ನಿಸ್ವಾರ್ಥ ಸೇವೆಯಿಂದ ಗೌರವ; ಪತ್ರೆ ಶೈಲಜಾ ಸದಾಶಿವನ್

| Published : Jul 05 2024, 12:48 AM IST

ನಿಸ್ವಾರ್ಥ ಸೇವೆಯಿಂದ ಗೌರವ; ಪತ್ರೆ ಶೈಲಜಾ ಸದಾಶಿವನ್
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರು, ಮನುಷ್ಯನು ಕೈಗೊಳ್ಳುವ ನಿಸ್ವಾರ್ಥ ಸೇವೆ ಅವನನ್ನು ಸಮಾಜದಲ್ಲಿ ಎತ್ತರಕ್ಕೆ ಕೊಂಡೊಯುತ್ತದೆ ಎಂದು ಪತ್ರೆ ಶೈಲಜಾ ಸದಾಶಿವನ್ ಅಭಿಪ್ರಾಯಪಟ್ಟರು.

ಇನ್ನರ್ ವ್ಹೀಲ್‌ನ ನೂತನ ಅಧ್ಯಕ್ಷೆಯಾಗಿ ನಳಿನಿನಾಗರಾಜ್

ಕನ್ನಡಪ್ರಭವಾರ್ತೆ, ಬೀರೂರು

ಮನುಷ್ಯನು ಕೈಗೊಳ್ಳುವ ನಿಸ್ವಾರ್ಥ ಸೇವೆ ಅವನನ್ನು ಸಮಾಜದಲ್ಲಿ ಎತ್ತರಕ್ಕೆ ಕೊಂಡೊಯುತ್ತದೆ ಎಂದು ಪತ್ರೆ ಶೈಲಜಾ ಸದಾಶಿವನ್ ಅಭಿಪ್ರಾಯಪಟ್ಟರು.ಪಟ್ಟಣದ ರೋಟರಿ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಇನ್ನರ್ ವ್ಹೀಲ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಮಾಜಿಕವಾಗಿ ದುರ್ಬಲವಾಗಿರುವ ಮಹಿಳೆಯರಿಗೆ ನೆರವಾಗಲು ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಳ್ಳುವುದು ಮುಖ್ಯ. ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಮಹಿಳಾ ಸಂಘಟನೆಗಳು ಜಾಗೃತಗೊಂಡರೆ ಸಂಸ್ಥೆಗಳ ಉದ್ದೇಶ ಸಾರ್ಥಕ. ಮಹಿಳೆಯರಿಗೆ ಶಿಕ್ಷಣ ಕಲಿಕೆಗೆ ಹೆಚ್ಚಿನ ಗಮನಹರಿಸುವ ಕಾರ್ಯ ಕ್ರಮಗಳಿಗೆ ನೆರವಾಗಿ ಎಂದರು.

ಸ್ವರ್ಣಗುರುನಾಥ್ ಮಾತನಾಡಿ, ಸಮಾಜ ಸೇವೆಯಲ್ಲಿ ಸ್ವಾರ್ಥ ಅಡಗಿದ್ದರೇ ಮನುಷ್ಯನ ವ್ಯಕ್ತಿತ್ವವನ್ನು ಅದು ಕುಗ್ಗಿಸುತ್ತದೆ, ಆದರೆ ನಿಸ್ವಾರ್ಥತತೆಯಿಂದ ದುಡಿದರೆ ಅದರಿಂದ ಹೆಚ್ಚಿನ ಮಾನ್ಯತೆ ದೊರಕುತ್ತದೆ. ಇನ್ನರ್ ವ್ಹೀಲ್ ಸಂಸ್ಥೆ ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು ಸ್ನೇಹ ಮತ್ತು ಸೇವೆಯೇ ಧ್ಯೇಯವಾಗಿದೆ.

ಮಹಿಳಾ ಸ್ವಾವಲಂಬನೆ ವಿಚಾರಗಳು ಬಾಯಿ ಮಾತಿಗೆ ಸೀಮಿತಗೊಳ್ಳದೆ ಕಾರ್ಯ ಸಾಧ್ಯವಾಗಲು ಮಹಿಳಾ ಸಂಘಟನೆ ಗಳು ಎಲ್ಲ ವರ್ಗದ ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಜೊತೆಗೆ ಮನೆಯ ಜವಾಬ್ದಾರಿ ಜೊತೆ ಸಾಮಾಜಿಕ ಜವಾಬ್ದಾರಿಯು ಮುಖ್ಯ ಎಂದರು.ನೂತನ ಅಧ್ಯಕ್ಷೆ ನಳಿನಿ ನಾಗರಾಜ್ ಮಾತನಾಡಿ, ಇನ್ನವ್ಹೀಲ್ ಸಂಸ್ಥೆಯು ಹಲವು ಉಪಯುಕ್ತ ಕಾರ್ಯಕ್ರಮ ನಡೆಸಿಕೊಂಡು ಬಂದು ಪಟ್ಟಣದಲ್ಲಿ ಹೆಸರುಗಳಿಸಿದೆ, ನಮ್ಮ ಅವಧಿಯಲ್ಲಿ ಸಹ ಉತ್ತಮ ಕಾರ್ಯಕ್ರಮ ನಡೆಸುಸುವ ಮೂಲಕ ಸೇವೆ ನೀಡುವ ಮಹದಾಸೆ ಹೊಂದಿರುವುದಾಗಿ ತಿಳಿಸಿದರು.ಇನ್ನರ್ ವ್ಹೀಲ್ ನೂತನ ಕಾರ್ಯದರ್ಶಿಯಾಗಿ ಲತಾ ನಾಗರಾಜ್, ಖಜಾಂಚಿಯಾಗಿ ನೀತು ವಸಂತ್ , ಐಎಸ್ಒ ಆಗಿ ಮಾನಸ ಮಹಾಬಲರಾವ್ , ಇಎಸ್ಒ ಆಗಿ ಪುಷ್ಪ ಶಶಿಕುಮಾರ್ ಹಾಗೂ ಉಷಾ ಸ್ವಾಮಿ ಪದಗ್ರಹಣ ಪಡೆದರು.4 ಬೀರೂರು 1ಬೀರೂರಿನ ಕೆ.ಚನ್ನವೀರಪ್ಪಯ್ಯ ರೋಟರಿ ಭವನದಲ್ಲಿ ಬುಧವಾರ ಇನ್ನರ್ ವ್ಹೀಲ್ ಸಂಸ್ಥೆಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ನೂತನ ಅಧ್ಯಕ್ಷರಾಗಿ ನಳಿನಿ ನಾಗರಾಜ್, ಲತಾ ನಾಗರಾಜ್, ನೀತು ವಸಂತ್ ಇದ್ದರು.