ಕನ್ನಡ ಪ್ರಭ ವಾರ್ತೆ ಮುಧೋಳ

ಅಖಿಲ ಕರ್ನಾಟಕ ಗೊಂದಳಿ ಸಮಾಜ ಸೇವಾ ಸಮಿತಿ ಮುಧೋಳ ಇವರ ಸಹಯೋಗದಲ್ಲಿ ನಗರದ ಗೋಲ್ಡನ್ ಸಮುದಾಯ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪಿಯು ದ್ವಿತೀಯ ವರ್ಷದ ಪರೀಕ್ಷೆ ಯಲ್ಲಿ ಉನ್ನತ ಸ್ಥಾನ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

ಗೊಂದಳಿ ಸಮಾಜದ ಮುಖಂಡ ಸುಭಾಸ ಗಾಯಕವಾಡ ಮಾತನಾಡಿ, ಹಿಂದುಳಿದ ಗೊಂದಳಿ ಸಮಾಜದ ಮಕ್ಕಳು ಶೇ.90ಕ್ಕೂ ಅಧಿಕ ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾದ ಈ ವಿದ್ಯಾರ್ಥಿಗಳಿಂದ ಮುಂದಿನ ವಿದ್ಯಾಭ್ಯಾಸ ಉತ್ತಮವಾಗಿ ಪಡೆಯಲು ಅವರಿಗೆ ಪ್ರೋತ್ಸಾಹದಾಯಕ ಈ ಸನ್ಮಾನ ಸಮಾರಂಭದ ಮುಖ್ಯ ಉದ್ದೇಶ ಆಗಿದೆ ಎಂದರು.

ಶಿವಾಜಿ ಅಡೇಕರ ಮಾತನಾಡಿ ಯಾವದೇ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿದಲ್ಲಿ ಅಂತವರನ್ನು ಗುರುತಿಸಿ ಇಂತಹ ಪ್ರೋತ್ಸಾಹದಾಯಕ ಕಾರ್ಯಗಳು ಹಮ್ಮಿಕೊಳ್ಳುವಲ್ಲಿ ಸಮಾಜದ ಮುಖಂಡರ ಸಹಕಾರ ಅಗತ್ಯವಿದೆ. ಇದರಿಂದ ಮುಂಬರುವ ವಿದ್ಯಾರ್ಥಿಗಳಿಗೂ ಪ್ರೇರಣೆ ನೀಡಿದಂತಾಗುತ್ತದೆ ಎಂದರು.

ಸನ್ಮಾನಿತ ವಿದ್ಯಾರ್ಥಿಗಳು: ಪ್ರೀತಮ್‌ ಸಂ. ಮುಖೆ (ಶೇ.96), ಕೋಮಲ್ ಸಂ. ಭೋಸಲೆ (ಶೇ.93), ವಾಸಂತಿ ಅ. ವಾಗ್ಮೊರೆ (ಶೇ.92), ಶಿಲ್ಪಾ ಶಿ. ಅಡೇಕರ (ಶೇ.91) ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾದ ಈ ವಿದ್ಯಾರ್ಥಿಗಳನ್ನು ಸಮಾಜದ ಮುಖಂಡರು, ಗಣ್ಯರು ಸನ್ಮಾನಿಸಿ ಗೌರವಿಸಲಾಯಿತು.


ಸಮಾಜದ ಪ್ರಮುಖರಾದ ಎಸ್.ಎಮ್.ಗಾಯಕವಾಡ, ಅನೀಲ ವಾಗ್ಮೋರೆ, ಸಂಜು ಮುಖೆ, ರಾಮು ಕಾಳೆ, ವಾಸು ಭೋಸಲೆ, ಮಹಾದೇವ ಗಾಯಕವಾಡ, ಎಸ್.ಎನ್.ಅಡೇಕರ, ಎಸ್.ಎನ್. ಬೂದಿಹಾಳ, ಪತ್ರಕರ್ತ ಬಿ.ಎಚ್.ಬೀಳಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪರಶುರಾಮ ವಾಗ್ಮೋಡೆ ನಿರುಪಿಸಿದರು, ಶಿವಾಜಿ ಅಡೇಕರ ಸ್ವಾಗತಿಸಿದರು, ವಿದ್ಯಾರ್ಥಿನಿ ಪ್ರಾರ್ಥಿಸಿದಳು, ಪಾಂಡು ಕಾಳೆ ವಂದಿಸಿದರು.