ಉಡುಪಿ ವಕೀಲರ ಸಂಘದ ಸದಸ್ಯರಾಗಿದ್ದ ನ್ಯಾಯಧೀಶರಿಗೆ ಸನ್ಮಾನ

| Published : Nov 28 2024, 12:32 AM IST

ಉಡುಪಿ ವಕೀಲರ ಸಂಘದ ಸದಸ್ಯರಾಗಿದ್ದ ನ್ಯಾಯಧೀಶರಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಲಯ ಮತ್ತು ವಕೀಲರ ಸಂಘದ ಶತಮಾನೋತ್ತರ ರಜತ ಮಹೋತ್ಸವ ಆಚರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ನ್ಯಾಯಾಲಯ ಮತ್ತು ವಕೀಲರ ಸಂಘದ ಶತಮಾನೋತ್ತರ ರಜತ ಮಹೋತ್ಸವ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ, ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರುಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಉಡುಪಿ ವಕೀಲರ ಸಂಘದ ಮಾಜಿ ಸದಸ್ಯರಾದ ಶುಕ್ಲಾಕ್ಷ ಪಾಲನ್, ಪಂಚಾಕ್ಷರಿ, ಕಿರಣ್ ಕಿಣಿ, ಕೃಷ್ಣಪ್ರಸಾದ್, ಶ್ರೀಧರ ಭಟ್, ಎಲ್.ಎನ್. ಭಟ್, ಭಾಮಿನಿ, ಸುಜಾತಾ ಸುವರ್ಣ, ಅರುಣಾ ಕುಮಾರಿ, ಪ್ರಶಾಂತ್ ಗಣಪತಿ, ಮಧುಕರ ಭಾಗವತ್, ಶ್ರೀಕಂಠ ಹೆಬ್ಬಾರ್, ಕು. ಲತಾ, ಯಶಸ್ವಿನಿ ಅಮೀನ್ ಮತ್ತು ವರ್ಷಶ್ರೀ ಅವರನ್ನು ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ಸರ್ಕಾರಿ ಅಭಿಯೋಜಕರಾಗಿ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಡುಪಿ ವಕೀಲರ ಸಂಘದ ಮಾಜಿ ಸದಸ್ಯರಾದ ಹರಿಶ್ಚಂದ್ರ ಉದ್ಯಾವರ್, ನಾರಾಯಣ ಶೇರಿಗಾರ್, ಬದರಿನಾಥ್ ನಾಯರಿ, ಸೀತಾ ಮತ್ತು ಅಶ್ವಿತಾ ಅಮೀನ್ ಅವರನ್ನು ಕೂಡ ಗೌರವಿಸಲಾಯಿತು.ಸಮಾರೋಪ ಸಮಾರಂಭದಲ್ಲಿ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ, ಆಂದ್ರಪ್ರದೇಶದ ರಾಜ್ಯಪಾಲ ಜ. ಅಬ್ದುಲ್ ನಝೀರ್, ಸುಪ್ರಿಂ ಕೋರ್ಟ್ ನ್ಯಾಯಾಧೀಶ ಜ. ಅರವಿಂದ್ ಕುಮಾರ್, ಹೈಕೋರ್ಟ್ ನ್ಯಾಯಾಧೀಶ ಜ. ಎನ್.ವಿ. ಅಂಜಾರಿಯಾ, ಹೈಕೋರ್ಟ್‌ ನ್ಯಾಯಾಧೀಶರುಗಳಾದ ಜ. ಇ.ಎಸ್.ಇಂದ್ರೇಶ್‌, ಜ. ಎಂ.ಜಿ.ಉಮಾ, ಜ. ಹುದ್ದಾರ್, ಜ.ವೆಂಕಟೇಶ್ ನಾಯ್ಕ್, ಹೈಕೋರ್ಟ್ ರಿಜಿಸ್ಟ್ರಾರ್ ಕೆ.ಎಸ್.ಭರತ್, ಕಾನೂನು ಸಚಿವ ಎಚ್‌.ಕೆ.ಪಾಟೀಲ್, ಉಡುಪಿ ಜಿಲ್ಲಾ ನ್ಯಾಯಾಧೀಶ ಕಿರಣ್‌ ಗಂಗಣ್ಣನವರ್, ವಕೀಲರ ಸಂಱದ ಅಧ್ಯಕ್ಷ ರೆನೋಲ್ಡ್ ಪ್ರವೀಣ್‌ ಕುಮಾರ್ ಮುಂತಾದವರಿದ್ದರು.