ಸಾರಾಂಶ
ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕೆ.ಯು. ಸಾವಿತ್ರಿ ಅವರನ್ನು ಬೀಳ್ಕೊಡಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 32 ವರ್ಷಗಳ ಕಾಲ ಗುಮಾಸ್ತೆಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕೆ.ಯು ಸಾವಿತ್ರಿ ಇವರನ್ನು ಸಹಕಾರ ಸಂಘದ ವತಿಯಿಂದ ಮಂಗಳವಾರ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ನಾಪಂಡ ರಾಲಿ ಮಾದಯ್ಯ ಉಪಾಧ್ಯಕ್ಷ ಕೆ. ಸಿ ತಿಮ್ಮಯ್ಯ ಕಾರ್ಯನಿರ್ವಣಾಧಿಕಾರಿ ಪಿ.ಯು ಕಾವೇರಮ್ಮ ಮತ್ತು ನಿರ್ದೇಶಕರು, ಡಿಸಿಸಿ ಬ್ಯಾಂಕಿನ ಮೇಲ್ವಿಚಾರಕ ನಾರಾಯಣ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.