ಸಾರಾಂಶ
ವಿವಿಧ ರಂಗಗಳಲ್ಲಿ ತೆರೆಮರೆಯಲ್ಲಿ ಸೇವೆಗೈದ ಹಲವು ಸಾಧಕರಿಗೆ ಹೊಂಗನಸು ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣ
ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಹಸ್ತ ಚಾಚುವ, ವೃದ್ಧರು ಮತ್ತು ರೋಗಿಗಳ ಆರೈಕೆ ಮಾಡುವ ಗೃಹಸ್ಥಾಶ್ರಮ, ದೀನದಲಿತ ಜನರಿಗೆ ನ್ಯಾಯ ಒದಗಿಸುವ ಹಾಗೂ ಕನ್ನಡಪರ ಹೋರಾಟಗಾರರು ಸೇರಿದಂತೆ ವಿವಿಧ ರಂಗಗಳಲ್ಲಿ ತೆರೆಮರೆಯಲ್ಲಿ ಸೇವೆಗೈದ ಹಲವು ಸಾಧಕರಿಗೆ ಹೊಂಗನಸು ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ರಾಜರಾಜೇಶ್ವರಿನಗರ ಕ್ಷೇತ್ರದ ಮಲ್ಲತ್ತಹಳ್ಳಿ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಚಯದಲ್ಲಿ ಹಮ್ಮಿಕೊಂಡಿದ್ದ ಹೊಂಗನಸು ಸೇವಾ ಟ್ರಸ್ಟ್‌ನ 2ನೇ ವರ್ಷದ ವಾರ್ಷಿಕೋತ್ಸವ ಹಾಗೂ ಹೊಂಗನಸು ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಹೊಂಗನಸು ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಜೆ.ರಾಮು, ಜೀ ಕನ್ನಡ ಸರಿಗಮ ಖ್ಯಾತಿಯ ಗಾಯಕ ಅನಿಲ್ ಕುಮಾರ್, ಡ್ರಾಮಾ ಜ್ಯೂನಿಯರ್ ಮತ್ತು ಕಾಮಿಡಿ ಕಿಲಾಡಿಗಳು ಮಾರ್ಗದರ್ಶಕ ಗಣಪತಿಗೌಡ, ನಿವೃತ್ತ ಡಿವೈಎಸ್ಪಿ ಪ್ರಸನ್ನ ವಿ.ರಾಜು, ಕಾನೂನು ಕಾಲೇಜು ಪ್ರಾಂಶುಪಾಲೆ ಡಾ। ದೇವಿಕಾ ಎಸ್.ಅಜಿಲ, ಹೈಕೋರ್ಟ್ ನಿವೃತ್ತ ವಕೀಲ ಎಂ.ವಿ.ಹಿರೇಮಠ್, ಸಂಗೀತ ಶಿಕ್ಷಕ ಈರಯ್ಯ, ಅಂತಾರಾಷ್ಟ್ರೀಯ ದೇಹದಾರ್ಢ್ಯಗಾರ ಉಮೇಶ್, ಅನಾಥಶ್ರಮಗಳ ವಾರಸುದಾರ ಪುನೀತ್, ಕನ್ನಡ ಪರ ಹೋರಾಟಗಾರ ಸತೀಶ್ ಕುಮಾರ್ ಇದ್ದರು.
ಬಿ.ಸಿ.ವೈನವಿ, ಎಸ್.ಧೃತಿಪ್ರಸಾದ್ ಮತ್ತು ಶ್ರೇಯ ವಿದ್ಯಾರ್ಥಿಗಳಿಂದ ಭರತನಾಟ್ಯ ಹಮ್ಮಿಕೊಳ್ಳಲಾಗಿತ್ತು.