ಸಾರಾಂಶ
- ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಡಾ.ರಾಜಕುಮಾರ್ - - - ನ್ಯಾಮತಿ: ಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯು 2023- 2024ನೇ ಸಾಲಿನಲ್ಲಿ ₹1,07,68,238.55 ನಿವ್ವಳ ಲಾಭಾಂಶ ಗಳಿಸಿದೆ. ನ್ಯಾಮತಿಯಲ್ಲಿ ಭವ್ಯವಾದ ಶಾಖೆಯ ಕಟ್ಟಡವು ನಿರ್ಮಾಣವಾಗುತ್ತಿದೆ. ಅಲ್ಲಿಯೇ ಸೊಸೈಟಿಯ ಬೆಳ್ಳಿಹಬ್ಬ ಆಚರಿಸಲು ನಿರ್ಧರಿಸಿದ್ದೇವೆ ಎಂದು ಸೊಸೈಟಿ ಅಧ್ಯಕ್ಷ ಡಾ.ರಾಜಕುಮಾರ್ ಹೇಳಿದರು.
ಪಟ್ಟಣದ ಹಿರೇಕಲ್ಮಠದ ಶ್ರೀ ಚನ್ನಪ್ಪಸ್ವಾಮಿ ಸಮುದಾಯ ಭವನದಲ್ಲಿ ಭಾನುವಾರ ಹೊನ್ನಾಳಿ ಅರ್ಬನ್ ಕ್ರೆಡಿಟ್ ಆಪರೇಟಿವ್ ಸೊಸೈಟಿಯ 2023- 2024ನೇ ಸಾಲಿನ 25ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸದಸ್ಯರಿಗೆ ಶೇ.12ರಷ್ಟು ಡಿವಿಡೆಂಟನ್ನು ಪ್ರಸಕ್ತ ಸಾಲಿನಲ್ಲಿ ನೀಡಲಾಗುತ್ತಿದೆ. ಸಂಘದಲ್ಲಿ ಒಟ್ಟು 3301 ಸದಸ್ಯರಿದ್ದಾರೆ. ಒಟ್ಟು ಷೇರು ಬಂಡವಾಳ ₹51,81,800 ಸಂಗ್ರಹವಾಗಿದೆ. ಹೊನ್ನಾಳಿ, ನ್ಯಾಮತಿ, ಸಾಸ್ವೇಹಳ್ಳಿ ಸಂಘಗಳ ಸದಸ್ಯರ ಉದ್ಧಾರಕ್ಕಾಗಿ ವಿವಿಧ ರೀತಿಯ ಸಾಲ ಸೌಲಭ್ಯವನ್ನು ನೀಡುತ್ತಿದ್ದೇವೆ. ಈಗ ₹30,21,044 ಸಾಲ ವಿತರಿಸಲಾಗಿದೆ. ವರ್ಷದ ಅಂತ್ಯಕ್ಕೆ ಬರಬೇಕಾದ ಬಾಕಿ ₹24,33,51,725 ಇದೆ ಎಂದು ಹೇಳಿದರು.
ಬ್ಯಾಂಕಿನ ಹೊನ್ನಾಳಿ, ನ್ಯಾಮತಿ, ಸಾಸ್ವೇಹಳ್ಳಿಯ ಸಿಬ್ಬಂದಿಗೆ ಹಾಗೂ ಸದಸ್ಯರಿಗೆ ಮುಂದಿನ ದಿನಗಳಲ್ಲಿ ಬೆಳ್ಳಿಹಬ್ಬದ ರಜತ ಮಹೋತ್ಸವದಲ್ಲಿ ಸನ್ಮಾನಿಸಲಾಗುವುದು. ಈ ಸಮಯದಲ್ಲಿ ಬ್ಯಾಂಕಿನ ಸದಸ್ಯರ ಮಕ್ಕಳು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಿಗದಿತ ಸಮಯಕ್ಕೆ ಪಡೆದ ಸಾಲವನ್ನು ಮರುಪಾವತಿ ಮಾಡಿದ ಸದಸ್ಯರಿಗೆ ಉಡುಗೊರೆ ನೀಡಲಾಯಿತು. ಸಂಘದ ಸದಸ್ಯರು ಅಭಿಪ್ರಾಯಗಳನ್ನು ವ್ಯಕ್ತಿಪಡಿಸಿ ಸಲಹೆ ಸಹಕಾರ ನೀಡಿದರು.ಸಂಘದ ಉಪಾಧ್ಯಕ್ಷ ಹಲಗೇರಿ ವೀರೇಶ್, ಜಿ.ಆರ್.ಪ್ರಕಾಶ್, ಎನ್.ಜಯರಾಮ್, ಎಚ್.ಎಂ. ಶಿವಮೂರ್ತಿ, ಡಾ. ಬಿ.ಎಚ್. ರಾಜನಾಯ್ಕ, ಎಚ್.ಬಿ. ಮೋಹನ್, ಕೆ.ಆರ್. ನಾಗರಾಜ್, ಬಿ.ಎಚ್. ಉಮೇಶ್, ಎಚ್.ಎಂ. ಅರುಣಕುಮಾರ್, ಎನ್.ಪ್ರಸಾದ, ಎಚ್.ಕೆ. ರೂಪ, ಎನ್.ಎಸ್. ನಾಗರತ್ನ, ಡಿ.ಎಸ್. ಶಾಂತಲಾ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಿಕೆ.ರವಿ, ಎಚ್.ವಿರೇಶ್ ಸ್ವಾಗತಿಸಿದರು. ಡಿ.ಎಂ.ಶಾಂತಲಾ ಸಂಗಡಿಗರು ಪ್ರಾರ್ಥಿಸಿದರು. ರವಿಕುಮಾರ್ ನಿರೂಪಿಸಿ, ವಂದಿಸಿದರು.- - -(-ಫೋಟೋ:)
ಹೊನ್ನಾಳಿ ಅರ್ಬನ್ ಸೊಸೈಟಿ ವಾರ್ಷಿಕ ಸಭೆ ಗಣ್ಯರು ಉದ್ಘಾಟಿಸಿದರು.;Resize=(128,128))
;Resize=(128,128))