ಹೊಸ ಕೆರೆ ಕೋಡಿ: ಹಲವು ಗ್ರಾಮಗಳಿಗೆ ಸಂಪರ್ಕ ಕಡಿತ

| Published : Oct 20 2024, 01:58 AM IST

ಹೊಸ ಕೆರೆ ಕೋಡಿ: ಹಲವು ಗ್ರಾಮಗಳಿಗೆ ಸಂಪರ್ಕ ಕಡಿತ
Share this Article
  • FB
  • TW
  • Linkdin
  • Email

ಸಾರಾಂಶ

ಸಿರಿಗೆರೆ: ಪಟ್ಟಣದ ಹೊಸ ಕೆರೆ ಭರ್ತಿಯಾಗಿ ಎರಡು ದಿನಗಳ ಹಿಂದೆಯೇ ಕೋಡಿ ಬಿದ್ದಿತ್ತು. ಈ ದಿನ ಮೆದಿಕೇರಿಪುರ, ದೊಡ್ಡಿಗನಾಳ್‌ ಹಾಗೂ ಜಮ್ಮೇನಹಳ್ಳಿ ಹಳ್ಳಗಳ ಮೂಲಕ ಬಹಳಷ್ಟು ನೀರು ಹರಿದು ಬಂದಿದ್ದರಿಂದ ಕೆರೆಯಿಂದ ದೊಡ್ಡ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಇದರ ಪರಿಣಾಮವಾಗಿ ಅಳಗವಾಡಿ-ಸಿರಿಗೆರೆ ಸಂಪರ್ಕ ಸಾಧಿಸುವ ರಸ್ತೆಯಲ್ಲಿ ನಿರೀಕ್ಷೆ ಮೀರಿ ನೀರು ಹರಿದದ್ದರಿಂದ ಅಳಗವಾಡಿ, ಓಬಳಾಪುರ, ಬಾವಿಹಾಳ್‌ ಕಡೆ ಹೋಗುವ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಕೆಲವು ಗ್ರಾಮಗಳಿಗೆ ಹೋಗುವ ಜನರಿಗೆ ತೊಂದರೆ ಉಂಟಾಗಿತ್ತು.

ಕೋಡಿಯ ವಿಹಂಗಮ ದೃಶ್ಯವನ್ನು ಕಣ್ಣಾರೆ ಕಾಣಲು ಬಹಳಷ್ಟು ಜನರು ಸೇರಿದ್ದರು. ಸೆಲ್ಫಿ ಗೀಳಿನ ಜನರು ಫೋಟೋಗಳನ್ನು ಕ್ಲಿಕ್‌ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೋಡಿ ನೋಡಲು ಬರುವ ಕೆಲವರು ಮೊದಲೇ ಮೀನಿನ ಬಲೆಗಳನ್ನು ಸಿದ್ಧಗೊಳಿಸಿಕೊಂಡು ಬಂದಿದ್ದರು. ಕೆರೆಯಿಂದ ಹರಿಯುವ ನೀರಿನಲ್ಲಿ ಬಲೆಗಳನ್ನು ಹರಡಿ ಮೀನು ಹಿಡಿಯುವ ಕೆಲಸದಲ್ಲಿ ತಲ್ಲೀನರಾಗಿದ್ದರು. ಕೋಡಿಯಲ್ಲಿ ಪುಟಾಣಿ ಮಕ್ಕಳು ಹಿಂಜರಿಕೆ ಇಲ್ಲದೆ ಆಟವಾಡುತ್ತಿದ್ದ ದೃಶ್ಯ ಸುಂದರವಾಗಿತ್ತು. ಸಂಜೆಯವರೆಗೂ ಅಳಗವಾಡಿ-ಸಿರಿಗೆರೆ ಸಂಪರ್ಕ ರಸ್ತೆಯಲ್ಲಿ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗಿರಲಿಲ್ಲ.