ಸಾರಾಂಶ
ಹೋಂಸ್ಟೇಗಳ ನಿರ್ವಹಣೆ ಕುರಿತು ತರಬೇತಿ ಕಾರ್ಯಾಗಾರವು ನಡೆಯಿತು. 65ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಭಾರತ ಸರ್ಕಾರದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ ಮಂಗಳೂರು (ಎಂಎಸ್‌ಎಂಇ) ಕ್ಯಾಟಲಿಸ್ಟ್ ವಿಮೆನ್ ಎಂಟ್ರೆಫ್ರೆನ್ಸ್ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಕೊಡಗು ಜಿಲ್ಲೆ ಹೋಂ-ಸ್ಟೇ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲೆಯಲ್ಲಿ ನೋಂದಾಯಿತ ಹೋಂಸ್ಟೇಗಳ ನಿರ್ವಹಣೆ ಕುರಿತು ತರಬೇತಿ ಕಾರ್ಯಾಗಾರವು ಸೋಮವಾರ ನಗರದ ಹೋಟೆಲ್ ಮಯೂರ ವ್ಯಾಲಿ ವ್ಯೂನಲ್ಲಿ ನಡೆಯಿತು.ಆರ್ಥಿಕವಾಗಿ ಲಾಭದಾಯಕ ಹಾಗೂ ಜವಾಬ್ದಾರಿಯಾಗಿ ಹೋಂಸ್ಟೇ ನಡೆಸುವ ಬಗ್ಗೆ ಹಾಗೂ ಸ್ಥಳೀಯವಾಗಿ ದೊರೆಯುವ ಉತ್ಪನ್ನಗಳಿಗೆ ಬಾರ್‌ಕೋಡ್ ಅಳವಡಿಸುವ ಬಗ್ಗೆ ಇತರೆ ವಿಷಯದ ಬಗ್ಗೆ ಸಮಗ್ರವಾಗಿ ಎಂಎಸ್‌ಎಂಇ ಸಂಸ್ಥೆಯ ವಿಷಯ ತಜ್ಞರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿರುವ ನೋಂದಾಯಿತ ಹೋಂ-ಸ್ಟೇಗಳಿಗೆ ತಾಂತ್ರಿಕ ಮಾರ್ಗದರ್ಶನ ಹಾಗೂ ಜಿಲ್ಲೆಯ ಉತ್ಪನ್ನಗಳಾದ ಕಾಫಿ, ವೈನ್, ಚಾಕೋಲೇಟ್, ಜೇನು, ಮಸಾಲೆ ಪದಾರ್ಥಗಳಿಗೆ ಮೌಲ್ಯ ವರ್ಧನೆ ಮಾಡುವ ಬಗ್ಗೆ ಹಾಗೂ ಮಾರ್ಕೆಟಿಂಗ್ ಮಾಡುವ ಬಗ್ಗೆ ಹಾಗೂ ಸ್ವಾಸ್ಥ್ಯ ಕೇಂದ್ರ ಭಾರತ ಸರ್ಕಾರದ ಎಂಎಸ್‌ಎಂಇ ನೋಂದಣಿ ಬಗ್ಗೆ ತಿಳಿಸಿದರು.ಜಿಲ್ಲೆಯ ನೋಂದಾಯಿತ ಹೋಂ-ಸ್ಟೇಗಳು ಎಂಎಸ್‌ಎಂಇ ನೋಂದಾಣಿ ಮಾಡುವ ಕುರಿತು ಹಾಗೂ ಅದರ ಪ್ರಾಯೋಜನಗಳ ಬಗ್ಗೆ ಸುಮನ್ ಎಸ್. ರಾಜು, ಸಹಾಯಕ ನಿರ್ದೇಶಕರು ಎಂಎಸ್‌ಎಂಇ ಮಂಗಳೂರು ಇವರು ಮಾಹಿತಿ ನೀಡಿದರು.
ಬಿಸಿನೆಸ್ ಸ್ಟ್ರಾಟೆಜಿಸ್ ಫಾರ್ ಎಂಟ್ರೆಪ್ರೆನುರ್ಸ್ ಎಂಬ ವಿಷಯದ ಬಗ್ಗೆ ಸಂಗೀತಾ ಶಶ್ರೀಂದ್ರ, ಕ್ಯಾಟಲಿಸ್ಟ್ ವಿಮೆನ್ ಎಂಟ್ರೆಫ್ರೆನ್ಸ್ ಲೀಡ್ ಮಂಗಳೂರು ಮಾಹಿತಿ ನೀಡಿದರು.ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಅನಿತಾ ಭಾಸ್ಕರ್ ಮಾತನಾಡಿದರು. ಹೋಂ-ಸ್ಟೇ ಅಸೋಸಿಯೇಷನ್ ಅಧ್ಯಕ್ಷರಾದ ಮೋಂತಿ ಗಣೇಶ್, ಹೋಂ ಸ್ಟೇಗಳ ನಿರ್ವಹಣೆ, ಬೆಳವಣಿಗೆ, ಅಭಿವೃದ್ಧಿ ಹಾಗೂ ಕಸವಿಲೇವಾರಿ ಸಂಬಂಧ ಮಾತನಾಡಿದರು.
ಸೋಮವಾರಪೇಟೆ ತಾಲೂಕು ಹೋಂಸ್ಟೇ ಅಸೋಷಿಯೇಷನ್ ಅಧ್ಯಕ್ಷ ಸಿ.ಕೆ.ರೋಹಿತ್ ಹಾಗೂ ಸುಮಾರು 65ಕ್ಕೂ ಹೆಚ್ಚು ಹೋಂಸ್ಟೇಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಜಿಲ್ಲಾ ಪ್ರವಾಸೋದ್ಯಮ ಸಮಾಲೋಚರಾದ ಜತೀನ್ ಬೋಪಣ್ಣ ಇತರರು ಇದ್ದರು.