ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋಲಾರದ ಶ್ರೀದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದಿಂದ ಸೋಮವಾರ ಗೌರವ ಡಾಕ್ಟರೆಟ್ ಪ್ರದಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಕೋಲಾರ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋಲಾರದ ಶ್ರೀದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದಿಂದ ಸೋಮವಾರ ಗೌರವ ಡಾಕ್ಟರೆಟ್ ಪ್ರದಾನಿಸಲಾಯಿತು.೨೦೨೫ರಲ್ಲಿ ನಡೆದ ಸಂಸ್ಥೆಯ ೧೫ನೇ ವಾರ್ಷಿಕ ಘಟಿಕೋತ್ಸವದಲ್ಲಿ ಈ ಪದವಿ ಘೋಷಿಸಲಾಗಿತ್ತು. ಆದರೆ, ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಆಗಿದ್ದ ಕಾರಣ ಅವರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಆರ್.ಎಲ್. ಜಾಲಪ್ಪ ಅವರ ೧೦೧ನೇ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ‘ನನಗೆ ಸಂಸ್ಥೆಯವರು ಗೌರವ ಡಾಕ್ಟರೆಟ್ ಪದವಿ ಕೊಟ್ಟಿದ್ದಾರೆ. ಅದಕ್ಕೆ ನಾನು ಅರ್ಹನೋ, ಅನರ್ಹನೋ ಗೊತ್ತಿಲ್ಲ. ಬೇಡವೆಂದರೂ ಕೊಟ್ಟಿದ್ದಾರೆ. 8 ವರ್ಷ ಮುಖ್ಯಮಂತ್ರಿ ಆಗಿ ದೇವರಾಜ ಅರಸು ಅವರ ದಾಖಲೆ ಮುರಿದಿದ್ದೇನೆ. ೧೭ ಬಜೆಟ್ ಮಂಡಿಸಿದ್ದೇನೆ. ಹೀಗಾಗಿ, ನನಗೆ ಡಾಕ್ಟರೆಟ್ ಕೊಟ್ಟಿರಬಹುದು. ಈಗ ಸ್ವೀಕಾರ ಮಾಡಿದ್ದೇನೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ ನನಗೆ ಡಾ. ಸಿದ್ದರಾಮಯ್ಯ ಎಂದಿದ್ದಾರೆ. ನಾನು ನಿಜವಾದ ಡಾಕ್ಟರ್ ಅಲ್ಲ, ನಾನು ವಕೀಲ. ಡಾ. ಸಿದ್ದರಾಮಯ್ಯ ಎಂದು ಮಾತ್ರ ಕರೆಯಬೇಡಿ’ ಎಂದರು.