ಚಡಚಣ ಪ.ಪಂ ನೂತನ ಸದಸ್ಯರಿಗೆ ಸನ್ಮಾನ

| Published : Jan 02 2024, 02:15 AM IST

ಸಾರಾಂಶ

ನೂತನ ಸದಸ್ಯರು ತಮ್ಮ ವಾರ್ಡಗಳಲ್ಲಿ ಕುಡಿಯುವ ನೀರು, ಉತ್ತಮ ರಸ್ತೆಗಳು ಹಾಗೂ ಬೀದಿ ದೀಪ ಒದಗಿಸಲು ಪ್ರಥಮ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಚಡಚಣ: ಪಟ್ಟಣ ಪಂಚಾಯ್ತಿಗೆ ನೂತನವಾಗಿ ಆಯ್ಕೆಯಾದ 16 ಸದಸ್ಯರು ಪಕ್ಷಾತೀತವಾಗಿ, ಒಗ್ಗಟ್ಟಿನಿಂದ ಪಟ್ಟಣದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ನಿವೃತ್ತ ಪ್ರಚಾರ್ಯ ಆರ್‌.ಪಿ.ಬಗಲಿ ಹೇಳಿದರು.

ಶ್ರೀಸಾಯಿಬಾಬಾ ಗೆಳೆಯರ ಬಳಗದಿಂದ ಸೋಮವಾರ ಆಯೋಜಿಸಿದ್ದ ಪಟ್ಟಣ ಪಂಚಾಯ್ತಿ ನೂತನ 16 ಸದಸ್ಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ನಿವೃತ ಮುಖ್ಯ ಶಿಕ್ಷಕ ಶಿವಶಂಕರ ಬಗಲಿ ಮಾತನಾಡಿ, ನೂತನ ಸದಸ್ಯರು ತಮ್ಮ ವಾರ್ಡಗಳಲ್ಲಿ ಕುಡಿಯುವ ನೀರು, ಉತ್ತಮ ರಸ್ತೆಗಳು ಹಾಗೂ ಬೀದಿ ದೀಪ ಒದಗಿಸಲು ಪ್ರಥಮ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಸಾನ್ನಿಧ್ಯ ವಹಿಸಿದ ಸೋಮಶೇಖರ ಹಿರೇಮಠ ಸ್ವಾಮೀಜಿ ಆಶಿರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಸಾಯಿಬಾಬಾ ಗೆಳೆಯರ ಬಳಗದ ಸದಸ್ಯ ಸಚಿನ ಯಳಮೇಲಿ, ಹಿತೇಶ ಪಟೇಲ, ನಿಲೇಶಸಿಂಗ ರಜಪೂತ, ಷಡಕ್ಷರಿ ಅರವತ್ತಿ, ವಿದ್ಯಾಧರ ಬಾಡನ್, ಸಂತೋಷ ಕಲ್ಯಾಣಶೆಟ್ಟಿ, ಪ್ರವೀಣ ಪಟೇಲ, ಶಿವಾನಂದ ನಿಂಬರಗಿ, ಡಾ.ಅನಂತ ಕಲಬುರ್ಗಿ, ಜಿಗ್ನೇಶ ಪಟೇಲ ನೂತನ ಸದಸ್ಯರಿಗೆ ಸನ್ಮಾನಿಸಿದರು.

ಪಟ್ಟಣದ ನಿವಾಸಿ ಸಿದ್ರಾಮಪ್ಪ ಬಂಡಗರ, ಸಿದ್ಧಾರಾಮ ಉಕ್ಕಲಿ, ಕಮಲೇಶ ಪಟೇಲ, ಸಂಜು ಬಡಿಗೇರ, ಪ್ರದೀಪ ಚೋಳಕೆ, ಸೋಮನಾಥ ಪೂಜಾರಿ, ಪ್ರವೀಣ ಪಟೇಲ ಇದ್ದರು.