ಸಾರಾಂಶ
ತಾಲೂಕಿನ ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಜಲ ದಿನಾಚರಣೆಯನ್ನು ವಿನೂತನವಾಗಿ ಆಚರಿಸಿ ಗಮನ ಸೆಳೆದಿದ್ದಾರೆ.
ಗುಂಡ್ಲುಪೇಟೆ: ತಾಲೂಕಿನ ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಜಲ ದಿನಾಚರಣೆಯನ್ನು ವಿನೂತನವಾಗಿ ಆಚರಿಸಿ ಗಮನ ಸೆಳೆದಿದ್ದಾರೆ.
ಶಾಲೆಯ ವಿದ್ಯಾರ್ಥಿಗಳು ಮಧ್ಯಾಹ್ನದ ಊಟ ಮಾಡಿದ ತಟ್ಟೆ, ಲೋಟ ತೊಳೆದ ನೀರನ್ನು ಮುಖ್ಯ ಶಿಕ್ಷಕ ಬಿ.ಮಹದೇಶ್ವರಸ್ವಾಮಿ ಸಲಹೆಯಂತೆ ಶಾಲೆಯ ಆವರಣದ ಗಿಡಕ್ಕೆ ಹಾಕುವ ಮೂಲಕ ವಿಶ್ವ ಜಲ ದಿನಾಚರಣೆ ಆಚರಿಸಿದರು. ವಿಶ್ವ ಜಲ ದಿನಾಚರಣೆಯಲ್ಲಿ ಮುಖ್ಯ ಶಿಕ್ಷಕ ಬಿ.ಮಹದೇಶ್ವರಸ್ವಾಮಿ ಮಾತನಾಡಿ, ಜಗತ್ತಿನ ಪ್ರತಿಯೊಂದು ಜೀವರಾಶಿಗೂ ಅತ್ಯವಶ್ಯಕವಾಗಿ ಶುದ್ಧ ಗಾಳಿ, ನೀರು, ಆಹಾರ ಬೇಕು ಎಂದರು. ಎಲ್ಲರಿಗೂ ನೀರು ಬಹಳ ಮುಖ್ಯ. ನಿತ್ಯ ಜೀವನದಲ್ಲಿ ನೀರನ್ನು ಮಿತವಾಗಿ ಬಳಸಬೇಕು. ಹಾಗೂ ಪುನರ್ಬಳಕೆ ಮಾಡುವ ಮೂಲಕ ಜೀವಜಲ ಉಳಿಸುವ ಮೂಲಕ ಮುಂದಿನ ಪೀಳಿಗೆಗೆ ಕೊಡುಗೆ ನೀಡೋಣ ಎಂದರು. ಮನುಷ್ಯನ ದುರಾಸೆಯಿಂದ ಕೆರೆ, ಕಟ್ಟೆ, ಬಾವಿ, ನದಿಗಳೆಲ್ಲ ನಾಶವಾಗುತ್ತಿವೆ. ಹೀಗೆಯೇ ಮುಂದುವರೆದರೆ ಮುಂದೊಂದು ದಿನ ನೀರಿಗಾಗಿ ಪರಿತಪಿಸಬೇಕಾಗುತ್ತದೆ ಎಂದರು.ನೀರನ್ನು ಅನಾವಶ್ಯಕವಾಗಿ ಪೋಲು ಮಾಡದೆ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ಮಕ್ಕಳಿಗೆ ತಿಳಿ ಹೇಳಿದರು. ಶಾಲೆಯ ಶಿಕ್ಷಕರಾದ ನಂದಿನಿ, ವಿನೋದ, ಕವಿತ ಹಾಗೂ ಶಾಲೆಯ ಮಕ್ಕಳು ಹಾಜರಿದ್ದರು.
ಹೊಂಗಹಳ್ಳಿ ಸರ್ಕಾರಿ ಶಾಲೆಯ ಮಕ್ಕಳು ವಿಶ್ವ ಜಲ ದಿನಾಚರಣೆಯಲ್ಲಿ ತಟ್ಟೆ, ಲೋಟ ತೊಳೆದ ನೀರನ್ನು ಗಿಡಗಳಿಗೆ ಹಾಕಲಾಯಿತು.