ನೂತನ ಪದಾಧಿಕಾರಿಗಳಿಗೆ ಸನ್ಮಾನ

| Published : Feb 28 2024, 02:37 AM IST

ಸಾರಾಂಶ

ತಾಲೂಕಿನ ಅರೇಹಳ್ಳಿಯ ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಆವರಣದಲ್ಲಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು

ಬೇಲೂರು: ತಾಲೂಕಿನ ಅರೇಹಳ್ಳಿಯ ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಆವರಣದಲ್ಲಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಸನ್ಮಾನ ಸ್ವೀಕರಿಸಿ ನೂತನವಾಗಿ ಆಯ್ಕೆಯಾದ ಉಪಾಧ್ಯಕ್ಷ ಮಂಜುನಾಥ್ ಶೆಟ್ಟಿ ಮಾತನಾಡಿ ಈ ಹಿಂದೆ ಇದ್ದ ಸರ್ಕಾರವು ಬೆಳೆಗಾರರ ಅನುಕೂಲಕ್ಕಾಗಿ 10 ಎಚ್.ಪಿ ವರೆಗಿನ ವಿದ್ಯುತ್ ಪೂರೈಕೆಯನ್ನು ಸಬ್ಸಿಡಿ ದರದಲ್ಲಿ ಉಚಿತವಾಗಿ ನೀಡಲು ಮತ್ತು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಿರುವ ಕೃಷಿಕರಿಗೆ ಗುತ್ತಿಗೆ ಆಧಾರದಲ್ಲಿ ನೀಡುವ ಬಗ್ಗೆ ಹಾಗು ಇನ್ನೂ ಹಲವು ಯೋಜನೆಗಳನ್ನೂ ಬೆಳೆಗಾರರ ಅನುಕೂಲಕ್ಕಾಗಿ ರೂಪಿಸಿತ್ತು. ಆದರೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಅವುಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಸಕಾಲದಲ್ಲಿ ಮಳೆ ಇಲ್ಲದೆ ಬರಗಾಲದ ಪರಿಸ್ಥಿತಿ ಎದುರಾಗಿದೆ. ಒಂದೆಡೆ ಕಾರ್ಮಿಕರ ಕೊರತೆ, ಅತಿಯಾದ ಕೂಲಿ ಮೊತ್ತ ಇವುಗಳ ನಡುವೆ ಹಲವಾರು ವರ್ಷಗಳ ಕಾಲ ಬೆಳೆದಿದ್ದ ಬೆಳೆಗಳನ್ನು ಕಾಡಾನೆಗಳು ದಾಂದಲೆ ಎಬ್ಬಿಸಿ ಅಪಾರ ಪ್ರಮಾಣದ ಬೆಳೆಗಳು ನಾಶ ಮಾಡುತ್ತಿದೆ, ಇಂತಹ ಸಂದರ್ಭದಲ್ಲಿಯೇ ಹಲವೆಡೆ ಬೆಳೆಸಾಲ ಮಾಡಿ ಮರುಪಾವತಿ ಮಾಡದ ಕೃಷಿಕರ ಭೂಮಿಯನ್ನು ಇ - ಟೆಂಡರ್ ಮೂಲಕ ಕೃಷಿಕರಿಗೆ ತಿಳಿಯದ ರೀತಿಯಲ್ಲಿ ಹರಾಜು ಮಾಡಲು ಬ್ಯಾಂಕುಗಳು ಮುಂದಾಗಿದೆ. ಇವುಗಳ ಬಗ್ಗೆ ಸರ್ಕಾರವು ಕೂಡಲೇ ಗಮನಹರಿಸಿ ಕೃಷಿಕರ ಅನುಕೂಲವಾಗುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಿಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಎ.ಎಸ್ ಪರಮೇಶ್, ಕಾರ್ಯದರ್ಶಿ ಕೆ.ಬಿ ಲೋಹಿತ್, ಖಜಾಂಚಿ ಎಂ. ಜೆ ಸಚಿನ್,ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಬಿ.ಪಿ ಬಸವರಾಜ್ ಸೇರಿದಂತೆ ಪದಾಧಿಕಾರಿಗಳು ಬೆಳೆಗಾರರು ಹಾಗೂ ಇತರರು ಹಾಜರಿದ್ದರು.