ಕೃಷಿಕರು, ಸೈನಿಕರು, ಕಾರ್ಮಿಕರನ್ನು ಗೌರವಿಸಿ: ಶ್ರೀಗಳು

| Published : Mar 01 2024, 02:20 AM IST

ಕೃಷಿಕರು, ಸೈನಿಕರು, ಕಾರ್ಮಿಕರನ್ನು ಗೌರವಿಸಿ: ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಶ್ರಮಿಕರ ಫಲವಾಗಿ ದೇಶದ ಆರ್ಥಿಕತೆ ನಿರ್ಧರಿಸುತ್ತದೆ. ರೈತ ಮತ್ತು ಸೈನಿಕರು ಹಾಗೂ ಕಾರ್ಮಿಕರು ದೇಶದ ನಿಜವಾದ ಆಶ್ರಯದಾತರು.

ಮರಿಯಮ್ಮನಹಳ್ಳಿ: ಕೃಷಿಕರು ಮತ್ತು‌ ಸೈನಿಕರು ಹಾಗೂ ಕಾರ್ಮಿಕರು ಒಂದು ದೇಶದ ಬೆನ್ನೆಲುಬುಗಳಿದ್ದಂತೆ. ಕೃಷಿಕ ಎಲ್ಲರ ಹೊಟ್ಟೆಯನ್ನು ತುಂಬಿಸುತ್ತಾನೆ. ಕಾರ್ಮಿಕರು ನಮಗೆ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಾರೆ. ಸೈನಿಕರು ನಮ್ಮೆಲ್ಲರನ್ನು ರಕ್ಷಿಸುತ್ತಾರೆ. ಆದ್ದರಿಂದ ಅವರನ್ನು ಸದಾ ಗೌರವಿಸಬೇಕು ಎಂದು ಜಿ. ನಾಗಲಾಪುರದ ಶ್ರೀಗುರು ಒಪ್ಪತ್ತೇಶ್ವರ ಮಠದ ನಿಯೋಜಿತ ಪೀಠಾಧಿಪತಿ ನಿರಂಜನಪ್ರಭು ದೇಶಿಕರು ತಿಳಿಸಿದರು.

ಇಲ್ಲಿಗೆ ಸಮೀಪದ ದೇವಲಾಪುರ ಗ್ರಾಮದಲ್ಲಿ ದೇವಲಾಪುರ ಆಂಜನೇಯ ಕಟ್ಟಡ ಕಾರ್ಮಿಕರ ಸಂಘದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಶ್ರಮಿಕರ ಫಲವಾಗಿ ದೇಶದ ಆರ್ಥಿಕತೆ ನಿರ್ಧರಿಸುತ್ತದೆ. ರೈತ ಮತ್ತು ಸೈನಿಕರು ಹಾಗೂ ಕಾರ್ಮಿಕರು ದೇಶದ ನಿಜವಾದ ಆಶ್ರಯದಾತರು ಎಂದರು.

ಸಮಾಜ ಸೇವಕ ಕುರಿ ಶಿವಮೂರ್ತಿ, ವೈದ್ಯ ಡಾ. ಜಿ.ಎಂ. ಸೋಮೇಶ್ವರ, ಗ್ರಾಪಂ ಸದಸ್ಯ ಸೋಮಪ್ಪ ಉಪ್ಪಾರ ನಂದಿಬಂಡಿ ಮಾತನಾಡಿದರು.

ಡಣಾಯನಕೆರೆ ಗ್ರಾಪಂ ಅಧ್ಯಕ್ಷ ಚಿನ್ರಾಪ್ಪ, ಉಪಾಧ್ಯಕ್ಷೆ ನೇತ್ರಾಪ್ರಕಾಶ, ಗ್ರಾಪಂ ಸದಸ್ಯರಾದ ವೆಂಕಟೇಶ ಉಪ್ಪಾರ, ಲಕ್ಷ್ಮೀದೇವಿ, ಸ್ಥಳಿಯ ಮುಖಂಡರಾದ ಎನ್. ಸತ್ಯನಾರಾಯಣ, ಎನ್‌.ಎಸ್‌. ಬುಡೇನ್ ಸಾಹೇಬ್, ಎಂ. ಕೀರ್ತೀರಾಜ್‌ ಜೈನ್, ಹಿರಿಯ ಕಟ್ಟಡ ಕಾರ್ಮಿಕರಾದ ಅಡ್ಡಿಗೇರಿ ಕಾಸೀಂಸಾಬ್, ಖಾಜಮೊದೀನ್, ಜಾನಪದ ಕಲಾವಿದ ಪಕ್ಕೀರಪ್ಪ, ಮುಖಂಡರಾದ ತಳವಾರ ಹುಲುಗುಪ್ಪ, ಗಂಡಿ ಬಸವರಾಜ, ಉಗ್ಗಿ ಬಸವರಾಜ, ಗುರಿಕಾರ ಸತೀಶ್, ದೇವಲಾಪುರ ಆಂಜನೇಯ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಎ. ಮಂಜುನಾಥ, ಉಪಾಧ್ಯಕ್ಷ ಪರಶುರಾಮ ಹಿರೇಮನಿ, ಪ್ರಧಾನ ಕಾರ್ಯದರ್ಶಿ ಯು. ಹುಲುಗಪ್ಪ, ಖಜಾಂಚಿ ಆರ್. ಕುಮಾರಸ್ವಾಮಿ, ಕೆ. ಆನಂದ್, ಪಕ್ಕೀರಪ್ಪ, ಅಶೋಕ ಸೇರಿದಂತೆ ಇತರರು ಇದ್ದರು. ಹಿರಿಯ ಕಟ್ಟಡ ಕಾರ್ಮಿಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.