ಸಾರಾಂಶ
ಕನ್ನಡಪ್ರಭ ವಾರ್ತೆ ಟಿ. ನರಸೀಪುರಅಂಬೇಡ್ಕರ್ ಅವರಿಗೆ ಅಪಮಾನವಾಗುವ ರೀತಿಯಲ್ಲಿ ಕ್ಷುಲ್ಲಕ ಹೇಳಿಕೆ ನೀಡಿರುವ ಕೇಂದ್ರಗೃಹ ಸಚಿವ ಅಮಿತ್ ಷಾ ಅವರನ್ನು ತಕ್ಷಣವೇ ಕೇಂದ್ರ ಸಚಿವ ಸ್ಥಾನದಿಂದ ಕೈಬಿಟ್ಟು, ಗಡಿಗಾರು ಮಾಡಬೇಕೆಂದು ಪಟ್ಟಣದಲ್ಲಿ ದಸಂಸ ಒತ್ತಾಯಿಸಿದೆ.ಪಟ್ಟಣದ ತಲಕಾಡು-ಕೊಳ್ಳೇಗಾಲ ರಸ್ತೆಯಲ್ಲಿರುವ ಅಂಬೇಡ್ಕರ್ ವೃತ್ತದಿಂದ ಹೊರಟ ಪ್ರತಿಭಟನಾ ಮರೆವಣಿಗೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ವಿದ್ಯೋದಯ ವೃತ್ತ, ಮಾರ್ಗವಾಗಿ ತಾಲೂಕು ಕಚೇರಿ ತಲುಪಿ ಕೇಂದ್ರ ಸಚಿವ ಅವರನ್ನು ರಾಜೀನಾಮೆ ಪಡೆಯುವಂತೆ ಘೋಷಣೆಗಳನ್ನು ಕೂಗಿದರು. ಶೀಘ್ರ ಅವರ ಮೇಲೆ ಕ್ರಮ ಜರುಗಿಸುವಂತೆ ರಾಷ್ಷ್ರಪತಿಗಳಿಗೆ ಒತ್ತಾಯಿಸಿದರು.ದಸಂಸ ಜಿಲ್ಲಾ ಸಂಚಾಲಕ ಶಿವಕುಮಾರ್ ಮಾತನಾಡಿ, ಸಂವಿಧಾನ ಉದಾತ್ತವಾದ ಅಧಿಕಾರವನ್ನು ಪಡೆದು ಸಂವಿಧಾನದ ಧ್ಯೇಯ, ಆಶಯಗಳನ್ನು ಈಡೆರಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಅವರು ದೇಶದ ಸಂವಿಧಾನ ಕರ್ತೃ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕರವಾಗಿ ಮಾತನಾಡಿರುವುದು ರಾಷ್ಟ್ರದ್ರೋಹ ಕೃತ್ಯವಾಗಿದೆ, ಹಾಗಾಗಿ ಅವರನ್ನು ಸಚಿವ ಸಂಪುಟದಿಂದ ತಕ್ಷಣವೇ ಕೈಬಿಟ್ಟು ಬಂಧಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.ನಂತರ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.ದಸಂಸ ಜಿಲ್ಲಾ ಸಂಚಾಲಕ ಉಮಾ ಮಹಾದೇವ, ಜಿಲ್ಲಾ ಸಂಚಾಲಕ ಸೋಮಣ್ಣ, ಮುಖಂಡರಾದ ಬಸವರಾಜು, ರಾಜು, ಸೋಮಶೇಖರ್, ಪುಟ್ಟಮಲ್ಲಯ್ಯ, ರಜನಿ, ಉಮೇಶ್, ನಾಗರಾಜ್ ಮೂರ್ತಿ, ಶಿವಯ್ಯ, ನಾಗೇಶ್, ಸುರೇಶ್, ಸಿದ್ದರಾಜು, ಶಿವಕುಮಾರ್, ಶಶಿಕುಮಾರ್, ಲಕ್ಷ್ಮಣ್, ಸೋಮಣ್ಣ, ಸಿದ್ದು, ದಕ್ಷಿಣಮೂರ್ತಿ, ಸಿದ್ದರಾಜು, ಕುಮಾರ, ಲಿಂಗರಾಜು,ಮಹೇಶ್ ಇದ್ದರು.