ಹೋಮಿಯೋಪಥಿ ಜಗತ್ತಿನ 2 ನೇ ಅತೀ ದೊಡ್ಡ ವೈದ್ಯಕೀಯ ಪದ್ಧತಿ : ಡಾ. ವೀರಣ್ಣ ಚರಂತಿಮಠ

| Published : Oct 04 2024, 01:21 AM IST / Updated: Oct 04 2024, 11:41 AM IST

ಸಾರಾಂಶ

ವಿಶ್ವ ಆರೋಗ್ಯ ಸಂಸ್ಥೆ ಹೋಮಿಯೋಪಥಿಯನ್ನು ಜಗತ್ತಿನ 2ನೇ ಅತೀ ದೊಡ್ಡ ವೈದ್ಯಕೀಯ ಪದ್ಧತಿಯೆಂದು ಘೋಷಿಸಿದೆ ಎಂದು ಮಾಜಿ ಶಾಸಕರು, ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

 ಬಾಗಲಕೋಟೆ : ವಿಶ್ವ ಆರೋಗ್ಯ ಸಂಸ್ಥೆ ಹೋಮಿಯೋಪಥಿಯನ್ನು ಜಗತ್ತಿನ 2ನೇ ಅತೀ ದೊಡ್ಡ ವೈದ್ಯಕೀಯ ಪದ್ಧತಿಯೆಂದು ಘೋಷಿಸಿದೆ ಎಂದು ಮಾಜಿ ಶಾಸಕರು, ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಿ.ವಿ.ವಿ.ಎಸ್ ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಬಿ.ಎಚ್.ಎಂ.ಎಸ್ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಥೆಮಿಲಿಯೋಸ್-2024ರ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಲೋಪಥಿಕ್ ಚಿಕಿತ್ಸೆಯ ಮಧ್ಯದಲ್ಲಿ ಇಂದು ಹೋಮಿಯೋಪಥಿಕ್ ಚಿಕಿತ್ಸೆಗೆ ಭಾರಿ ಡಿಮ್ಯಾಂಡ್ ಪಡೆಯುತ್ತಿದ್ದು, ಈ ಔಷಧ ಪದ್ಧತಿ ಜಗತ್ತಿನಾದ್ಯಂತ ಕ್ರಮೇಣ ಮಾನ್ಯತೆ ಪಡೆದು ಭಾರತದಲ್ಲಿಯೂ ಈಗ ಅತೀ ಹೆಚ್ಚು ಪ್ರಚಾರವಾಗಿದೆ ಎಂದರು.

 ಹೋಮಿಯೋಪಥಿ ಔಷಧಿ ಸರಳ, ಸುರಕ್ಷಿತ, ಸೇವಿಸಲು ಸುಲಭ, ಮಿತವ್ಯಯಕರ ಮತ್ತು ಪರಿಣಾಮಕಾರಿಯಾಗಿದೆ. ಅಡ್ಡ ಪರಿಣಾಮವಿಲ್ಲದ ಕಾರಣ ಇಂದು ಈ ಔಷಧಿ ಪ್ರಖ್ಯಾತಿ ಪಡೆಯುತ್ತಿದೆ. ಗ್ರಾಮೀಣಿ ಪ್ರದೇಶದ ಜನರು ಈ ಔಷಧಿಯ ಮೊರೆ ಹೋಗುತ್ತಿದ್ದಾರೆ. ಈ ಎಲ್ಲ ವಿಷಯಗಳನ್ನು ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಂಡು ಶ್ರೆಷ್ಠ ವೈದ್ಯರಾಗಿ ಸಮಾಜದ ಸೇವೆ ಮಾಡುವ ಮೂಲಕ ತಂದೆ-ತಾಯಿ, ಗುರು ಮತ್ತು ಗುರುಗಳ ಋಣ ತಿರಿಸಿ ಎಂದು ಸಲಹೆ ನೀಡಿದರು.ಗೌರವ ಕಾರ್ಯದರ್ಶಿ ಮಹೇಶ ಅಥಣಿ ಮಾತನಾಡಿ, ನಮ್ಮ ಸಂಸ್ಥೆಯ ಪ್ರಥಮ ಬಿ.ಎಚ್.ಎಂ.ಎಸ್ ಕೊಡುಗೆ ಇದಾಗಿದೆ. ಅತೀ ಕಡಿಮೆ ಅವಧಿಯಲ್ಲಿ ಹೋಮಿಯೋಪಥಿ ಮಹಾವಿದ್ಯಾಲಯವು ಗಣನೀಯ ಸಾಧನೆ ಮಾಡಿದೆ. ಹೋಮಿಯೋಪಥಿಯನ್ನು ಸಮಾಜದ ಕೊನೆಯ ವ್ಯಕ್ತಿಗೂ ತಲುಪಿಸುವ ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಮಾತನಾಡಿ, ಹೋಮಿಯೋಪಥಿ ವೈದ್ಯ ಪದ್ಧತಿಯೇ ಒಂದು ವಿಶೇಷ ಪದ್ಧತಿಯಾಗಿದೆ. ಈ ನಿಟ್ಟಿನಲ್ಲಿ ಉಪನ್ಯಾಸಕರು, ವೈದ್ಯ ವಿದ್ಯಾರ್ಥಿಗಳು ಮರಣಾಂತಿಕ, ಸಾಂಕ್ರಾಮಿಕ- ಅಸಾಂಕ್ರಾಮಿಕ ರೋಗಗಳ ಕುರಿತು ಸಂಶೋಧನೆ ಮಾಡಿ, ಈ ನಿಟ್ಟಿನಲ್ಲಿ ಸಂಘದಿಂದ ಎಲ್ಲ ರೀತಿಯ ಸಹಾಯ ಸಹಕಾರ ನೀಡಲಾಗುವುದು. ಅಂತಿಮ ವರ್ಷ ಅಂದರೆ ಇದೇ ಕೊನೆಯಂದು ತಿಳಿಯಬೇಡಿ. ಶಿಕ್ಷಣಕ್ಕೆ ಕೊನೆಯೇ ಇಲ್ಲ ಕೊನೆಯ ಉಸಿರಿರುವರೆಗೆ ನಿರಂತರವಾಗಿ ಕಲಿಯುತ್ತಿರಬೇಕು ಎಂದರು.

ಪ್ರಾಚಾರ್ಯ ಡಾ.ಅರುಣ ಹೂಲಿ ಸ್ವಾಗತಿಸಿ, ಮಹಾವಿದ್ಯಾಲಯ ಸಾಗಿ ಬಂದ ಮೈಲಿಗಲ್ಲನ್ನು ವಿವರಿಸಿದರು. ಪ್ರಾಧ್ಯಾಪಕ ಡಾ.ರವಿ.ಕೋಟೆಣ್ಣವರ ವಂದಿಸಿದರು. ಸಮಾರಂಭದಲ್ಲಿ ಬವಿವ ಸಂಘದ ಪದಾಧಿಕಾರಿಗಳಾದ ಅಶೋಕ ಸಜ್ಜನ, ಮಹಾಂತೇಶ ಕಕರೆಡ್ಡಿ, ಗುರುಬಸವ ಸೂಳಿಭಾವಿ, ಕುಮಾರ ಹಿರೇಮಠ, ಅಶೋಕ ಕರಡಿ, ಮಹಾಂತೇಶ ಶಟ್ಟರ.ವೈದ್ಯ ವಿದ್ಯಾರ್ಥಿಗಳು ವಿದ್ಯಾ ಸಂಸ್ಥೆ ಗುರುಗಳ ಕುರಿತು ಅನನ್ಯ ಮಧುರವಾದ ಅನಿಸಿಕೆಗಳನ್ನು ಹಂಚಿಕೊಂಡರು.ಪದವಿ ಮುಗಿಸಿದ ಹಿರಿಯ ವಿದ್ಯಾರ್ಥಿಗಳನ್ನು ಹೃದಯ ಸ್ಪಷವಾಗಿ ಬೀಳ್ಕೊಡುವ ಸಮಾರಂಭ ಏರ್ಪಡಿಸಿದ ಕಿರಿಯ ವಿದ್ಯಾರ್ಥಿಗಳೂ ಕೂಡ ಹಿರಿಯ ವಿದ್ಯಾರ್ಥಿಗಳ ಮಾರ್ಗದರ್ಶನ, ಅವಿನಾಭಾವ ಸಂಬಂಧ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು. 

ವೈದ್ಯ ವಿದ್ಯಾರ್ಥಿಗಳು ತಮ್ಮ ಹಿರಿಯ ವಿದ್ಯಾರ್ಥಿಗಳಿಗೆ ಕಾಲೇಜು ಸಂಸತ್ತಿನ ಪ್ರತಿನಿಧಿಗಳಾದ ಸೃಷ್ಟಿ ತೋಟದ, ಪೈಜಾನ್‌ ನಾಲಬಂದ, ರಔಜಿತಾ ನವಲಿ, ಭಾಗ್ಯ ಗಂಗಶೆಟ್ಟಿ, ಕಾರ್ತಿಕ ವಸ್ತ್ರದ, ತೃಪ್ತಿ ಬೋಡಕೆ, ಅಂಬಿಕಾ ಅವಟೆ, ಸರ್ವಮಂಗಳಾ ಯರವಿನತಲಿಮಠ, ತರಗತಿಗಳ ಪ್ರತಿನಿಧಿಗಳಾಗಿ ಪೂರ್ವಿ ಹಿರೇಮಠ, ಸಂಜಯ ಸಾವಂತ, ರಿಶಿಕೇಶ ಶ್ರೀಮಂತ ಸಜ್ಜನರವರ ನೇತೃತ್ವದಲ್ಲಿ ಸಾಂಸ್ಕೃತಿಕ ಸಲಹಾ ಮಂಡಳಿಯ ಡಾ.ವಿಜಯಲಕ್ಷ್ಮಿ ಪಾಟೀಲ, ಡಾ.ವಿನೋದ, ಕೆ.ಡಾ.ಶಮಶಾದ ಅಂಕಲಗಿಯವರ ಮಾರ್ಗದರ್ಶನದಲ್ಲಿ ಎಲ್ಲರ ಗಮನ ಸೆಳೆವ ಮನಮೋಹಕ ವಿವಿಧ ಶಾಸ್ತ್ರೀಯ ಹಾಗೂ ಆಧುನಿಕ ನೃತ್ಯ, ಸುಮಧುರ ಗೀತೆಗಳೊಂದಿಗೆ ವಿದಾಯ ಹೇಳಿದರು.

ಬಿ.ವಿ.ವಿ ಸಂಘ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಮಾಡುತ್ತಿದ್ದು, ಸಮಾಜದ ಒಳಿತಾಗಿ ಅತ್ಯುತ್ತಮ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಸೃಷ್ಟಿಸಿದೆ.

-ಡಾ.ವೀರಣ್ಣ ಚರಂತಿಮಠ, ಮಾಜಿ ಶಾಸಕರು, ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷರು.