ಸಾರಾಂಶ
ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕೊಂಬಂಡ ಸೀತಾರಾಮ ಅವರಿಗೆ ಬೀಳ್ಕೊಡುಗೆ ಏರ್ಪಡಿಸಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕೊಂಬಂಡ ಸೀತಾರಾಮ (ಸಾಬು) ಅವರಿಗೆ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಸಂಘದ ಕಟ್ಟಡದಲ್ಲಿ ಏರ್ಪಡಿಸಲಾಯಿತು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಕೊಂಬಂಡ ಸೀತಾರಾಮ ಜ. 31 ರಂದು ನಿವೃತ್ತಿ ಹೊಂದಿದ್ದು ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಈ ಸಂದರ್ಭ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಅವರ ಗುಣಗಾನ ಮಾಡಿದರು. ಸನ್ಮಾನಿತ ಸೀತಾರಾಮ ಅವರು ಎಲ್ಲರಿಗೂ ಧನ್ಯವಾದಗಳು ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಕೆ ಟೋಳಿರ ಎಸ್ .ಪೂವಯ್ಯ, ಉಪಾಧ್ಯಕ್ಷೆ ಕುಂಡ್ಯೋಳಂಡ ಎಂ ಕವಿತಾ, ನಿರ್ದೇಶಕರಾದ ಕೆಲೇಟಿರ ಬಿ. ಮುತ್ತಮ್ಮ , ಚಿಯಕಪೂವಂಡ ಎನ್. ಸತೀಶ್ ದೇವಯ್ಯ, ಚೋಕಿರ ಬಿ. ಪ್ರಭು ಪೂವಪ್ಪ, ಎಚ್.ಎ ಬೊಳ್ಳು , ಶಿವ ಚಾಳಿಯಂಡ ಎಂ. ಅಂಬಿ ಕಾರ್ಯಪ್ಪ, ಅರೆಯಡ ಎಂ. ರತ್ನ ಪೆಮ್ಮಯ್ಯ, ಚೋಕಿರ ಎಸ್. ಸಜಿತ್ ಚಿನ್ನಪ್ಪ , ಕುಂಡಿಯೊಳಂದ ಸಿ. ವಿಷು ಪುವಯ್ಯ, ಟಿ . ಎ ಮಿಟ್ಟು, ಅಪ್ಪಚಿರ ರೀನಾ ನಾಣಯ್ಯ ಎನ್.ಕೆ. ಪುಷ್ಪ ಹಾಗೂ ವ್ಯವಸ್ಥಾಪಕ ಶಿವ ಚಾಳಿಯಂಡ ವಿಜು ಪೂಣಚ್ಚ ಸಿಬ್ಬಂದಿ ವರ್ಗ ಇನ್ನಿತರರು ಉಪಸ್ಥಿತರಿದ್ದರು.