ಸಾರಾಂಶ
ಡಾ.ಜಿ.ಪರಮೇಶ್ವರ ರವರ ೭೩ ನೇ ವರ್ಷದ ಹುಟ್ಟು ಹಬ್ಬವನ್ನು ಆ.೬ ರಂದು ಆಚರಣೆ
ಕನ್ನಡ ಪ್ರಭ ವಾರ್ತೆ ಕೊರಟಗೆರೆ
ದೇಶದ ಸಜ್ಜನ ರಾಜಕಾರಣಿ ಹಾಗೂ ರಾಜ್ಯ ಸರ್ಕಾರದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ರವರ ೭೩ ನೇ ವರ್ಷದ ಹುಟ್ಟು ಹಬ್ಬವನ್ನು ಆ.೬ ರಂದು ಡಾ.ಜಿ.ಪರಮೇಶ್ವರ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಸಾಮಾಜಿಕ ಸೇವಾ ಕಾರ್ಯಕ್ರಮವಾಗಿ ಆಚರಿಸಲಾಗುವುದು ಎಂದು ವೇದಿಕೆಯ ಅಧ್ಯಕ್ಷ ಹಾಗೂ ಪ.ಪಂ.ಸದಸ್ಯ ಕೆ.ಅರ್.ಓಬಳರಾಜು ತಿಳಿಸಿದರು. ಪಟ್ಟಣದ ರಾಜೀವ ಭವನದಲ್ಲಿ ನಡೆದ ಪ್ರತಿಕಾ ಗೋಷ್ಠಿಯಲ್ಲಿ ಮಾತನಾಡಿ, ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ದೇಶದಲ್ಲೇ ಸೃಜನ ಶೀಲ ರಾಜಕಾರಣಿಗಳಲ್ಲಿ ಒಬ್ಬರು, ಅವರ ಹುಟ್ಟು ಹಬ್ಬದ ಆಚರಣೆ ಆ.೬ ರ ಮಂಗಳವಾರ ದಂದು ನಡೆಯಲಿದ್ದು ಅಂದು ತಾಲೂಕು ಡಾ.ಜಿ.ಪರಮೇಶ್ವರ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಸಾಮಾಜಿಕ ಸೇವಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ತಾಲೂಕಿನ ಸ್ಕೌಟ್ಸ್ ಅಂಡ್ ಗೈಡ್ಸ್ನ ಶಾಲಾ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ವಿರತಣೆ, ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರಿಗೆ ಸನ್ಮಾನ ಮತ್ತು ಸಮವಸ್ತ್ರ ವಿತರಣೆ, ಪಟ್ಟಣದ ಹಲವು ಬಡವರಿಗೆ ಬೆಚ್ಚನೆಯ ಹೊದಿಕೆ ವಿತರಣೆ ಹಾಗೂ ರಕ್ತದಾನ ಶಿಬಿರ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಈ ಕಾರ್ಯಕ್ರಮಕ್ಕೆ ವೇದಿಕೆಯ ಸದಸ್ಯರು, ಪಟ್ಟಣ ಪಂಚಾಯಿತಿ ಸದಸ್ಯರು, ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಪದಾಧಿಕಾರಿಗಳು, ಅಭಿಮಾನಿಗಳು ನಮ್ಮೊಂದಿಗೆ ಕೈ ಜೋಡಿಸಲ್ಲಿದ್ದಾರೆ ಎಂದ ಅವರು ಡಾ.ಜಿ.ಪರಮೇಶ್ವರ ರವರ ಹುಟ್ಟು ಹಬ್ಬದಂದು ವೇದಿಕೆಯಿಂದ ಪ್ರತಿವರ್ಷವು ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಿದರು. ಪ.ಪಂ.ಸದಸ್ಯ ಎ.ಡಿ.ಬಲರಾಮಯ್ಯ ಮಾತನಾಡಿ ಡಾ.ಜಿ.ಪರಮೇಶ್ವರ ರವರು ೨೦೦೮ ರಲ್ಲಿ ಕೊರಟಗೆರ ಕ್ಷೇತ್ರದ ಶಾಸಕರಾಗಿ ಬಂದರು, ಕೊರಟಗೆರೆ ಕ್ಷೇತ್ರದ ಅಭಿವೃದ್ದಿಯೊಂದಿಗೆ ಜನರಿಗೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ, ಅವರ ಹುಟ್ಟು ಹಬ್ಬವನ್ನು ಕೊರಟಗೆರೆ ಕ್ಷೇತ್ರದಲ್ಲಿ ಅಭಿಮಾನಿಗಳು ಮತ್ತು ಸಾರ್ವಜನಿಕರು ವಿವಿಧ ರೀತಿಯಲ್ಲಿ ಅಚರಿಸಿಕೊಂಡು ಇಲ್ಲಿಯವ ರೆಗೂ ಬಂದಿದ್ದಾರೆ, ಈ ವರ್ಷದ ಆ.೬ ರಂದು ಸಾಂಸ್ಕೃತಿಕ ವೇದಿಕೆಯಿಂದ ಪಟ್ಟಣ ಪಂಚಾಯಿತಿ ಸದಸ್ಯರ ಒಳಗೊಡಿ ಉತ್ತಮ ಕಾರ್ಯಕ್ರಮವನ್ನು ಹಾಕಿಕೊಂಡಿದ್ದು ಅದರಲ್ಲೂ ಪಟ್ಟಣದ ಸ್ವಚ್ಚತೆಗೆ, ಜನರ ಆರೋಗ್ಯ ರಕ್ಷಣೆಗೆ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಹಗಲಿರುಳು ಶ್ರಮಿಸುತ್ತಿರುವ ಪಟ್ಟಣದ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸುತ್ತಿರುವುದು ಡಾ.ಜಿ.ಪರಮೇಶ್ವರ ರವರಿಗೆ ಅತೀವ ಸಂತೋಷ ತಂದಿದೆ, ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿರತ್ತವೆ ಎಂದರು.ಪ್ರತಿಕಾ ಗೋಷ್ಠಿಯಲ್ಲಿ ಪ.ಪಂ.ಸದಸ್ಯರಾದ ನಾಗರಾಜು, ನಂದೀಶ್, ಮಾಜಿ ಉಪಾಧ್ಯಕ್ಷ ಕೆ.ವಿ.ಮಂಜುನಾಥ್, ತುಮುಲ್ ಮಾಜಿ ನಿರ್ದೇಶಕ ಈಶ್ವರಯ್ಯ, ಮುಖಂಡರುಗಳಾದ ಎಲ್.ರಾಜಣ್ಣ, ಗಡ್ಲಹಳ್ಳಿ ಕುಮಾರ್, ತುಂಗಾಮಂಜುನಾಥ್, ಕಾರ್‌ಮಹೇಶ್, ಅರವಿಂದ್, ಮಹಮದ್ ಇಸ್ಮಾಯಿಲ್, ರವಿಕುಮಾರ್, ಹನುಮಂತು, ಲಕ್ಷ್ಮೀಪತಿ, ಚೌದ್ರಿ, ಗಿರೀಶ್, ಏರ್‌ಟೈಲ್ ಗೋಪಿ, ಲಕ್ಷö್ನಣ್, ಮಂಜುಳಾ, ಯುವ ಕಾಂಗ್ರೆಸ್‌ನ ದೀಪಕ್, ರಘುವೀರ್, ಶ್ರೇಯಸ್, ಷರೀಫ್ ಸೇರಿದಂತೆ ಇನ್ನಿತರರು ಹಾಜರಿದ್ದರು.