ಸಾರಾಂಶ
ಸಮಾಜದಲ್ಲಿ ಸ್ವಾರ್ಥ ರಹಿತ ಸೇವೆಯಿಂದ, ಸಮಾಜದ ಗೌರವಕ್ಕೆ ನಾವು ಪಾತ್ರರಾಗುತ್ತೇವೆ. ಅಂತಹ ಸೇವಾ ಗುಣವನ್ನ ಎಲ್ಲರೂ ಅನುಸರಿಸಬೇಕು ಎಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಮುಳಗುಂದ: ಸಮಾಜದಲ್ಲಿ ಸ್ವಾರ್ಥ ರಹಿತ ಸೇವೆಯಿಂದ, ಸಮಾಜದ ಗೌರವಕ್ಕೆ ನಾವು ಪಾತ್ರರಾಗುತ್ತೇವೆ. ಅಂತಹ ಸೇವಾ ಗುಣವನ್ನ ಎಲ್ಲರೂ ಅನುಸರಿಸಬೇಕು ಎಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಪಟ್ಟಣದ ಬಿ.ಎಂ.ಎಸ್. ಶಿಕ್ಷಣ ಸಂಸ್ಥೆಯ ಬಿ.ಸಿ. ಬಂಗಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ನೂತನವಾಗಿ ನಿರ್ಮಾಣವಾದ ಸಭಾ ಭವನ ಉದ್ಘಾಟನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಮಕ್ಕಳ ಕಾರ್ಯ ಚಟುವಟಿಕೆಗಾಗಿ ನಿರ್ಮಾಣವಾದ ಸಭಾ ಭವನಕ್ಕೆ, ಶಿಕ್ಷಣ ಸಂಸ್ಥೆಯ ಏಳಿಗೆಗೆ ಶ್ರಮಿಸಿದ ದಿ. ಮಹಾಂತಪ್ಪ ಬಡ್ನಿ ಅವರ ಹೆಸರು ನಾಮಕರಣ ಮಾಡಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ದಿ .ಸಿ.ಬಿ. ಬಡ್ನಿ ಅವರ ಜನ್ಮದಿನದ ಸ್ಮರಣೋತ್ಸವ ಅಂಗವಾಗಿ ಕೊಡುವ ಸಮಾಜಮುಖಿ ಕಾಯಕಯೋಗಿ ಪ್ರಶಸ್ತಿಯನ್ನು ಹಿರಿಯರಾದ ಎಂ.ಪಿ. ಮೆಣಸಿನಕಾಯಿ ಹಾಗೂ ಈರಪ್ಪ ಮೆಣಸಿನಕಾಯಿ ಅವರಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ಸಾನಿಧ್ಯ ವಹಿಸಿ ಮಾತನಾಡಿದರು. ಶಿಕ್ಷಣ ಸಮಿತಿ ಅಧ್ಯಕ್ಷ ಎಸ್.ಸಿ. ಬಡ್ನಿ ಅಧ್ಯಕ್ಷತೆ ವಹಿಸಿದ್ದರು. ಅರ್ಬನ್ ಬ್ಯಾಂಕ್ ಅಧ್ಯಕ್ಷ ಶಿವಣ್ಣ ನೀಲಗುಂದ, ಬಿಇಒ ವಿ.ವಿ. ನಡುವಿನಮನಿ, ಗೌರಮ್ಮ ಬಡ್ನಿ, ಡಾ. ಎಸ್.ಸಿ. ಚವಡಿ, ಪಿ.ಎ. ವಂಟಕರ, ಕೆ.ಎಲ್. ಕರೇಗೌಡ್ರ, ಸಂಜಯ ನೀಲಗುಂದ, ಬಸವರಾಜ ಬಡ್ನಿ, ಎನ್.ಆರ್. ದೇಶಪಾಂಡೆ, ಫಕ್ಕಿರಯ್ಯ ಅಮೋಘಿಮಠ, ಅಶೋಕ ಸೋನಗೋಜಿ, ಶಿಕ್ಷಕ ಎಸ್.ಸಿ. ಮೊಕಾಶಿಮಠ ಮೊದಲಾದವರು ಇದ್ದರು.