ಸಾರಾಂಶ
ತಾಲೂಕಿನ ಹಿರೇಗೋಣಿಗೆರೆಯಲ್ಲಿ ಆಕಸ್ಮಿಕ ಬೆಂಕಿಯಿಂದ ಮನೆ ಸುಟ್ಟ ಕರಕಲಾದ ಘಟನೆ ಶುಕ್ರವಾರ ಬೆಳಗ್ಗೆ 9 ಗಂಟೆಗೆ ತಾಲೂಕಿನ ಹಿರೇಗೋಣಿಗೆರೆಯಲ್ಲಿ ನಡೆದಿದೆ. ಘಟನೆಯಲ್ಲಿ ಲಕ್ಷಾಂತರ ರು. ನಷ್ಟ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ.
- ರವಿಕುಮಾರ್ ಎಂಬವರ ಮನೆಯಲ್ಲಿ ಘಟನೆ । ಸ್ಥಳಕ್ಕೆ ಅಧಿಕಾರಿಗಳ ಭೇಟಿ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ಹಿರೇಗೋಣಿಗೆರೆಯಲ್ಲಿ ಆಕಸ್ಮಿಕ ಬೆಂಕಿಯಿಂದ ಮನೆ ಸುಟ್ಟ ಕರಕಲಾದ ಘಟನೆ ಶುಕ್ರವಾರ ಬೆಳಗ್ಗೆ 9 ಗಂಟೆಗೆ ತಾಲೂಕಿನ ಹಿರೇಗೋಣಿಗೆರೆಯಲ್ಲಿ ನಡೆದಿದೆ. ಘಟನೆಯಲ್ಲಿ ಲಕ್ಷಾಂತರ ರು. ನಷ್ಟ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ.ಗ್ರಾಮದ ರವಿಕುಮಾರ್ ಎಂಬವರಿಗೆ ಸೇರಿದ ಮನೆ ಬೆಂಕಿಗೆ ಆಹುತಿಯಾಗಿದೆ. ರವಿಕುಮಾರ್ ಅವರ ಪತ್ನಿ ನೇತ್ರಾವತಿ ಹಾಗೂ ಹಿರಿಯ ಮಗ ಕಿರಣ್‌ಕುಮಾರ್ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಗೆ ಹೋಗಿದ್ದರು. ಕಿರಿಯ ಮಗ ಅರುಣ್ ಕುಮಾರ್ ಬೇರೆಯವರ ಹೊಲದಲ್ಲಿ ಮೆಕ್ಕೆಜೋಳ ತೆನೆ ಮುರಿಯಲು ಹೋಗಿದ್ದರು. ಮನೆ ಯಜಮಾನ ರವಿಕುಮಾರ್ ಬೇರೆಯವರ ತೋಟದಲ್ಲಿ ಮೋಟಾರ್ ರಿಪೇರಿ ಮಾಡಿಸಲು ಹೋಗಿದ್ದರು. ಈ ವೇಳೆ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಮನೆಗೆ ಬೆಂಕಿಬಿದ್ದ ತಕ್ಷಣ ನೆರೆಹೊರೆಯವರು ಹಾಗೂ ಇತರರು ಬೆಂಕಿ ಆರಿಸಲು ಪ್ರಯತ್ನಿಸಿದರು. ಆದರೆ, ಪ್ರಯೋಜನವಾಗಲಿಲ್ಲ. ಅಗ್ನಿ ಶಾಮಕದಳಕ್ಕೆ ತಿಳಿಸಿದ ಮೇರೆಗೆ ಕರೆ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಿದರು. ಕುಟುಂಬದವರ ರೋದನ ಮನಕಲಕುವಂತಿತ್ತು. ಸ್ಥಳಕ್ಕೆ ಕಂದಾಯ ಇಲಾಖೆ, ಗ್ರಾಮ ಲೆಕ್ಕಾಧಿಕಾರಿಗಳು, ಅಧಿಕಾರಿಗಳು ಬಂದು ಪರಿಶೀಲಿಸಿದರು.- - -
(ಬಾಕ್ಸ್) * ಬೀದಿಗೆ ಬಿದ್ದ ಕುಟುಂಬ ಘಟನೆಯಲ್ಲಿ ಮನೆಯಲ್ಲಿದ್ದ ಬೈಕ್, ಹೊಲಿಗೆ ಯಂತ್ರ, ಆಹಾರ ಪದಾರ್ಥ, ಮನೆ ನಿರ್ಮಾಣಕ್ಕೆ ತಂದಿದ್ದ ನಾಟ, ಬೀರುವಿನಲ್ಲಿದ್ದ 6 ತೊಲ ಬಂಗಾರ, ₹1.50 ಲಕ್ಷ ಹಣ, ಮಂಚ, ಪಾತ್ರೆಗಳು, ಮನೆ ಪಕ್ಕದಲ್ಲೇ ಇದ್ದ ಒಂದು ಸಾವಿರ ಅಡಕೆ ಗಿಡಗಳು ಸುಟ್ಟುಹೋಗಿವೆ. ಕುಟುಂಬದವರು ಉಟ್ಟ ಬಟ್ಟೆಗಳನ್ನು ಬಿಟ್ಟರೆ, ಉಳಿದೆಲ್ಲವೂ ಬೆಂಕಿಗೆ ಆಹುತಿಯಾಗಿ, ಅಕ್ಷರ ಸಹಃ ಕುಟುಂಬ ಬೀದಿಗೆ ಬಂದಿದೆ.- - -
-25ಎಚ್.ಎಲ್.ಐ1.ಜೆಪಿಜಿ:ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆಯಲ್ಲಿ ಮನೆಗೆ ಆಕಸ್ಮಿಕ ಬೆಂಕಿ ತಗುಲಿ, ಅಪಾರ ನಷ್ಟ ಸಂಭವಿಸಿರುವುದು.
;Resize=(128,128))
;Resize=(128,128))