಪರಸ್ಪರರನ್ನು ಆಲಂಗಿಸಿ ರಮ್ಜಾನ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.