ಸಾರಾಂಶ
ಹೊನ್ನಾಳಿ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ. ಆಡಳಿತ ಮಂಡಳಿ ಸಾಮಾನ್ಯ ಚುನಾವಣೆ ಜ.12ಕ್ಕೆ ನಿಗದಿಯಾಗಿದ್ದು, ಪಟ್ಟಣದ ಶ್ರೀ ಮೃತ್ಯುಂಜಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣೆ ನಡೆಯಲಿದೆ.
- ಶ್ರೀ ಮೃತ್ಯುಂಜಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾನ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹೊನ್ನಾಳಿ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ. ಆಡಳಿತ ಮಂಡಳಿ ಸಾಮಾನ್ಯ ಚುನಾವಣೆ ಜ.12ಕ್ಕೆ ನಿಗದಿಯಾಗಿದ್ದು, ಪಟ್ಟಣದ ಶ್ರೀ ಮೃತ್ಯುಂಜಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣೆ ನಡೆಯಲಿದೆ.ಸಾಲಗಾರರ ಕ್ಷೇತ್ರದಿಂದ 11 ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ 1 ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬೆಳಗ್ಗೆ 9ರಿಂದ ಸಂಜೆ 4 ಗಂಟೆವರಿಗೆ ಮತದಾನ ನಡೆಯಲಿದೆ. ಅದೇ ದಿನ ಮತ ಎಣಿಕೆ ಹಾಗೂ ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ ಎಂದು ಚುನಾವಣಾಧಿಕಾರಿ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ ನವೀನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಅಭ್ಯರ್ಥಿಗಳಿಂದ ಡಿ.27ರಿಂದ ಜ.4 ರವರೆಗೆ ನಾಮಪತ್ರ ಸಲ್ಲಿಕೆಯಾಗಿದ್ದು, ಒಟ್ಟು 50 ನಾಮಪತ್ರಗಳು ಸಲ್ಲಿಕೆಯಾಗಿ, ಜ.5ರಂದು ನಾಮಪತ್ರ ಪರಿಶೀಲನೆ ನಡೆದಿದೆ. ಸಲ್ಲಿಕೆಯಾದ ಎಲ್ಲ 50 ನಾಮಪತ್ರಗಳು ಸ್ವಿಕೃತಿಯಾಗಿವೆ. ಅನಂತರ ಜ.6 ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕವಾಗಿತ್ತು, ಅಂದು 29 ಜನ ನಾಮಪತ್ರ ವಾಪಸ್ ಪಡೆದಿದ್ದಾರೆ. ಉಳಿದ 21 ಜನರ ಪೈಕಿ 7 ಅವಿರೋಧ ಆಯ್ಕೆಯಾಗಿದ್ದು, ಉಳಿದ 14 ಜನ ಅಂತಿಮವಾಗಿ ಕಣದಲ್ಲಿದ್ದಾರೆ. 5 ಕ್ಷೇತ್ರಗಳಿಗಾಗಿ ಜ.12ರಂದು ಚುನಾವಣೆ ನಡೆಯಲಿದೆ. ಒಟ್ಟು 12 ಸ್ಥಾನಗಳಿಂದ 1332 ಮತದಾರರಿದ್ದು, ಈ ಪೈಕಿ 7 ಅವಿರೋಧ ಆಯ್ಕೆ ಆಗಿರುವ ಕಾರಣ ಇನ್ನುಳಿದ 5 ಕ್ಷೇತ್ರಗಳಿಂದ 432 ಮತದಾರರು ನಿರ್ದೇಶಕರನ್ನು ಆಯ್ಕೆ ಮಾಡಬೇಕಾಗಿದೆ ಎಂದಿದ್ದಾರೆ.ಯಶಸ್ವಿನಿ ಆರೋಗ್ಯ ಕಾರ್ಡ್ ನೋಂದಣೆ:
ಎಲ್ಲ ಸಹಕಾರಿ ಕ್ಷೇತ್ರದಲ್ಲಿನ ಸದಸ್ಯರು ಯಶಸ್ವಿನಿ ಆರೋಗ್ಯ ಕಾರ್ಡ್‌ಗಳನ್ನು ತಮಗೆ ಸಂಬಂಧಿಸಿದ ಸಹಕಾರ ಸಂಘಗಳ ಮೂಲಕ ಅಗತ್ಯ ದಾಖಲೆ ಮತ್ತು ಫೀ ಸಲ್ಲಿಸಿ, ಹೆಸರುಗಳನ್ನು ನೋಂದಾಯಿಸಲು ಜ.31 ಕೊನೆ ದಿನಾಂಕವಾಗಿದೆ. ಎಲ್ಲ ಸಹಕಾರಿ ಸದಸ್ಯರು ಸರ್ಕಾರದ ಈ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.- - - (ಸಾಂದರ್ಭಿಕ ಚಿತ್ರ)