ದಾಂಡೇಲಿಯಲ್ಲಿ ಫೆಬ್ರುವರಿ 17,18ರಂದು ಹಾರ್ನ್‌ಬಿಲ್‌ ಹಬ್ಬ

| Published : Feb 02 2024, 01:05 AM IST

ದಾಂಡೇಲಿಯಲ್ಲಿ ಫೆಬ್ರುವರಿ 17,18ರಂದು ಹಾರ್ನ್‌ಬಿಲ್‌ ಹಬ್ಬ
Share this Article
  • FB
  • TW
  • Linkdin
  • Email

ಸಾರಾಂಶ

ಫೆ. 17,18ರಂದು ನಗರದ ಹಾರ್ನ್‌ಬಿಲ್‌ ಭವನದಲ್ಲಿ ಹಾರ್ನ್‌ಬಿಲ್‌ ಹಬ್ಬ ಆಯೋಜಿಸಲಾಗಿದೆ. ರಾಜ್ಯ ವಿವಿಧ ಭಾಗದಿಂದ ಭಾಗವಹಿಸುವ ಹಕ್ಕಿ ಪ್ರಿಯರಿಗೆ ಆನ್‌ಲೈನ್ ಹಾಗೂ ಸ್ಥಳೀಯರಿಗೆ ನೇರ ನೋಂದಣಿಗೆ ಅವಕಾಶ ಕಲ್ಪಿಸಲು ಯೋಚನೆಯೂ ಇದೆ.

ದಾಂಡೇಲಿ:

ಅರಣ್ಯ ಇಲಾಖೆ, ಹಳಿಯಾಳ ಅರಣ್ಯ ವಿಭಾಗ ಮತ್ತು ದಾಂಡೇಲಿ ಸಹಾಯಕ ಅರಣ್ಯ ಉಪ ವಲಯ ವಿಭಾಗ ವತಿಯಿಂದ ನಗರದ ಹಾರ್ನ್‌ಬಿಲ್‌ ಸಭಾಭವನದಲ್ಲಿ ಹಾರ್ನ್‌ಬಿಲ್‌ ಹಬ್ಬದ ಪೂರ್ವಭಾವಿ ಸಭೆ ನಡೆಯಿತು.ಸಭೆ ಅಧ್ಯಕ್ಷತೆ ವಹಿಸಿದ್ದ ದಾಂಡೇಲಿ ಎಸಿಎಫ್ ಸಂತೋಷ ಚವ್ಹಾಣ, ಫೆ. 17,18ರಂದು ನಗರದ ಹಾರ್ನ್‌ಬಿಲ್‌ ಭವನದಲ್ಲಿ ಹಾರ್ನ್‌ಬಿಲ್‌ ಹಬ್ಬ ಆಯೋಜಿಸಲಾಗಿದೆ.ರಾಜ್ಯ ವಿವಿಧ ಭಾಗದಿಂದ ಭಾಗವಹಿಸುವ ಹಕ್ಕಿ ಪ್ರಿಯರಿಗೆ ಆನ್‌ಲೈನ್ ಹಾಗೂ ಸ್ಥಳೀಯರಿಗೆ ನೇರ ನೋಂದಣಿಗೆ ಅವಕಾಶ ಕಲ್ಪಿಸಲು ಯೋಚನೆಯೂ ಇದೆ. ನೋಂದಣಿಯನ್ನು ಸೀಮಿತ ಸದಸ್ಯರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.ಹಾರ್ನ್‌ಬಿಲ್‌ ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಹಾರ್ನ್‌ಬಿಲ್‌ ಹಕ್ಕಿಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರಬಂಧ, ಚಿತ್ರ ಕಲೆ, ಭಿತ್ತಿಚಿತ್ರಗಳ ರಚನೆಯ ಸ್ಪರ್ಧೆಗಳು ಮುಂಚಿತವಾಗಿ ನಡೆಯಲಿದ್ದು ಕಾರ್ಯಕ್ರಮದ ದಿನ ಬಹುಮಾನ ವಿತರಿಸಲಾವುದು ಎಂದರು.ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಹಾರ್ನ್‌ಬಿಲ್‌ ಹಕ್ಕಿ ಹಬ್ಬ ಎನ್ನುವ ಬದಲು ಹಾರ್ನ್‌ಬಿಲ್‌ ಹಬ್ಬ ಎಂದು ಹೆಸರು ಇಡಲು ಸೂಚಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ, ಆಹಾರ ಮೇಳ ಹಾಗೂ ಹಾರ್ನ್‌ಬಿಲ್‌ ಹಬ್ಬವನ್ನು ಇಲಾಖೆ ಮಟ್ಟದಲ್ಲಿ ಆಚರಣೆ ಮಾಡದೆ ದಾಂಡೇಲಿ ಹಬ್ಬವನ್ನಾಗಿ ಮಾಡುವಂತೆ ಮತ್ತು ಪರಿಸರ ಪ್ರೇಮಿಗಳು, ಪರಿಸರ ತಜ್ಞರಿಂದ ಉಪನ್ಯಾಸ ಆಯೋಜಿಸುವಂತೆ ಸಲಹೆ ನೀಡಿದರು.ಪ್ರವಾಸೋದ್ಯಮಿ ಸುದರ್ಶನ ಹೆಗಡೆ ಹಕ್ಕಿಗಳನ್ನು ಗುರುತಿಸುವ ಕುರಿತು ಶಾಲಾ ಮಕ್ಕಳಿಗೆ ತರಬೇತಿ ಮಾಡಬೇಕು. ಪ್ರತಿ ಶಾಲೆಗಳೂ ಬೈನಾಕೋಲರ್ ನೀಡಬೇಕು. ಸ್ಥಳೀಯ ಪರಿಸರ ಪ್ರೇಮಿಗಳನ್ನು ಬೆಳೆಸಿಕೊಳ್ಳಬೇಕು ಎಂದರು.ನಗರಸಭೆ ಸದಸ್ಯ ಮೋಹನ್ ಹಲವಾಯಿ ಹಾಗೂ ಕೀರ್ತಿ ಗಾಂವಕರ, ಕಾರ್ಯಕ್ರಮದಲ್ಲಿ ನಗರದ ಪ್ರಮುಖರನ್ನು ಹಾಗೂ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ಕೊಡಬೇಕು ಮತ್ತು ಪ್ರವಾಸೋದ್ಯಮದ ಹೆಸರಿನಲ್ಲಿ ಈ ಹಬ್ಬ ಪ್ರಸ್ತುತಪಡಿಸಬೇಕು. ಹಕ್ಕಿಗಳ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಪ್ರತಿ ಶಾಲೆ, ಕಾಲೇಜಿನಲ್ಲಿ ಇಡೀ ವರ್ಷ ನಡೆಯಬೇಕು, ಚಿನ್ನಣ್ಣರಿಗೆ ಅರಣ್ಯ ದರ್ಶನ ಕಾರ್ಯಕ್ರಮವನ್ನು ಖಾಸಗಿ ಶಾಲೆಗಳಿಗೆ ವಿಸ್ತರಿಸುವಂತೆ ಸಲಹೆ ನೀಡಿದರು.ಈ ವೇಳೆ ಆರ್‌ಎಫ್‌ಒ ಅಪ್ಪರಾವ್ ಕಲಶೆಟಿ, ಸಂಗಮೇಶ್ವರ ಪಾಟೀಲ, ದಾಂಡೇಲಿ ಸಿಪಿಐ ಭೀಮಣ್ಣ ಸೂರಿ, ಪಿಎಸ್ಐ ಯಲ್ಲಪ್ಪ ಎಸ್, ಪರಿಸರ ಪ್ರೇಮಿ ಉಮೇಶ ಜಿ.ಇ. ಗಜಾನನ ಹಜಗಾವಂಕರ ವಿವಿಧ ಸಂಘಟನೆಗಳು ಪ್ರಯುಖರು ಇದ್ದರು.