ಸಾರಾಂಶ
ಚಳ್ಳಕೆರೆ: ಸರ್ಕಾರ ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳನ್ನು ಗುರುತಿಸಿ, ಇಲಾಖೆ ಮೂಲಕ ಅವರಿಗೆ ಸೌಲಭ್ಯವನ್ನು ಪ್ರಾಮಾಣಿಕವಾಗಿ ತಲುಪಿಸುವ ಕಾರ್ಯವನ್ನು ನಿರಂತರ ಮಾಡುತ್ತಿದೆ. ವಿಕಲಚೇತನರು, ಕಾರ್ಮಿಕರು ಹಲವಾರು ವರ್ಗಗಳಿಗೆ ಸರ್ಕಾರದ ನೆರವು ತಲುಪಿಸುವ ಕಾರ್ಯವನ್ನು ಅಧಿಕಾರಿವರ್ಗ ಪ್ರಾಮಾಣಿಕವಾಗಿ ಮಾಡಬೇಕೆಂದು ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ತಿಳಿಸಿದರು.
ಅವರು, ಬುಧವಾರ ಶಾಸಕ ಭವನದಲ್ಲಿ ಕಾರ್ಮಿಕ ಇಲಾಖೆಯಿಂದ ವೆಲ್ಡರ್ ಮತ್ತು ಟೈಲ್ಸ್ ಜೋಡಣೆಯ ಒಟ್ಟು 30 ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ನೀಡಿದ ಕಿಟ್ ವಿತರಿಸಿ ಮಾತನಾಡಿದರು. ಕಾರ್ಮಿಕ ಇಲಾಖೆ ಕಳೆದ ಹಲವಾರು ವರ್ಷಗಳಿಂದ ಜ್ಯೇಷ್ಠತೆ ಮೇಲೆ ಆಯ್ಕೆಯಾದ ಕಾರ್ಮಿಕರಿಗೆ ಸೌಲಭ್ಯ ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಸೌಲಭ್ಯ ನೀಡುವ ಭರವಸೆ ನೀಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಮಿಕ ಅಧಿಕಾರಿ ಕುಸುಮ, ಶಾಸಕ ಮಾರ್ಗದರ್ಶನದಲ್ಲಿ ಈಗಾಗಲೇ ಜ್ಯೇಷ್ಠತೆ ಆಧಾರದ ಮೇಲೆ ವೆಲ್ಡರ್ ಮತ್ತು ಟೈಲ್ಸ್ ಜೋಡಣೆಯ ಕಾರ್ಮಿಕರಿಗೆ ಇಲಾಖೆಯಿಂದ ನೀಡಲಾದ ಕಿಟ್ ನೀಡಲಾಗಿದೆ. 50 ಅರ್ಜಿಗಳು ಬಂದಿದ್ದು, ಜ್ಯೇಷ್ಠತೆ ಆಧಾರದ ಮೇಲೆ ಫಲಾನುಭವಿಗಳನ್ನು ಗುರುತಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಸುಮಾರು ₹1.20ಲಕ್ಷ ಮೌಲ್ಯದ ಮೂರು ಬ್ಯಾಟರಿ ಚಾಲಿತ ವೀಲ್ಹ್ ಚೇರ್‌ಗಳನ್ನು ಮೂವರು ಅಂಗವಿಕಲರಿಗೆ ಶಾಸಕರು ವಿತರಿಸಿ ಮಾತನಾಡಿ, ವಿಕಲಾಂಗ ಚೇತನರ ಬಗ್ಗೆ ಎಲ್ಲರೂ ಸಹಾನುಭೂತಿ ಹೊಂದಿರಬೇಕು ಎಂದರು.ನಗರಸಭೆ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ಸುಜಾತ, ಕೆ. ವೀರಭದ್ರಪ್ಪ, ಎಂ.ಜೆ. ರಾಘವೇಂದ್ರ, ಬಿ.ಟಿ. ರಮೇಶ್‌ಗೌಡ, ಸುಮಕ್ಕ, ಕವಿತಾ, ನಾಮಿನಿ ಸದಸ್ಯರಾದ ಬಡಿಗಿಪಾಪಣ್ಣ, ಆರ್. ವೀರಭದ್ರಪ್ಪ, ನಟರಾಜ, ನೇತಾಜಿ ಪ್ರಸನ್ನ, ಅನ್ವರ್‌ಮಾಸ್ಟರ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಇಒ.ಎಚ್. ಶಶಿಧರ ಮುಂತಾದವರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))