ಹಿರೇಕೆರೂರು: ಪಟ್ಟಣದ ಗುರುಭವನದಲ್ಲಿ ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕಿನ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ವತಿಯಿಂದ ಇತ್ತೀಚಿಗೆ ಆಯ್ಕೆಯಾಗಿರುವ ಶಿಕ್ಷಕ ಸಂಘ ಹಾಗೂ ಸಹಕಾರಿ ಸಂಘಕ್ಕೆ ಆಯ್ಕೆಯಾದ ನಿರ್ದೇಶಕರನ್ನು ಸನ್ಮಾನಿಸಲಾಯಿತು.ಹಾವೇರಿ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜೋಗಿಹಳ್ಳಿ, ಹಿರೇಕೆರೂರು ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎಸ್. ಸಾಲಿ, ರಟ್ಟೀಹಳ್ಳಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಡಿ. ಕರಿಯಣ್ಣನವರ, ರಮೇಶ್ ಪೂಜಾರ, ಸುಧಾ ಎನ್.ಬಿ., ಎಸ್.ಆರ್. ಅಣ್ಣಯ್ಯನವರ, ರಿಜ್ವಾನ್ ತುಮ್ಮನಕಟ್ಟಿ, ಕರಬಸಮ್ಮ ಬಣಕಾರ, ಜಯಮ್ಮ ಹೆಗ್ಗೇರಿ, ರಾಜೇಶ್ವರಿ ಮಾಕನೂರ, ಸಹಕಾರಿ ಸಂಘದ ಅಧ್ಯಕ್ಷ ಎನ್.ಜಿ. ಬನ್ನಿಹಟ್ಟಿ, ಉಪಾಧ್ಯಕ್ಷೆ ಗಿರಿಜಾ ಪುಟ್ಟಪ್ಪಗೌಡ್ರ, ಎಸ್.ವಿ. ಬಳ್ಳಾರಿ, ಎಸ್.ಎಚ್. ಗಿಡ್ಡಪ್ಪನವರ, ಕುಮಾರ ಮಡಿವಾಳರ, ರಾಜು ಹರವಿಶೆಟ್ಟರ್, ಯುನಿಸ್ ಮುಲ್ಲಾ, ಎಂ.ಎಂ. ಮಾದರ್, ಪ್ರವೀಣ್ ಗುಡದಳ್ಳಿ, ಕೆ.ಆರ್. ಮಧ್ಯಾಹ್ನದವರ, ಸಹಕಾರಿ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಹುಲ್ಲತ್ತಿ, ಹಾವೇರಿ ಜಿಲ್ಲಾ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಎಸ್. ಹೆಗ್ಗೇರಿ, ಆರ್.ಎಸ್. ಹಂಚಿನಮನಿ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ್, ಕ್ಷೇತ್ರ ಸಮನ್ವಯ ಅಧಿಕಾರಿ ಬಿ.ಆರ್. ತೆವರಿ. ಪಿಎಂ ಪೋಷಣ್ ಅಭಿಯಾನದ ಸಹಾಯಕ ನಿರ್ದೇಶಕರಾದ ಎಚ್.ಎಚ್. ಜಾಡರ್, ಉಭಯ ತಾಲೂಕಿನ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ವಿ.ಎನ್. ವೀರಾಪುರ, ಎಸ್.ಎಸ್. ಕೋರಿಗೌಡ್ರ, ಕಾರ್ಯದರ್ಶಿ ಎಂ.ಡಿ. ಕುರುಬರ ಸೇರಿದಂತೆ ಸಂಘದ ಪದಾಧಿಕಾರಿಗಳು ಶಿಕ್ಷಕರು ಇದ್ದರು.