ಗೌರವಧನ ಹೆಚ್ಚಳ ಸಮಾಧಾನ ತಂದಿದೆ: ರುದ್ರಮ್ಮ ಹೇಳಿಕೆ

| Published : Sep 05 2025, 01:00 AM IST

ಗೌರವಧನ ಹೆಚ್ಚಳ ಸಮಾಧಾನ ತಂದಿದೆ: ರುದ್ರಮ್ಮ ಹೇಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಗೌರವಧನ ಹೆಚ್ಚಿಸಿರುವುದು ಸಮಾಧಾನ ತಂದಿದೆ ಎಂದು ಕರ್ನಾಟಕ ರಾಜ್ಯ ಗ್ರಾ.ಪಂ. ಮಟ್ಟದ ಪುಸ್ತಕ ಬರಹಗಾರರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಸಖಿಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷೆ ರುದ್ರಮ್ಮ ಹೇಳಿದರು.

ಶಿವಮೊಗ್ಗ: ಸರ್ಕಾರ ಗೌರವಧನ ಹೆಚ್ಚಿಸಿರುವುದು ಸಮಾಧಾನ ತಂದಿದೆ ಎಂದು ಕರ್ನಾಟಕ ರಾಜ್ಯ ಗ್ರಾ.ಪಂ. ಮಟ್ಟದ ಪುಸ್ತಕ ಬರಹಗಾರರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಸಖಿಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷೆ ರುದ್ರಮ್ಮ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2011ರಲ್ಲಿ ಆರಂಭವಾದ ಸಂಜೀವಿನಿ ಯೋಜನೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ(ಎನ್‌ಆರ್‌ಎಲ್‌ಎಂ)ವು 2014ರಿಂದ ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಹಂತ ಹಂತವಾಗಿ ಅನುಷ್ಠಾನವಾಗಿದೆ ಎಂದರು.2019ರಲ್ಲಿ ಸಂಪೂರ್ಣವಾಗಿ ಅನುಷ್ಠಾನದಿಂದ ಯೋಜನೆಯಲ್ಲಿ ಆರಂಭವಾಗಿ 4000 ಗೌರವಧನ, ಮುಖ್ಯ ಪುಸ್ತಕ ಬರಹಗಾರರಿಗೆ (ಎಂಬಿಕೆ) 2000 ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಗೌರವಧನ ವಿತರಿಸಲಾಗಿತ್ತು. ಕಳೆದ ವರ್ಷ ಸರ್ಕಾರ 2021ರಲ್ಲಿ 1000 ರು. ಎಂಬಿಕೆಗಳಿಗೆ ಹಾಗೂ 500 ರು. ಎಲ್‌ಸಿಆರ್‌ಪಿ ಗೌರವಧನ ಹೆಚ್ಚಿಸಲಾಗಿತ್ತು. ಕಾಂಗ್ರೆಸ್ ಸರ್ಕಾರ ಒಂದೇ ಬಾರಿಗೆ ನಾಲ್ಕು ವರ್ಷದ ಹೋರಾಟದ ಫಲವಾಗಿ 2000 ರು. ಗೌರವಧನ ಹೆಚ್ಚಿಸಿರುವುದು ಸಂತಸ ತಂದಿದೆ ಎಂದರು.ಗೌರವಧನ ಹೆಚ್ಚಿಸಿರುವುದು ಸಮಾಧಾನ ತಂದಿದೆ. ಪ್ರತಿವರ್ಷ ವಾರ್ಷಿಕ ಒಂದು ಸಾವಿರ ರು. ಹೆಚ್ಚಿಸಿದರೆ 15 ಸಾವಿರ ರು. ಎಂಬಿಕೆಗಳಿಗೆ ಹಾಗೂ 8 ಸಾವಿರ ರು. ಎಲ್‌ಸಿಆರ್‌ಪಿಗಳಿಗೆ ಹಾಗೂ 5500 ರು. ಸಖಿಯರಿಗೆ ಆಗಬೇಕಾಗಿತ್ತು. ಮುಂದಿನ ದಿನಗಳಲ್ಲಿ ಸರ್ಕಾರ ಗೌರವ ಧನವನ್ನು ಪ್ರತಿವರ್ಷ ಪರಿಷ್ಕರಣೆಮಾಡಿ ಹೆಚ್ಚಿಸಬೇಕೆಂಬ ಬೇಡಿಕೆಯೊಂದಿಗೆ ರಾಜ್ಯ ಸರ್ಕಾರಕ್ಕೆ ಮತ್ತು ಇಲಾಖೆ ಸಚಿವರಾದ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲರಿಗೆ, ಇಲಾಖೆಯ ಎಂಡಿ ಮತ್ತು ಎಎಂಡಿರವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಗೀತಾ, ಕವಿತಾಬಾಯಿ, ಸುಜಾತ, ಸುಮಾ, ವೀಣಾ, ದೇವಿಕಾ, ಭಾಗ್ಯಮ್ಮ, ಕವಿತಾ ಸಿ. ಇತರರಿದ್ದರು.