ಆನ್ ಲೈನ್‌ನಲ್ಲಿ ಔಷಧ ವ್ಯಾಪಾರದಿಂದಾಗಿ ಮಾದಕ, ಅಮಲು ಬರಿಸುವ ಮುಂತಾದ ಔಷಧಿಗಳು ಸುಲಭವಾಗಿ ಯುವಜನರ ಕೈಗೆ ಸಿಗುವಂತಾಗಿದೆ. ಇದರಿಂದ ಯುವಜನಾಂಗ ದಾರಿ ತಪ್ಪುವಂತಾಗಿದೆ ಎಂದು ತಾಲೂಕು ಔಷಧ ಮಾರಾಟಗಾರರ ಸಂಘದ ಗೌರವಾಧ್ಯಕ್ಷ ದತ್ತಾತ್ರೇಯ ವೈಶ್ಯರ್ ಹೇಳಿದ್ದಾರೆ.
ಹೊನ್ನಾಳಿ: ಆನ್ ಲೈನ್‌ನಲ್ಲಿ ಔಷಧ ವ್ಯಾಪಾರದಿಂದಾಗಿ ಮಾದಕ, ಅಮಲು ಬರಿಸುವ ಮುಂತಾದ ಔಷಧಿಗಳು ಸುಲಭವಾಗಿ ಯುವಜನರ ಕೈಗೆ ಸಿಗುವಂತಾಗಿದೆ. ಇದರಿಂದ ಯುವಜನಾಂಗ ದಾರಿ ತಪ್ಪುವಂತಾಗಿದೆ ಎಂದು ತಾಲೂಕು ಔಷಧ ಮಾರಾಟಗಾರರ ಸಂಘದ ಗೌರವಾಧ್ಯಕ್ಷ ದತ್ತಾತ್ರೇಯ ವೈಶ್ಯರ್ ಹೇಳಿದರು.
ತಾಲೂಕು ಔಷಧ ಮಾರಾಟಗಾರರ ಸಂಘ ವತಿಯಿಂದ ಆನ್ ಲೈನ್ ಔಷಧ ಮಾರಾಟ ವ್ಯವಸ್ಥೆ ಖಂಡಿಸಿ ಬುಧವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಆನ್‌ಲೈನ್ ಔಷಧ ಮಾರಾಟ ವ್ಯವಸ್ಥೆ ವಿರುದ್ಧ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಖಜಾಂಚಿ ಹಾಗೂ ಔಷಧ ವ್ಯಾಪಾರಿಗಳಾದ ಪ್ರಕಾಶ್ ಹೆಬ್ಬಾರ್ ಮಾತನಾಡಿ, ಜನರಿಗೆ 24 ಗಂಟೆ ಆರೋಗ್ಯ ಸೇವೆ ಸಲ್ಲಿಸುತ್ತಿರುವವರು ಮತ್ತು ತುರ್ತು ಸಂದರ್ಭಗಳಲ್ಲಿ ಔಷಧಗಳನ್ನು ನೀಡುವಲ್ಲಿ ಸ್ಥಳೀಯ ಫಾರ್ಮಸಿಸ್ಟ್ ಗಳ ಪಾತ್ರ ಮುಖ್ಯವಾಗಿದೆ. ತುರ್ತು ಸಂದರ್ಭದಲ್ಲಿ ಯಾವುದೇ ಆನ್ ಲೈನ್ ಸೇವೆಗಳು ಉಪಯೋಗಕ್ಕೆ ಬರುವುದಿಲ್ಲ. ಆದ್ದರಿಂದ ಸ್ಥಳೀಯ ಫಾರ್ಮಸಿಸ್ಟ್‌ಗಳ ಸೇವೆ ಬಹಳ ಅತ್ಯಗತ್ಯ ಹಾಗೂ ಸುರಕ್ಷಿತವೂ ಆಗಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಶೈಲೇಶ್ ಕುಮಾರ್ ಮಾತನಾಡಿದರು. ಔಷಧ ಮಾರಾಟಗಾರರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಸ್ವಾಮಿ ನೇತೃತ್ವದಲ್ಲಿ ತಾಲೂಕಿನ ಎಲ್ಲ ಔಷಧ ಮಾರಾಟಗಾರರು ತೋಳಿಗೆ ಕಪ್ಪುಬಟ್ಟೆ ಧರಿಸಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಾಲೂಕು ಕಚೇರಿಗೆ ತೆರಳಿ ಗ್ರೇಡ್ -2 ತಹಸೀಲ್ದಾರ್ ಸುರೇಶ್ ಅವರಿಗೆ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದರು.ಕಾರ್ಯದರ್ಶಿ ಜಗದೀಶ್, ಸದಸ್ಯರಾದ ಸುರೇಶ್, ಶ್ರಿನಿವಾಸ್, ರಂಗನಾಥ್, ನೂರುಲ್ಲಾ, ವೀರೇಶ್, ಅನಿಲ್, ನಂದನ್, ಹರೀಶ್, ಲಿಂಗರಾಜ್, ಮತ್ತಿತರರು ಇದ್ದರು.
- - -(** ಈ ಪೋಟೋ-ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಿ)
-20ಎಚ್.ಎಲ್.ಐ1:ಆನ್ ಲೈನ್ ಔಷಧ ವ್ಯಾಪಾರ ಖಂಡಿಸಿ ಹೊನ್ನಾಳಿಯಲ್ಲಿ ತಾಲೂಕು ಔಷಧ ಮಾರಾಟಗಾರರ ಸಂಘದಿಂದ ಬುಧವಾರ ತೋಳಿಗೆ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ನಡೆಸಿ, ಗ್ರೇಡ್-2 ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.