ತಾಲೂಕಿನ ಕೊಡೂರು ಗ್ರಾಮದಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಯಲ್ಲಿ ಯಶಸ್ವಿಯಾಗಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಾಲೂರುಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಲೂರು ಪೊಲೀಸರು ಬಂಧಿಸಿ ₹3.36 ಲಕ್ಷ ರು. ಮೌಲ್ಯದ ಚಿನ್ನಾಭರಣದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ತಾಲೂಕಿನ ಕೊಡೂರು ಗ್ರಾಮದಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಯಲ್ಲಿ ಯಶಸ್ವಿಯಾಗಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ. ಕಳೆದ ಡಿ. 15ರಂದು ರಾತ್ರಿ ಕೊಡೂರು ಕಿರಣ್ ಬಿನ್ ಶ್ರೀನಿವಾಸ ಅವರ ಮನೆಯ ಬೀಗ ಮುರಿದು 3 ಜೊತೆ ಓಲೆ, 2 ಬಂಗಾರದ ಸರಗಳು, 1 ಉಂಗುರ ಹಾಗೂ ನಗದು ಹಣವನ್ನು ಕಳವು ಮಾಡಿ ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿ ಕೊಂಡಿದ್ದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಆರೋಪಿಯಿಂದ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮತ್ತೊಂದು ಕಳವು ಪ್ರಕರಣವು ಬೆಳಕಿಗೆ ಬಂಗಾರದ ಒಡವೆಗಳು ಸೇರಿದಂತೆ ಒಟ್ಟು 28 ಗ್ರಾಂ ಚಿನ್ನಾಭರಣಗಳು ವಶಕ್ಕೆ ಪಡೆದಿದ್ದು ಇದರ ಮೌಲ್ಯ ಸುಮಾರು 3.36 ಲಕ್ಷ ರು. ಗಳಾಗಿದೆ. ಮಾಲೂರು ಠಾಣೆಯ ಇನ್ಸ್‌ಪೆಕ್ಟರ್ ರಾಮಪ್ಪ ಬಿ.ಗುತ್ತೆದಾರ್, ಪಿ.ಎಸ್.ಐ. ಗೀತಮ್ಮ, ಶಾಂತಮ್ಮ ಎ.ಎಸ್.ಐ. ರಮೇಶ್ ಬಾಬು ಹಾಗೂ ಸಿಬ್ಬಂದಿಗಳಾದ ಮುರಳಿ ನಾಗರಾಜ್ ಪೂಜಾರ್ ,ನಾಗಪ್ಪ ತಳವಾರ್, ಮುನಿರತ್ನಮ್ಮ, ಆಂಜನೇಯ ಕಾರ್ಯಾಚರಣೆಯಲ್ಲಿ ಇದ್ದರು.
