ಸಾರಾಂಶ
ತಾಲೂಕಿನ ಗಂಡಸಿ ಹೋಬಳಿ ವಡಗರಹಳ್ಳಿ ಗ್ರಾಮದಲ್ಲಿ ಭಾರಿ ಮಳೆ ಹಾಗೂ ಬಿರುಗಾಳಿಗೆ ರೈತರ ಮನೆ ಹಾಗೂ ಹಸುವಿನ ಕೊಟ್ಟಿಗೆಯ ಸೀಟ್ ಹಾರಿ ಹೋಗಿದ್ದು, ಲಕ್ಷಾಂತರ ರು. ನಷ್ಟ ಸಂಭವಿಸಿದೆ. ಶುಕ್ರವಾರ ಸಂಜೆ ದಿಢೀರನೇ ಬಂದ ಮಳೆ ಹಾಗೂ ಬಿರುಗಾಳಿಗೆ ಮನೆಯ ಸೀಟ್‌ಗಳು, ರಾಗಿ, ಮನೆಯ ವಸ್ತುಗಳು, ಸೇರಿದಂತೆ ಕೊಟ್ಟಿಗೆಯಲ್ಲಿ ಕಟ್ಟು ಹಾಕಿದ ಹಸುಗಳಿಗೂ ಹಾನಿಯಾಗಿದೆ
ಅರಸೀಕೆರೆ: ತಾಲೂಕಿನ ಗಂಡಸಿ ಹೋಬಳಿ ವಡಗರಹಳ್ಳಿ ಗ್ರಾಮದಲ್ಲಿ ಭಾರಿ ಮಳೆ ಹಾಗೂ ಬಿರುಗಾಳಿಗೆ ರೈತರ ಮನೆ ಹಾಗೂ ಹಸುವಿನ ಕೊಟ್ಟಿಗೆಯ ಸೀಟ್ ಹಾರಿ ಹೋಗಿದ್ದು, ಲಕ್ಷಾಂತರ ರು. ನಷ್ಟ ಸಂಭವಿಸಿದೆ. ಶುಕ್ರವಾರ ಸಂಜೆ ದಿಢೀರನೇ ಬಂದ ಮಳೆ ಹಾಗೂ ಬಿರುಗಾಳಿಗೆ ಮನೆಯ ಸೀಟ್‌ಗಳು, ರಾಗಿ, ಮನೆಯ ವಸ್ತುಗಳು, ಸೇರಿದಂತೆ ಕೊಟ್ಟಿಗೆಯಲ್ಲಿ ಕಟ್ಟು ಹಾಕಿದ ಹಸುಗಳಿಗೂ ಹಾನಿಯಾಗಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ. ಮನೆಯ ಮಾಲೀಕ ಹಾಗೂ ರೈತ ರಂಗಸ್ವಾಮಿ ಮಾತನಾಡಿ, ಕಾರ್ಯಕ್ರಮದ ನಿಮಿತ್ತ ಕುಟುಂಬದವರು ಹೊರ ಹೋಗಿದ್ದ ಸಂದರ್ಭದಲ್ಲಿ ಏಕಾಏಕಿ ಬಂದ ಬಿರುಗಾಳಿಗೆ ಹಸುವಿನ ಕೊಟ್ಟಿಗೆ ಹಾಗೂ ಮನೆಯ ಎಲ್ಲಾ ಸೀಟುಗಳು ಕಿತ್ತು ಹೋಗಿದ್ದು ಮನೆಯಲ್ಲಿ ಸಂಗ್ರಹಿಸಿದ್ದ ದವಸ ಧಾನ್ಯಗಳು ಕೂಡ ಮಳೆಗೆ ನೆಂದು ಹಾನಿಯಾಗಿದೆ. ಅಲ್ಲದೆ ಮನೆಯ ವಸ್ತುಗಳು ಕೂಡ ನೆಂದು ಲಕ್ಷಾಂತರ ರು. ನಷ್ಟ ಸಂಭವಿಸಿದೆ ಎಂದು ಹೇಳಿದರು. ಜೆಡಿಎಸ್ ಮುಖಂಡ ಗಂಗಾಧರ್ ಮಾತನಾಡಿ, ಮಳೆಯಿಂದ ನಷ್ಟ ಅನುಭವಿಸಿರುವ ರೈತರ ಮನೆಗೆ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡಬೇಕು ಎಂದರು.