ನಕಲಿ ಪತ್ರಕರ್ತರ ಹಾವಳಿಯಿಂದ ಪ್ರಾಮಾಣಿಕರಿಗೆ ಸಂಕಷ್ಟ : ಎಚ್.ಬಿ.ಮದನ್‌ಗೌಡ

| Published : Mar 30 2025, 03:05 AM IST

ಸಾರಾಂಶ

ಯೂಟ್ಯೂಬ್ ಹಾಗೂ ಪ್ರಚಲಿತದಲ್ಲಿ ಇಲ್ಲದ ಪತ್ರಿಕೆ ಹೆಸರು ಹೇಳಿಕೊಂಡು ಇಲಾಖೆಗಳ ನೌಕರರು ಅದರಲ್ಲೂ ಗ್ರಾಪಂ ಪಿಡಿಒಗಳ ವಿರುದ್ಧ ಆರ್‌ಟಿಐ ಅರ್ಜಿ ಸಲ್ಲಿಸಿ, ಸರ್ಕಾರಿ ಕೆಲಸಗಳಿಗೆ ಅಡ್ಡಿಪಡಿಸುವ ಜೊತೆಗೆ ಭ್ರಷ್ಟಾಚಾರ ನಡೆಸುತ್ತಿದ್ದು, ಇಂತಹ ಸಮಾಜಘಾತುಕ ಶಕ್ತಿಗಳಿಂದ ಪ್ರಾಮಾಣಿಕ ಪತ್ರಕರ್ತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಬಿ.ಮದನ್‌ಗೌಡ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಯೂಟ್ಯೂಬ್ ಹಾಗೂ ಪ್ರಚಲಿತದಲ್ಲಿ ಇಲ್ಲದ ಪತ್ರಿಕೆ ಹೆಸರು ಹೇಳಿಕೊಂಡು ಇಲಾಖೆಗಳ ನೌಕರರು ಅದರಲ್ಲೂ ಗ್ರಾಪಂ ಪಿಡಿಒಗಳ ವಿರುದ್ಧ ಆರ್‌ಟಿಐ ಅರ್ಜಿ ಸಲ್ಲಿಸಿ, ಸರ್ಕಾರಿ ಕೆಲಸಗಳಿಗೆ ಅಡ್ಡಿಪಡಿಸುವ ಜೊತೆಗೆ ಭ್ರಷ್ಟಾಚಾರ ನಡೆಸುತ್ತಿದ್ದು, ಇಂತಹ ಸಮಾಜಘಾತುಕ ಶಕ್ತಿಗಳಿಂದ ಪ್ರಾಮಾಣಿಕ ಪತ್ರಕರ್ತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಬಿ.ಮದನ್‌ಗೌಡ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಅರ್ಬನ್ ಬ್ಯಾಂಕಿಗೆ ಐದು ಪತ್ರಕರ್ತರು ಅಯ್ಕೆಯಾದ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿ ಮಾತನಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಈ ನಿಟ್ಟಿನಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಂಘದಲ್ಲಿ ಕ್ರಿಯಾಶೀಲ ಪತ್ರಕರ್ತರಿಗೆ ಅವಕಾಶ ನೀಡುತ್ತಾ ಬಂದಿದೆ. ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು ತಮ್ಮ ಕರ್ತವ್ಯದ ಜೊತೆ ಜೊತೆಗೆ ಸಹಕಾರಿ ಸಂಘ ಸೇರಿದಂತೆ ಇನ್ನಿತರ ಸಂಘ- ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಆಯ್ಕೆಯಾದ ಸಂಸ್ಥೆಯಲ್ಲಿ ಪತ್ರಕರ್ತರು ಕೆಲಸವನ್ನು ಪಾರದರ್ಶಕತೆಯಿಂದ ನಿರ್ವಹಿಸಬೇಕು. ಸಾರ್ವಜನಿಕರು ನಿಮ್ಮ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದು, ಆ ನಂಬಿಕೆ ಉಳಿಸುವ ಪ್ರಯತ್ನ ಮಾಡಿ, ಬೇಲೂರು ಪತ್ರಕರ್ತರ ಸಂಘದ ಐವರು ಅರ್ಬನ್ ಬ್ಯಾಂಕಿಗೆ ಚುನಾಯಿತರಾಗಿ ಒಬ್ಬರು ಅಧ್ಯಕ್ಷರಾಗಿದ್ದು ಇಡೀ ರಾಜ್ಯದಲ್ಲಿಯೇ ಪ್ರಥಮವಾಗಿದೆ ಎಂದು ತಿಳಿಸಿದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಘುನಾಥ್, ಜಿಲ್ಲಾ ಉಪಾಧ್ಯಕ್ಷ ಡಿ.ಬಿ.ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಬಿ.ಶಿವರಾಜ್, ಉಪಾಧ್ಯಕ್ಷ ಜಗದೀಶ್, ಖಜಾಂಚಿ ಎನ್.ಅನಂತು, ಮಾಜಿ ಅಧ್ಯಕ್ಷರಾದ ಎ. ರಾಘವೇಂದ್ರ ಹೊಳ್ಳ, ಹೆಬ್ಬಾಳು ಹಾಲಪ್ಪ, ಪದಾಧಿಕಾರಿಗಳಾದ ಮಲ್ಲೇಶ್, ಬಿ.ಎಲ್.ಲಕ್ಷ್ಮಣ್, ಎಂ.ಸಿ,ಕುಮಾರ್, ಆರ್.ವೆಂಕಟೇಶ್,ಪೈಂಟ್ ರವಿ, ನಂದಕುಮಾರ್, ಹರೀಶ್, ಗಣೇಶ್, ಲೋಹಿತ್, ಮಹೇಶ್, ವಿಜಯಕುಮಾರ್, ಹಗರೆ ಚಂದ್ರು, ನಿಂಗರಾಜ್, ರವಿಹೊಳ್ಳ, ಆರಾಧ್ಯ, ಮಹೇಶಗೌಡ, ರಮೇಶ್, ಸಂತೋಷ ಹಾಜರಿದ್ದ ಕಾರ್ಯಕ್ರಮದಲ್ಲಿ ಅರ್ಬನ್ ಬ್ಯಾಂಕಿಗೆ ಚುನಾಯಿತರಾದ ಅಧ್ಯಕ್ಷ ಪೈಂಟ್ ರವಿ, ನಿರ್ದೇಶಕರಾದ ಬಿ.ಬಿ.ಶಿವರಾಜ್, ಬಿ.ಎಲ್.ಲಕ್ಷ್ಮಣ್, ವಿಜಯಕುಮಾರ್ ಇವರಿಗೆ ಅಭಿನಂದನೆ ಸಲ್ಲಿಸಲಾಯಿತು.,,............

--

ಧರ್ಮಸ್ಥಳ ಸೌಜನ್ಯ ಸಾವಿನ ಬಗ್ಗೆ ನ್ಯಾಯ ದೊರಕಿಸಿಕೊಡುವುದು ಎಲ್ಲರ ಕರ್ತವ್ಯ. ಆದರೆ ಇದರಲ್ಲಿ ಧರ್ಮವನ್ನು ಬಿಂಬಿಸಿ ಒಂದು ಸಮುದಾಯಕ್ಕೆ ಅಪಮಾನ ಮಾಡುವುದು ಸರಿಯಲ್ಲ. ಇಲ್ಲಿ ನ್ಯಾಯಕ್ಕೆ ಎಂದೂ ಸಾವಿಲ್ಲ, ಆದರೆ ಧರ್ಮದ ವಿಷ ಬೀಜ ಬಿತ್ತಿ ಎರಡು ಸಮುದಾಯಗಳ ನಡುವೆ ಕಂದಕ ನಿರ್ಮಾಣ ಮಾಡುತ್ತಿರುವುದು ವಿಷಾಧನೀಯ . ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಪತ್ರಕರ್ತರು ವಸ್ತು ನಿಷ್ಠತೆಯಿಂದ ಕೆಲಸ ಮಾಡಬೇಕು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಬಿ.ಮದನ್‌ಗೌಡ .