ಇಳಕಲ್ಲ ಕಲಾವಿದರ ತವರೂರ: ಗುರುಮಹಾಂತ ಶ್ರೀ

| Published : May 24 2024, 12:47 AM IST

ಸಾರಾಂಶ

45 ವರ್ಷಗಳ ಬಳಿಕ ಇಳಕಲ್ಲ ನಗರದಲ್ಲಿ ದಾವಣಗೆರೆ ಕೆ.ಬಿ.ಆರ್. ಡ್ರಾಮಾ ಕಂಪನಿಯಿಂದ ನಾಟಕ ಪ್ರದರ್ಶನಕ್ಕೆ ಗುರುಮಹಾಂತ ಶ್ರೀಗಳು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಇಳಕಲ್ಲ ನಗರ ಸೀರೆಗೆ ಮತ್ತು ಕಲ್ಲು ಶಿಲೆಗಳಿಗೆ ಪ್ರಸಿದ್ಧಿಯಾದಂತೆ, ನಗರ ಕಲೆಗೂ ಪ್ರಸಿದ್ಧಿಯಾಗಿದೆ. ಹೀಗಾಗಿ ರಾಜ್ಯದ ಜನತೆ ಇಳಕಲ್ಲ ಎಂದರೆ ಕಲಾವಿದರ ತವರೂರು ಎಂದು ಕರೆಯುತ್ತಾರೆ ಎಂದು ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಶ್ರೀಗಳು ಹೇಳಿದರು.

ಇಳಕಲ್ಲ ನಗರದ ಬಸವೇಶ್ವರ ವೃತ್ತದ ಸಮೀಪದ ಮಹೇಶಪ್ಪ ಸಜ್ಜನ ಅವರ ಜಾಗದಲ್ಲಿ ದಾವಣಗೆರೆ ಕೆ.ಬಿ.ಆರ್. ಡ್ರಾಮಾ ಕಂಪನಿಯ ಹಾಕಿದ ನಾಟಕ ಮಂದಿರದಲ್ಲಿ 45 ವರ್ಷಗಳ ನಂತರ ಇಳಕಲ್ಲ ನಗರದಲ್ಲಿ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ರಂಗಭೂಮಿ ಕಲಾವಿದರ ಜೀವನ ಅತ್ಯಂತ ತೊಂದರೆಯಲ್ಲಿದೆ. ಅವರು ರಂಗದ ಮೇಲೆ ರಾಜ,ರಾಣಿಯಾಗಿ ಹಾಗೂ ನಮ್ಮನ್ನು ಸಂತಸಗೊಳಿಸಲು ಏನೆಲ್ಲಾ ಪ್ರಯತ್ನಿಸುತ್ತಾರೆ. ಆದರೆ, ಜೀವನ ರಂಗದ ಹಿಂದೆ ಅವರ ಜೀವನ ಅತ್ಯಂತ್ರ ತೊಂದರೆದಾಯಕವಾಗಿದೆ. ಆದರೆ ಅವರು ರಂಗದ ಮುಂದೆ ಬಂದಾಗ ತಮ್ಮ ಎಲ್ಲ ಕಷ್ಟ ಮರೆತು ನಟಿಸಿ ಸಂತಸದ ಜೀವನ ನಮಗೆ ತೊರಿಸುತ್ತಾರೆ. ಕಾರಣ ರಂಗ ಕಲಾವಿದರಿಗೆ ನಿಮ್ಮಿಂದ ಸಹಾಯ ಹಾಗೂ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿ ನಗರದ ಜನತೆ ದಯಮಾಡಿ, 96 ವರ್ಷ ದಿಂದ ರಂಗಕಲೆ ಉಳಿಸಿಕೊಂಡು ಸಮಾಜ ಸೇವೆ ಮಾಡುತ್ತಿರುವ ಇಳಕಲ್ಲ ಜನತೆ ನಾಟಕ ನೊಡುವುದರ ಮೂಲಕ ಪ್ರೋತ್ಸಾಹ ಮಾಡಬೇಕು ಎಂದು ತಿಳಿಸಿದರು.

ಸಮಾರಂಭದಲ್ಲಿ ಚಿಂದೋಡಿ ವಿಜಯಕುಮಾರ, ಮಂಗಳೂರ ಮೀನನಾಠ ರಂಗ, ಸಂಘಟಕ ಮಹಾಂತೇಶ ಗಜೇಂದ್ರಗಡ, ಮಹೇಶಪ್ಪ ಸಜ್ಜನ, ಸಂಗಣ್ಣ ಗದ್ದಿ, ಬಿ.ಬಾಬು, ಕೆ.ಎ.ಬನ್ನಟ್ಟಿ, ರಾಮನಗೌಡ ಸಂದಿಮನಿ, ಮುರ್ತುಜಸಾಬ ಚಳಗೇರಿ ಹಾಗೂ ಇತರರು ಉಪಸ್ಥಿತರಿದ್ದರು.