ಪ್ರಾಮಾಣಿಕತೆ ಮೆರೆದ ಸಾರಿಗೆ ಬಸ್ ಸಿಬ್ಬಂದಿ

| Published : Nov 06 2024, 11:47 PM IST

ಸಾರಾಂಶ

ಮಳವಳ್ಳಿ ಪಟ್ಟಣದಿಂದ ಹಲಗೂರಿಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಮರೆತು ಹೋಗಿದ್ದ ಸುಮಾರು 4 ಲಕ್ಷ ರು. ಬ್ಯಾಗ್ ಹಾಗೂ ದಾಖಲಾತಿಗಳನ್ನು ವಾಪಸ್ ಮಾಲೀಕರಿಗೆ ನೀಡುವ ಮೂಲಕ ಸಾರಿಗೆ ಸಿಬ್ಬಂದಿ ಪ್ರಾಮಾಣಿಕತೆ ಮರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದಿಂದ ಹಲಗೂರಿಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಮರೆತು ಹೋಗಿದ್ದ ಸುಮಾರು 4 ಲಕ್ಷ ರು. ಬ್ಯಾಗ್ ಹಾಗೂ ದಾಖಲಾತಿಗಳನ್ನು ವಾಪಸ್ ಮಾಲೀಕರಿಗೆ ನೀಡುವ ಮೂಲಕ ಸಾರಿಗೆ ಸಿಬ್ಬಂದಿ ಪ್ರಾಮಾಣಿಕತೆ ಮರೆದಿದ್ದಾರೆ.

ತಮಗೆ ಸಿಕ್ಕ ಹಣದ ಬ್ಯಾಗ್ ಮತ್ತು ದಾಖಲಾತಿಗಳನ್ನು ಸಂಬಂಧಿಸಿದವರಿಗೆ ಮರಳಿಸುವ ಮೂಲಕ ಸಾರಿಗೆ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮೆರೆದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಮಳವಳ್ಳಿಯಿಂದ ಹಲಗೂರಿಗೆ ಹೋಗುವ ಬಸ್‌ನಲ್ಲಿ ಪ್ರಯಾಣಿಕರಾದ ವಿಜಯಾಂಭ ಮತ್ತು ಬಸವಯ್ಯ ಎಂಬುವವರು ಇಳಿಯುವಾಗ ಅವಸರದಲ್ಲಿ ತಮ್ಮ ಬಳಿಯಿದ್ದ 4 ಲಕ್ಷ ರು. ಗಳಿದ್ದ ಬ್ಯಾಗನ್ನು ಮರೆತು ಇಳಿದಿದ್ದಾರೆ. ನಂತರ ಹಲಗೂರಿನಿಂದ ರಾಮನಗರಕ್ಕೆ ಹೋಗಲು ಬಸ್ ಹತ್ತುವ ವೇಳೆ ಹಣ ಬ್ಯಾಗ್ ಇಲ್ಲದನ್ನು ಗಮನಿಸಿದ್ದಾರೆ.

ಆ ವೇಳೆಗಾಗಲೇ ಹಲಗೂರಿನಿಂದ ಮಳವಳ್ಳಿಗೆ ವಾಪಸ್ ಆಗಿದ್ದ ಬಸ್ ನಲ್ಲಿದ್ದ ಬ್ಯಾಗ್ ಪರಿಶೀಲಿಸಿದ ಚಾಲಕ ಜಯರಾಮು ಮತ್ತು ನಿರ್ವಾಹಕ ಆನಂದ್ ಹಣ ಇರುವುದನ್ನು ಗಮನಿಸಿ ಸಂಚಾರಿ ನಿರೀಕ್ಷ ಕುಮಾರ್ ಗಮನಕ್ಕೆ ತಂದಿದ್ದಾರೆ.‌

ಹಲಗೂರು ಪೊಲೀಸ್ ಸಿಬ್ಬಂದಿ ಮೂಲಕ ಪಟ್ಟಣದ ಸಾರಿಗೆ ಅಧಿಕಾರಿಗಳನ್ನು ಸಂಪರ್ಕಿಸಿದ್ದ ಹಣ ಕಳೆದುಕೊಂಡಿದ್ದ ವಿಜಯಾಂಭ ಮತ್ತು ಬಸವಯ್ಯರಿಗೆ ಚಾಲಕ ಜಯರಾಮು ಮತ್ತು ನಿರ್ವಾಹಕ ಆನಂದ್ ಅವರು ಸಾರಿಗೆ ಅಧಿಕಾರಿಗಳಾದ ಎಸ್.ನಾಗರಾಜು, ಕುಮಾರ್, ಮಹೇಶ್ ಅವರ ಸಮ್ಮುಖದಲ್ಲಿ ದಾಖಲೆಗಳನ್ನು ಪರಿಶೀಲಿಸಿ ಹಣವನ್ನು ವಾಪಸ್‌ ನೀಡಿದ್ದಾರೆ.