ಸಾರಾಂಶ
ಬಳ್ಳುಂಜೆ ಗ್ರಾಮ ಪಂಚಾಯಿತಿಯ ಕುಕ್ಕೆಟ್ಟೆ ಕೊಲ್ಲೂರಿನ ಯಕ್ಷಗಾನ ಬಯಲಾಟ ಸಮಿತಿ ನೇತೃತ್ವದಲ್ಲಿ ಕೊಲ್ಲೂರಿನಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರಿನ ಅಮೃತ ವಿಶ್ವವಿದ್ಯಾಪೀಠಂನಿಂದ ಪಿಎಚ್ ಡಿ ಪದವಿ ಪಡೆದುದಕ್ಕಾಗಿ ಡಾ.ಧನ್ಯಶ್ರೀ ಅವರಿಗೆ ಜರಗಿದ ಹುಟ್ಟೂರ ಅಭಿನಂದನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಗ್ರಾಮೀಣ ಪ್ರದೇಶದಲ್ಲಿದ್ದು ಯುವತಿಯರು ಶೈಕ್ಷಣಿಕ ಸಾಧನೆ ಮಾಡುವುದು ಇತರರಿಗೂ ಪ್ರೇರಣೆಯಾಗಬೇಕೆಂದು ಪತ್ರಕರ್ತ, ಅಶ್ವತ್ಥಪುರ ಸೀತಾರಾಮ ಚಂದ್ರ ದೇವಳದ ಟ್ರಸ್ಟಿ ಕಿರಣ್ ಮಂಜನಬೈಲು ಹೇಳಿದ್ದಾರೆ.ಬಳ್ಳುಂಜೆ ಗ್ರಾಮ ಪಂಚಾಯಿತಿಯ ಕುಕ್ಕೆಟ್ಟೆ ಕೊಲ್ಲೂರಿನ ಯಕ್ಷಗಾನ ಬಯಲಾಟ ಸಮಿತಿ ನೇತೃತ್ವದಲ್ಲಿ ಕೊಲ್ಲೂರಿನಲ್ಲಿ ನಡೆದ ಬೆಂಗಳೂರಿನ ಅಮೃತ ವಿಶ್ವವಿದ್ಯಾಪೀಠಂನಿಂದ ಪಿಎಚ್ ಡಿ ಪದವಿ ಪಡೆದುದಕ್ಕಾಗಿ ಡಾ.ಧನ್ಯಶ್ರೀ ಅವರಿಗೆ ಜರಗಿದ ಹುಟ್ಟೂರ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಡಾ. ಸುಧಾರಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರೀತಿ ವಿಶ್ವಾಸಗಳು, ಮಾನವೀಯ ಸಂಬಂಧಗಳ ಕೊರತೆ ಉಂಟಾಗಿದ್ದು . ಸಾಂಸ್ಕೃತಿಕ ಶೈಕ್ಷಣಿಕ ವಿಚಾರಗಳ ನೆಪದಲ್ಲಿ ಗ್ರಾಮಸ್ಥರನ್ನೆಲ್ಲ ಒಗ್ಗೂಡಿಸುವ ಕಾರ್ಯವಾಗಬೇಕೆಂದು ಹೇಳಿದರು.ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಮೃತ ವಿಶ್ವವಿದ್ಯಾಪೀಠಂನಿಂದ ಪಿಎಚ್ ಡಿ ಪದವಿ ಪಡೆದ ಡಾ. ಧನ್ಯಾಶ್ರೀಗೆ ಹುಟ್ಟೂರ ಗೌರವ ಸಲ್ಲಿಸಲಾಯಿತು.
ಬಳ್ಳುಂಜೆ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷೆ ಡಾ.ಫ್ರೀಡಾ ರೋಡ್ರಿಗಸ್, ಕೊಲ್ಲೂರು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸದಾಶಿವ ನಾಯ್ಕ, ಬಳ್ಕುಂಜೆ ಪಂಚಾಯಿತಿ ಸದಸ್ಯ ಆನಂದ ಕೆ, ಸುಜಾತಾ ಪ್ರಭಾಕರ್, ನ್ಯಾಯವಾದಿ ಶಶಿಧರ ಅಡ್ಕತ್ತಾಯ, ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ದಯಾನಂದ ಬಂಗೇರ, ದೇವದಾಸ ಮಲ್ಯ, ಪ್ರವೀಣ್ ಕೊಲ್ಲೂರು ಮತ್ತಿತರರು ಇದ್ದರು. ಡಾ. ಮುರಳೀಧರ ಪ್ರಾಸ್ತಾವಿಕ ಮಾತನಾಡಿದರು.ಬಳಿಕ ಸಂದೀಪ್ ಶೆಟ್ಟಿ ರಾಯಿ ತಂಡದಿಂದ ‘ಕುಸ್ಲದ ಕುರ್ಲರಿ’ ಹಾಸ್ಯ ಕಾರ್ಯಕ್ರಮ ನಡೆಯಿತು.