ಸಾರಾಂಶ
ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಶಾಸಕ ಟಿ.ಎಸ್. ಶ್ರೀವತ್ಸ ಪುಷ್ಪಾರ್ಚನೆ
ಕನ್ನಡಪ್ರಭ ವಾರ್ತೆ ಮೈಸೂರು
ಭಾರತೀಯ ಜನ ಸಂಘದ ಸಂಸ್ಥಾಪಕ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯ ಸ್ಮರಣೆಯ ಅಂಗವಾಗಿ ಬಿಜೆಪಿ ಕೃಷ್ಣರಾಜ ಕ್ಷೇತ್ರದ ವತಿಯಿಂದ 5 ಜನ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು.ವಿವಿಧ ಕ್ಷೇತ್ರದ ಡಾ. ಚಂದ್ರಶೇಖರ್, ಯೋಗಾ ಪ್ರಕಾಶ್, ಯೋಗಾ ರಂಗನಾಥ್, ಎಚ್.ಎನ್. ಶಿವಕುಮಾರ್ ಮತ್ತು ದೀಕ್ಷಿತಾ ಅವರನ್ನು ಗೌರವಿಸಲಾಯಿತು.
ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಶಾಸಕ ಟಿ.ಎಸ್. ಶ್ರೀವತ್ಸ ಪುಷ್ಪಾರ್ಚನೆ ಮಾಡಿದರು. ಪ್ರೊ. ಶಿವಾನಂದ್ ಮುಖ್ಯ ಭಾಷಣ ಮಾಡಿದರು.ಕೆ.ಆರ್. ಕ್ಷೇತ್ರದ ಅಧ್ಯಕ್ಷ ಯು.ಜಿ. ಗೋಪಾಲ್ ರಾಜ್ ಅರಸ್, ಪ್ರಧಾನ ಕಾರ್ಯದರ್ಶಿಗಳಾದ ಜಯರಾಮ್, ಜಯಶಂಕರ್, ಮುಖಂಡರಾದ ಸೋಮಸುಂದರ್, ಕೆ.ಎಂ. ನಿಶಾಂತ್, ಪ್ರಸನ್ನ, ಶೈಲೇಂದ್ರ, ವಿದ್ಯಾ ಅರಸ್, ಶಾರದ ಈಶ್ವರ್, ಸೌಭಾಗ್ಯ ಮೂರ್ತಿ, ರವಿ, ನಂದೀಶ್, ಓಂ ಶ್ರೀನಿವಾಸ್, ನಾಗರಾಜ್, ಮನೋಜ್, ರೇಖಾ, ಕಾವೇರಿ, ಹರ್ಷ, ಪ್ರದೀಪ್, ಕಿಶೋರ್ ಮೊದಲಾದವರು ಇದ್ದರು.