ಯಲಬುರ್ಗಾ: ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಇಚ್ಛಾಶಕ್ತಿಯಿಂದ ಕ್ಷೇತ್ರಕ್ಕೆ ಒಟ್ಟು ಆರು ಸಾವಿರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ಸೌಲಭ್ಯ ಒದಗಿಸಲಾಗಿದೆ. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ತಾಲೂಕಾಧ್ಯಕ್ಷ ಸುಧೀರ್ ಕೊರ್ಲಹಳ್ಳಿ ಹೇಳಿದರು.

ಪಟ್ಟಣದ ಸ್ನಾತಕೋತ್ತರ ಕೇಂದ್ರದ ಪಕ್ಕದಲ್ಲಿರುವ ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯರು ಮತ್ತು ಬಾಲಕರ ವಸತಿ ನಿಲಯದ ಕೊಠಡಿ ಪೂಜಾ ಕಾರ್ಯಕ್ರಮದಲ್ಲಿ ಹಾಸ್ಟೆಲ್ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ಷೇತ್ರದ ಗುನ್ನಾಳ,ತಳಕಲ್,ತಳಬಾಳ ಹಾಗೂ ಯಲಬುರ್ಗಾದಲ್ಲಿ ನೂತನ ಹಾಸ್ಟೆಲ್‌ ಮಂಜೂರಾಗಿದ್ದು, ಅವುಗಳನ್ನು ಪ್ರಾರಂಭಿಸಲಾಗಿದೆ. ಪ್ರಸ್ತುತ ಗ್ರಾಮೀಣ ಪ್ರದೇಶದ ಎರಡು ಸಾವಿರ ವಿದ್ಯಾರ್ಥಿಗಳಿಗೆ ವಸತಿ ನಿಲಯದ ಸೌಲಭ್ಯ ಶಾಸಕ ಬಸವರಾಜ ರಾಯರಡ್ಡಿ ಮಂಜೂರು ಮಾಡಿಸಿ ಪ್ರಾರಂಭಿಸಿದ್ದಾರೆ. ಕ್ಷೇತ್ರದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬೇರೆ ಜಿಲ್ಲೆ, ರಾಜ್ಯಗಳಲ್ಲಿ ವಿದ್ಯಾಭ್ಯಾಸ ಮಾಡುವ ಅನಿವಾರ್ಯತೆ ಇತ್ತು. ತಾಲೂಕಿನಲ್ಲಿಯೇ ಎಲ್‌ಕೆಜಿಯಿಂದ ಪಿಜಿ,ಇಂಜನಿಯರಿಂಗ್, ಬಿಎಸ್ಸಿ ನರ್ಸಿಂಗ್,ಪಾಲಿಟೆಕ್ನಿಕ್ ಕಾಲೇಜು ಮತ್ತು ಕೌಶಾಲ್ಯಾಭಿವೃದ್ದಿ ಕೇಂದ್ರ ಸೇರಿದಂತೆ ಶೈಕ್ಷಣಿಕವಾಗಿ ರಾಯರಡ್ಡಿ ಹೆಚ್ಚು ಒತ್ತು ನೀಡಿದ್ದಾರೆ. ಹೀಗಾಗಿ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಹೊಸ ಮೈಲಿಗಲ್ಲು ಸೃಷ್ಠಿಸಲಾಗಿದೆ ಎಂದರು.

ಬಿಸಿಎಂ ಜಿಲ್ಲಾ ಅಧಿಕಾರಿ ನಾಗಮಣಿ ಮಾತನಾಡಿ, ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವ ಉದ್ದೇಶದಿಂದ ನಮ್ಮ ಇಲಾಖೆಯಿಂದ ಹಾಸ್ಟೆಲ್ ತೆರೆಯಲಾಗಿದೆ. ಇದಕ್ಕೆ ಶಾಸಕರ ಕೊಡುಗೆ ಅಪಾರವಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಪರಿಶ್ರಮದಿಂದ ಅಧ್ಯಯನ ಮಾಡುವ ಮೂಲಕ ಹೆತ್ತವರ ಕೀರ್ತಿ ತರಬೇಕು ಎಂದರು.

ಅರ್ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ ಮಾತನಾಡಿದರು. ಈ ಸಂದರ್ಭ ಪಿಜಿ ಸೆಂಟರ್ ಆಡಳಿತಾಧಿಕಾರಿ ಕೆ.ಎಚ್. ಛತ್ರದ, ಬಿಸಿಎಂ ಅಧಿಕಾರಿ ಡಾ. ಶಿವಶಂಕರ ಕರಡಕಲ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಶಿಧರ ಸಕ್ರಿ, ಜಿಪಂ ಮಾಜಿ ಸದಸ್ಯ ಕೆರಿಬಸಪ್ಪ ನಿಡಗುಂದಿ, ಕೆಎಂಎಫ್‌ ನಿರ್ದೇಶಕ ಹಂಪಯ್ಯಸ್ವಾಮಿ ಹಿರೇಮಠ, ಎಆರ್‌ಎಸ್ ಉಪಾಧ್ಯಕ್ಷ ಡಾ. ಶಿವನಗೌಡ ದಾನರಡ್ಡಿ, ಭೂ‌ನ್ಯಾಯ ಮಂಡಳಿ ಸದಸ್ಯ ಮಲ್ಲಿಕಾರ್ಜುನ ಜಕ್ಕಲಿ, ಡಾ.ನಂದಿತಾ ದಾನರಡ್ಡಿ, ಶರಣಪ್ಪ ಗಾಂಜಿ, ರೇವಣಪ್ಪ ಹಿರೇಕುರಬರ, ರಿಯಾಜ‌ ಅಹ್ಮದ್ ಖಾಜಿ, ವಸಂತ ಕುಲಕರ್ಣಿ, ಮಲ್ಲೇಶಗೌಡ ಮಾಲಿಪಾಟೀಲ್, ಹನುಮಂತ ಭಜಂತ್ರಿ, ವಿದ್ಯಾರ್ಥಿಗಳು ಇದ್ದರು.