ಸಾಧಕರಿಗೆ ಗೌರವ ಸಲ್ಲಿಸುವುದು ಶ್ರೇಷ್ಠ ಕಾರ್ಯ: ಗಣಪತಿ ಶ್ರೀಯಾನ್‌

| Published : May 13 2024, 12:01 AM IST

ಸಾಧಕರಿಗೆ ಗೌರವ ಸಲ್ಲಿಸುವುದು ಶ್ರೇಷ್ಠ ಕಾರ್ಯ: ಗಣಪತಿ ಶ್ರೀಯಾನ್‌
Share this Article
  • FB
  • TW
  • Linkdin
  • Email

ಸಾರಾಂಶ

ಕೊರವಡಿ ಮಲಸಾವರಿ ದೇಗುಲದ ವಠಾರದಲ್ಲಿ ಮಹಾಂಕಾಳಿ ಫ್ರೆಂಡ್ಸ್ ಕೊರವಡಿ ಇದರ ೨೪ನೇ ವರ್ಷೋತ್ಸವ ಸಂಭ್ರಮ ‘ನಮ್ಮೂರ ಪರ್ವ -೨೦೨೪’ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಣಪತಿ ಟಿ. ಶ್ರೀಯಾನ್ ಅತಿಥಿಯಾಗಿ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಕೋಟ

ಸಾಧಕರನ್ನು ಗುರುತಿಸಿ ಅವರಿಗೆ ವಿಶೇಷ ಗೌರವ ಸಲ್ಲಿಸುವ ಕಾರ್ಯ ನಿಜಕ್ಕೂ ಪ್ರಶಂಸನೀಯ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಣಪತಿ ಟಿ. ಶ್ರೀಯಾನ್ ಹೇಳಿದ್ದಾರೆ.

ಅವರು ಇಲ್ಲಿನ ಕೊರವಡಿ ಮಲಸಾವರಿ ದೇಗುಲದ ವಠಾರದಲ್ಲಿ ಮಹಾಂಕಾಳಿ ಫ್ರೆಂಡ್ಸ್ ಕೊರವಡಿ ಇದರ ೨೪ನೇ ವರ್ಷೋತ್ಸವ ಸಂಭ್ರಮ ‘ನಮ್ಮೂರ ಪರ್ವ -೨೦೨೪’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಘ ಸಂಸ್ಥೆಗಳು ಗ್ರಾಮದಲ್ಲಿ ಸಾಂಸ್ಕೃತಿಕ ಚಿಂತನೆಗಳನ್ನು ಪಸರಿಸಿ ಪ್ರೇರಣೆದಾಯಕ ಕಾರ್ಯಗಳನ್ನು ಹಮ್ಮಿಕೊಂಡು, ಈಶ್ವರ್ ಮಲ್ಪೆಯಂತಹ ಸಾಧಕರಿಗೆ ಗೌರವ ಸಲ್ಲಿಸುವ ಮಹತ್ತರವಾದ ಕಾರ್ಯಕ್ಕೆ ಸಾಕ್ಷಿಯಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ಈ ವೇಳೆ ಸಮಾಜಸೇವಕ ಈಶ್ವರ ಮಲ್ಪೆ ವಿಶೇಷವಾಗಿ ಸನ್ಮಾನಿಸಲಾಯಿತು. ಹಾಗೂ ನಿವೃತ್ತ ಸೈನಿಕ ರವೀಂದ್ರ ಕಾಂಚನ್ ಹುಟ್ಟೂರ ಅಭಿನಂದನೆ ಸಲ್ಲಿಸಲಾಯಿತು.

ಸಭಾಧ್ಯಕ್ಷತೆಯನ್ನು ಕುಂಭಾಶಿ ಗ್ರಾಪಂ ಅಧ್ಯಕ್ಷ ಆನಂದ್ ಪೂಜಾರಿ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಮಹಾಂಕಾಳಿ ದೈವಸ್ಥಾನದ ಅನುವಂಶಿಕ ಮುಕ್ತೇಸರ ಲಕ್ಷ್ಮೀ ಹತ್ವಾರ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರವಡಿ ಇದರ ಮುಖ್ಯ ಶಿಕ್ಷಕಿ ಮಾಲತಿ ಶೆಟ್ಟಿ, ಮಹಾಂಕಾಳಿ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸೋಮ ಕಾಂಚನ್, ಮಹಾಂಕಾಳಿ ಫ್ರೆಂಡ್ಸ್ ಅಧ್ಯಕ್ಷ ಗಣೇಶ್ ಚಂದನ್ ಮತ್ತಿತರರು ಉಪಸ್ಥಿತರಿದ್ದರು. ಫ್ರೆಂಡ್ಸ್ ಮಾಜಿ ಅಧ್ಯಕ್ಷ ವಿಜಯ ಶ್ರೀಯಾನ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಮಾಜಿ ಅಧ್ಯಕ್ಷ ಹರೀಶ್ ಚಂದನ್ ನಿರೂಪಿಸಿ ವಂದಿಸಿದರು.