ನಾಳೆ ಸಿಎಂ, ಡಿಸಿಎಂಗೆ ಸನ್ಮಾನ

| Published : Mar 06 2024, 02:17 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶ್ವ ಬಸವ ಧರ್ಮ ಟ್ರಸ್ಟ್‌ ಅನುಭವ ಮಂಟಪ, ಬಸವಕಲ್ಯಾಣ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಆಶ್ರಯದಲ್ಲಿ ಇದೇ ಮಾ.7ರಂದು ಬೆಳಗ್ಗೆ 11.30ಕ್ಕೆ ಇಲ್ಲಿನ ಥೇರ್‌ ಮೈದಾನದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ

ಬಸವಕಲ್ಯಾಣ: ವಿಶ್ವ ಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶ್ವ ಬಸವ ಧರ್ಮ ಟ್ರಸ್ಟ್‌ ಅನುಭವ ಮಂಟಪ, ಬಸವಕಲ್ಯಾಣ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಆಶ್ರಯದಲ್ಲಿ ಇದೇ ಮಾ.7ರಂದು ಬೆಳಗ್ಗೆ 11.30ಕ್ಕೆ ಇಲ್ಲಿನ ಥೇರ್‌ ಮೈದಾನದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದ ಸಾನಿಧ್ಯ ಜಗದ್ಗುರು ಗುರುಸಿದ್ಧರಾಜ ಯೋಗೀಂದ್ರ ಮಹಾಸ್ವಾಮಿಗಳು ಜಗದ್ಗುರು ಮೂರುಸಾವಿರ ಮಠ, ಹುಬ್ಬಳ್ಳಿ ಹಾಗೂ ವಿರಕ್ತಮಠ ಹಾನಗಲ್ಲ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಮಠ ಗದಗ-ಡಂಬಳ-ಯಡಿಯೂರು ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಡಾ.ಮಾತೆ ಗಂಗಾದೇವಿ ಅಧ್ಯಕ್ಷರು, ಬಸವಧರ್ಮ ಪೀಠ ಕೂಡಲಸಂಗಮ, ಬಸವ ಜಯಮೃತ್ಯುಂಜಯ ಸ್ವಾಮಿಗಳು ಪಂಚಮವಾಲಿ ಜಗದ್ಗುರು ಸಂಸ್ಥಾನ ಮಠ, ಕೂಡಲಸಂಗಮ, ಜಗದ್ಗುರು ಶಿವಯೋಗೀಶ್ವರ ಮಹಾಸ್ವಾಮಿಗಳು ವಿರಕ್ತಮಠ ಭಾತಂಬ್ರಾ, ಜಗದ್ಗುರು ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಬಸವಧರ್ಮಪೀಠ, ಬಸವಕಲ್ಯಾಣ, ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ, ತಡೋಳ, ಮೆಹಕರ, ಡೋಣಗಾಪೂರ, ಡಾ.ಅಕ್ಕ ಅನ್ನಪೂರ್ಣತಾಯಿ ಲಿಂಗಾಯತ ಮಹಾಮಠ, ಬೀದರ್‌, ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷರು, ಡಾ.ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಹಿರೇಮಠ ಹಾರಕೂಡ, ಶಿವಾನಂದ ಮಹಾಸ್ವಾಮಿಗಳು ಗುರುಬಸವೇಶ್ವರ ಸಂಸ್ಥಾನ ಮಠ, ಡಾ.ಸಿದ್ದರಾಮ ಶರಣರು ಬಸವಯೋಗಾಶ್ರಮ, ಕೌಠ (ಬಿ), ಡಾ.ಅಕ್ಕ ಗಂಗಾಂಬಿಕಾ ತಾಯಿ ಹರಳಯ್ಯಪೀಠ, ಬಸವಕಲ್ಯಾಣ, ಹುಲಸೂರು, ನಿಜಗುಣಾನಂದ ಮಹಾಸ್ವಾಮಿಗಳು ತೋಂಟದಾರ್ಯ ಮಠ ಮುಂಡರಗಿ, ನಿಷ್ಕಲ ಮಂಟಪ, ಬೈಲೂರು ಸೇರಿದಂತೆ ಅನೇಕ ಸ್ವಾಮೀಜಿಗಳು ಆಗಮಿಸಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆಶಿ ಅವರಿಗೆ ಅಭಿನಂದನೆ ಸಲ್ಲಿಸಲಾಗುವದು. ಕಾರ್ಯಕ್ರಮದ ಉದ್ಘಾಟನೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ನೆರವೇರಿಸಲಿದ್ದಾರೆ. ಅಧ್ಯಕ್ಷತೆ ಸಚಿವ ಈಶ್ವರ ಖಂಡ್ರೆವಹಿಸಿದರೆ ಅಭಿನಂದನಾ ನುಡಿಯನ್ನು ಗೋ.ರು ಚನ್ನಬಸಪ್ಪ ಹಾಗೂ ಹಿರಿಯ ಸಾಹಿತಿ ಡಾ.ಅರವಿಂದ ಜತ್ತಿ ನುಡಿಯಲಿದ್ದಾರೆ. ಗೌರವ ಉಪಸ್ಥಿತಿಯನ್ನು ಸಚಿವ ರಹೀಮ್‌ ಖಾನ್‌ ಹಾಗೂ ಮಾಜಿ ಸಚಿವ ರಾಜಶೇಖರ್‌ ಪಾಟೀಲ್‌ ಹುಮ್ನಾಬಾದ್‌ವಹಿಸಲಿದ್ದಾರೆ. ಸಚಿವರಾದ ಡಾ.ಜಿ.ಪರಮೇಶ್ವರ ಹಾಗೂ ಎಚ್‌.ಕೆ.ಪಾಟೀಲ್‌, ಎಂ.ಬಿ.ಪಾಟೀಲ್‌ ಸೇರಿದಂತೆ ಸರ್ಕಾರದ ಇನ್ನಿತರ ಸಚಿವರು, ಶಾಸಕರುಗಳು ಅನೇಕ ಮಠಾಧೀಶರುಗಳು ಉಪಸ್ಥಿತರಿರಲಿದ್ದಾರೆ ಎಂದು ಈಶ್ವರ ಖಂಡ್ರೆ ಹೇಳಿದರು.