ಸಾರಾಂಶ
ಕನ್ನಡಪ್ರಭ ವಾರ್ತೆ, ತರೀಕೆರೆ
ತಾಲೂಕು ಹುಣಸಘಟ್ಟ ತಪೋಕ್ಷೇತ್ರ ಶ್ರೀ ಗುರು ಹಾಲು ಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸಾಮಿಗಳ ಸತ್ಸಂಕಲ್ಪದಂತೆ ಏ.11 ರಿಂದ 13 ರವರೆಗೆ ಮಹಾ ಮೃತ್ಯುಂಜಯ ಯಾಗ ಹಮ್ಮಿಕೊಳ್ಳಲಾಗಿತ್ತು.ಗುರುವಾರ ಬೆಳಗ್ಗೆ ಮೃತ್ಯುಂಜಯ ವಿಗ್ರಹ ಪ್ರತಿಷ್ಠಾಪನೆಯೊಂದಿಗೆ ಮಂಡಲಪೂಜೆ ಗಣಪತಿ ಹೋಮ 2 ನೇ ದಿನ ಶುಕ್ರವಾರ ಬೆಳಿಗ್ಗೆಯಿಂದ ಅಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳೂಂದಿಗೆ ನಾಡಿನಲ್ಲಿ ಆಗಿರುವ ಮಳೆ, ಬೆಳೆ, ಅನಾವೃಷ್ಟಿಯಿಂದ ಬಳಲುತ್ತಿರುವ ಭಕ್ತರ ಪರಿಹಾರ ಕ್ಕೆ ಅಪಮೃತ್ಯು ಗಂಡಾಂತರ ನಿವಾರಣೆಗೆ ಮೃತ್ಯುಂಜಯ ಹೋಮ ಮಾಡುವುದರಿಂದ ಒಳ್ಳೆಯ ಮಳೆ. ಬೆಳೆ.ಆರೋಗ್ಯ, ಸಮೃದ್ಧಿ ಸಿಗಲೆಂದು ಹೋಮವನ್ನು ಹಮ್ಮಿ ಕೊಂಡಿದ್ದೇವೆಂದು ಹುಣಸಘಟ್ಟ ತಪೋಕ್ಷೇತ್ರ ಶ್ರೀ ಗುರು ಹಾಲು ಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸಾಮಿ ಆಶೀರ್ವದಿಸಿದರು,
ಊರಿನ ಭಕ್ತರು ಹಾಗೂ ಸುತ್ತಮುತ್ತಲಿನ ಊರುಗಳಿಂದ ಭಕ್ತರು ಆಗಮಿಸಿ ಮಹಾ ಮೃತ್ಯುಂಜಯ ಯಾಗದಲ್ಲಿ ಪಾಲ್ಗೊಂಡಿದ್ದರು.ಮೃತ್ಯುಂಜಯ ಮಹಾ ಯಾಗದ ಪ್ರತಿಷ್ಠಾಪನೆಯ ವಿಗ್ರಹವನ್ನು ತರೀಕೆರೆ ಪಟ್ಟಣದ ಕುಂಬಾರ ಬೀದಿಯ ಎಸ್. ಮಹದೇವಪ್ಪ, ಮಕ್ಕಳಾದ ಟಿ.ಎಂ.ಪ್ರಸನ್ನಕುಮಾರ್, ಟಿ.ಎಂ.ಚಂದ್ರಶೇಖರ್,ಹಾಗೂ ಟಿ.ಎಂ.ಕವಿತಶಿವಕುಮಾರ ವಿಗ್ರಹ ತಯಾರಿಸಿದರುಯಾಗದ ನಂತರ ಅಗಮಿಸಿರುವ ಭಕ್ತರಿಗೆ ತೀರ್ಥ,ಪ್ರಸಾದ ದೊಂದಿಗೆ ಊಟ ವ್ಯವಸ್ಥೆ ಹಾಗೂ ಬಿಸಿಲಿನ ತಾಪಮಾನಕ್ಕೆ ನೀರಿನ ಮತ್ತು ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.
12ಕೆಟಿಆರ್.ಕೆ.18ಃತರೀಕೆರೆ ಸಮೀಪದ ಹುಣಸಘಟ್ಟ ತಪೋಕ್ಷೇತ್ರದಲ್ಲಿ ಉತ್ತಮ ಮಳೆ-ಬೆಳೆಗಾಗಿ ಹೋಮ ಏರ್ಪಡಿಸಲಾಗಿತ್ತು. ಹುಣಸಘಟ್ಟ ತಪೋಕ್ಷೇತ್ರ ಶ್ರೀ ಗುರು ಹಾಲು ಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸಾಮಿ ಇದ್ದರು.