ಸಾರಾಂಶ
ಹೊಸದುರ್ಗ: ಪ್ರವಾಸಕ್ಕೆಂದು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದಿದ್ದ ಖಾಸಗಿ ಬಸ್ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಗಣೇಶಗುಡಿ ಬಳಿ ಪಲ್ಟಿಯಾಗಿ 40ಕ್ಕೂ ಅಧಿಕ ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ಭಾನುವಾರ ಬೆಳಿಗ್ಗೆ ನಡೆದಿದ್ದು, ಇದರಿಂದ ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.ಪಟ್ಟಣದ ಸಂತ ಅಂಥೋನಿ ಶಾಲೆಯ 145 ಮಕ್ಕಳು 3 ಬಸ್‌ಗಳಲ್ಲಿ ಶನಿವಾರ ರಾತ್ರಿ ದಾಂಡೇಲಿ - ಜೋಯಿಡಾ ಪ್ರವಾಸಕ್ಕೆಂದು ತೆರಳಿ ಜೋಯಿಡಾದ ಮೌಳಂಗಿ ಬಳಿ ಹೋಂ ಸ್ಟೇಯೊಂದರಲ್ಲಿ ತಂಗಿದ್ದ ಈ ತಂಡ ಭಾನುವಾರ ಬೆಳಿಗ್ಗೆ ಗಣೇಶಗುಡಿಗೆ ತೆರಳಿತ್ತು. ಗಣೇಶಗುಡಿಯಲ್ಲಿ ಜಲ ಸಾಹಸ ಕ್ರೀಡೆಯನ್ನಾಡಿ ಹಿಂದಿರುಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಯಾಗಿದೆ ಎನ್ನಲಾಗುತ್ತಿದೆ.ಈ ಕುರಿತು ಪತ್ರಿಕೆಯೊಂದಿಗೆ ದೂರವಾಣಿ ಮುಖಾಂತರ ಶಾಲೆಯ ಪ್ರಾಂಶುಪಾಲರಾದ ಶಭಾನ ಮಾತನಾಡಿ, ಘಟನೆಯಲ್ಲಿ 40 ಮಕ್ಕಳಿಗೆ ಗಾಯವಾಗಿದೆ ಎನ್ನಲಾಗುತ್ತಿದೆ. ಹಾಗೇನು ಆಗಿಲ್ಲ. ಕೇವಲ 15 ಮಕ್ಕಳಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದು, ಎಲ್ಲರಿಗೂ ಪ್ರಥಮ ಚಿಕಿತ್ಸೆ ಮಾಡಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದು, ಪೋಷಕರು ಆತಂಕ ಪಡುವುದು ಬೇಕಿಲ್ಲ ಎಂದು ತಿಳಿಸಿದರು. ಎಲ್ಲಾ ಮಕ್ಕಳನ್ನು ರೆಸಾರ್ಟ್‌ವೊಂದರಲ್ಲಿ ಉಳಿಸಿಕೊಂಡಿದ್ದು, ಅವರಿಗೆ ಊಟ ನೀಡಿ ವಿಶ್ರಾಂತಿಗೆ ಬಿಡಲಾಗಿದೆ. ಅಲ್ಲದೆ ಮಕ್ಕಳು ಸುರಕ್ಷಿತವಾಗಿರುವ ಬಗ್ಗೆ ವಿಡಿಯೋ ಮಾಡಿ ಪೋಷಕರಿಗೆ ಕಳಿಸಲಾಗುತ್ತಿದೆ ಎಂದು ಹೇಳಿದರು.ಅಪಘಾತ ಪ್ರಕರಣವಾಗಿರವ ಕಾರಣ ಪೊಲೀಸ್ ಕೇಸ್ ಆಗಿದ್ದು, ಕೆಲವು ಕಾನೂನಾತ್ಮಕ ಕ್ರಮಗಳನ್ನು ಅನುಸರಿಸಬೇಕಿದ್ದು, ಸೋಮವಾರ ಬೆಳಿಗ್ಗೆ ಎಲ್ಲವನ್ನು ಅನುಸರಿಸಿ ಬೇರೆ ಬಸ್ಸಿನಲ್ಲಿ ಸಂಜೆ ವೇಳೆ ಹೊಸದುರ್ಗಕ್ಕೆ ಬರುವುದಾಗಿ ತಿಳಿಸಿದರು.ಹೊಸದುರ್ಗ: ಪ್ರವಾಸಕ್ಕೆಂದು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದಿದ್ದ ಖಾಸಗಿ ಬಸ್ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಗಣೇಶಗುಡಿ ಬಳಿ ಪಲ್ಟಿಯಾಗಿ 40ಕ್ಕೂ ಅಧಿಕ ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ಭಾನುವಾರ ಬೆಳಿಗ್ಗೆ ನಡೆದಿದ್ದು, ಇದರಿಂದ ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.ಪಟ್ಟಣದ ಸಂತ ಅಂಥೋನಿ ಶಾಲೆಯ 145 ಮಕ್ಕಳು 3 ಬಸ್‌ಗಳಲ್ಲಿ ಶನಿವಾರ ರಾತ್ರಿ ದಾಂಡೇಲಿ - ಜೋಯಿಡಾ ಪ್ರವಾಸಕ್ಕೆಂದು ತೆರಳಿ ಜೋಯಿಡಾದ ಮೌಳಂಗಿ ಬಳಿ ಹೋಂ ಸ್ಟೇಯೊಂದರಲ್ಲಿ ತಂಗಿದ್ದ ಈ ತಂಡ ಭಾನುವಾರ ಬೆಳಿಗ್ಗೆ ಗಣೇಶಗುಡಿಗೆ ತೆರಳಿತ್ತು. ಗಣೇಶಗುಡಿಯಲ್ಲಿ ಜಲ ಸಾಹಸ ಕ್ರೀಡೆಯನ್ನಾಡಿ ಹಿಂದಿರುಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಯಾಗಿದೆ ಎನ್ನಲಾಗುತ್ತಿದೆ.ಈ ಕುರಿತು ಪತ್ರಿಕೆಯೊಂದಿಗೆ ದೂರವಾಣಿ ಮುಖಾಂತರ ಶಾಲೆಯ ಪ್ರಾಂಶುಪಾಲರಾದ ಶಭಾನ ಮಾತನಾಡಿ, ಘಟನೆಯಲ್ಲಿ 40 ಮಕ್ಕಳಿಗೆ ಗಾಯವಾಗಿದೆ ಎನ್ನಲಾಗುತ್ತಿದೆ. ಹಾಗೇನು ಆಗಿಲ್ಲ. ಕೇವಲ 15 ಮಕ್ಕಳಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದು, ಎಲ್ಲರಿಗೂ ಪ್ರಥಮ ಚಿಕಿತ್ಸೆ ಮಾಡಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದು, ಪೋಷಕರು ಆತಂಕ ಪಡುವುದು ಬೇಕಿಲ್ಲ ಎಂದು ತಿಳಿಸಿದರು. ಎಲ್ಲಾ ಮಕ್ಕಳನ್ನು ರೆಸಾರ್ಟ್‌ವೊಂದರಲ್ಲಿ ಉಳಿಸಿಕೊಂಡಿದ್ದು, ಅವರಿಗೆ ಊಟ ನೀಡಿ ವಿಶ್ರಾಂತಿಗೆ ಬಿಡಲಾಗಿದೆ. ಅಲ್ಲದೆ ಮಕ್ಕಳು ಸುರಕ್ಷಿತವಾಗಿರುವ ಬಗ್ಗೆ ವಿಡಿಯೋ ಮಾಡಿ ಪೋಷಕರಿಗೆ ಕಳಿಸಲಾಗುತ್ತಿದೆ ಎಂದು ಹೇಳಿದರು.ಅಪಘಾತ ಪ್ರಕರಣವಾಗಿರವ ಕಾರಣ ಪೊಲೀಸ್ ಕೇಸ್ ಆಗಿದ್ದು, ಕೆಲವು ಕಾನೂನಾತ್ಮಕ ಕ್ರಮಗಳನ್ನು ಅನುಸರಿಸಬೇಕಿದ್ದು, ಸೋಮವಾರ ಬೆಳಿಗ್ಗೆ ಎಲ್ಲವನ್ನು ಅನುಸರಿಸಿ ಬೇರೆ ಬಸ್ಸಿನಲ್ಲಿ ಸಂಜೆ ವೇಳೆ ಹೊಸದುರ್ಗಕ್ಕೆ ಬರುವುದಾಗಿ ತಿಳಿಸಿದರು.ಹೊಸದುರ್ಗ: ಪ್ರವಾಸಕ್ಕೆಂದು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದಿದ್ದ ಖಾಸಗಿ ಬಸ್ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಗಣೇಶಗುಡಿ ಬಳಿ ಪಲ್ಟಿಯಾಗಿ 40ಕ್ಕೂ ಅಧಿಕ ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ಭಾನುವಾರ ಬೆಳಿಗ್ಗೆ ನಡೆದಿದ್ದು, ಇದರಿಂದ ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.ಪಟ್ಟಣದ ಸಂತ ಅಂಥೋನಿ ಶಾಲೆಯ 145 ಮಕ್ಕಳು 3 ಬಸ್‌ಗಳಲ್ಲಿ ಶನಿವಾರ ರಾತ್ರಿ ದಾಂಡೇಲಿ - ಜೋಯಿಡಾ ಪ್ರವಾಸಕ್ಕೆಂದು ತೆರಳಿ ಜೋಯಿಡಾದ ಮೌಳಂಗಿ ಬಳಿ ಹೋಂ ಸ್ಟೇಯೊಂದರಲ್ಲಿ ತಂಗಿದ್ದ ಈ ತಂಡ ಭಾನುವಾರ ಬೆಳಿಗ್ಗೆ ಗಣೇಶಗುಡಿಗೆ ತೆರಳಿತ್ತು. ಗಣೇಶಗುಡಿಯಲ್ಲಿ ಜಲ ಸಾಹಸ ಕ್ರೀಡೆಯನ್ನಾಡಿ ಹಿಂದಿರುಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಯಾಗಿದೆ ಎನ್ನಲಾಗುತ್ತಿದೆ.ಈ ಕುರಿತು ಪತ್ರಿಕೆಯೊಂದಿಗೆ ದೂರವಾಣಿ ಮುಖಾಂತರ ಶಾಲೆಯ ಪ್ರಾಂಶುಪಾಲರಾದ ಶಭಾನ ಮಾತನಾಡಿ, ಘಟನೆಯಲ್ಲಿ 40 ಮಕ್ಕಳಿಗೆ ಗಾಯವಾಗಿದೆ ಎನ್ನಲಾಗುತ್ತಿದೆ. ಹಾಗೇನು ಆಗಿಲ್ಲ. ಕೇವಲ 15 ಮಕ್ಕಳಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದು, ಎಲ್ಲರಿಗೂ ಪ್ರಥಮ ಚಿಕಿತ್ಸೆ ಮಾಡಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದು, ಪೋಷಕರು ಆತಂಕ ಪಡುವುದು ಬೇಕಿಲ್ಲ ಎಂದು ತಿಳಿಸಿದರು. ಎಲ್ಲಾ ಮಕ್ಕಳನ್ನು ರೆಸಾರ್ಟ್‌ವೊಂದರಲ್ಲಿ ಉಳಿಸಿಕೊಂಡಿದ್ದು, ಅವರಿಗೆ ಊಟ ನೀಡಿ ವಿಶ್ರಾಂತಿಗೆ ಬಿಡಲಾಗಿದೆ. ಅಲ್ಲದೆ ಮಕ್ಕಳು ಸುರಕ್ಷಿತವಾಗಿರುವ ಬಗ್ಗೆ ವಿಡಿಯೋ ಮಾಡಿ ಪೋಷಕರಿಗೆ ಕಳಿಸಲಾಗುತ್ತಿದೆ ಎಂದು ಹೇಳಿದರು.ಅಪಘಾತ ಪ್ರಕರಣವಾಗಿರವ ಕಾರಣ ಪೊಲೀಸ್ ಕೇಸ್ ಆಗಿದ್ದು, ಕೆಲವು ಕಾನೂನಾತ್ಮಕ ಕ್ರಮಗಳನ್ನು ಅನುಸರಿಸಬೇಕಿದ್ದು, ಸೋಮವಾರ ಬೆಳಿಗ್ಗೆ ಎಲ್ಲವನ್ನು ಅನುಸರಿಸಿ ಬೇರೆ ಬಸ್ಸಿನಲ್ಲಿ ಸಂಜೆ ವೇಳೆ ಹೊಸದುರ್ಗಕ್ಕೆ ಬರುವುದಾಗಿ ತಿಳಿಸಿದರು.