ಅಂತ್ಯಸಂಸ್ಕಾರದ ವೇಳೆ ಹೆಜ್ಜೇನು ದಾಳಿ

| Published : Oct 14 2023, 01:00 AM IST

ಸಾರಾಂಶ

ಅಂತ್ಯಸಂಸ್ಕಾರದ ವೇಳೆ ಹೆಜ್ಜೇನು ದಾಳಿಯಿಂದ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ.
ಪಾಂಡವಪುರ: ಅಂತ್ಯಸಂಸ್ಕಾರದ ವೇಳೆ ಹೆಜ್ಜೇನು ದಾಳಿಯಿಂದ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಹೊರವಲಯದ ಜಮೀನಿನಲ್ಲಿ ಶವ ಸಂಸ್ಕಾರ ಮಾಡಲು ಹೋಗಿದ್ದ ವೇಳೆ ಗಂಧದ ಕಡ್ಡಿ, ಧೂಪದ ಹೊಗೆಗೆ ಮರದಲ್ಲಿ ಕಟ್ಟಿದ್ದ ಹೆಜ್ಜೇನು ಏಕಾಏಕಿ ದಾಳಿ ನಡೆಸಿದೆ. ದಾಳಿಯಿಂದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ ಎಲ್ಲರು ಶವವನ್ನು ಬಿಟ್ಟು ಓಡಿಹೋಗಿದ್ದಾರೆ. ಹೆಜ್ಜೇನು ಹೋದ ಬಳಿಕ ಮತ್ತೆ ವಾಪಸ್ ಬಂದು ಅಂತ್ಯ ಸಂಸ್ಕಾರ ಮಾಡಿದ್ದಾರೆ. ಹೆಜ್ಜೇನು ದಾಳಿಯಲ್ಲಿ ಬನ್ನೂರು ಪುಟ್ಟಸ್ವಾಮಿ, ಮೈಸೂರಿ ಸರಸ್ವತಿ, ಸ್ಥಳೀಯರಾದ ಅಭಿಷೇಕ್, ಶಿವರಾಜು, ದಿವ್ಯ, ಬೋರೇಗೌಡ, ಕಾರ್ತಿಕ್, ನಿತ್ಯಾನಂದ, ನಿತಿನ್ ಸೇರಿದಂತೆ 20 ಕ್ಕೂ ಮಂದಿಯ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಕೊಡಿಸಿದ್ದಾರೆ. ಘಟನೆಯಲ್ಲಿ ಬನ್ನೂರು ಪುಟ್ಟಸ್ವಾಮಿ, ಮೈಸೂರಿ ಸರಸ್ವತಿ ತೀವ್ರಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ. ಉಳಿದವರನ್ನು ಚಿಕಿತ್ಸೆ ನೀಡಿ ಸಂಜೆ ವೇಳೆಗೆ ಮನೆಗೆ ಕಳುಹಿಸಲಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸಿ.ಎ ಅರವಿಂದ್ ತಿಳಿಸಿದರು.