ಸಾರಾಂಶ
ಪಾವಗಡ: ಯಾರು ಇಲ್ಲದ ವೇಳೆ ಕನ್ನ ಹಾಕಿದ ದರೋಡೆಕೋರರು ಮನೆಯೊಂದರ ಡೋರ್ ಲಾಕ್ ಒಡೆದು ಮನೆಯ ಬಿರುವಿನಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣ ಕದ್ದು ಪರಾರಿಯಾದ ಘಟನೆ ಶುಕ್ರವಾರ ರಾತ್ರಿ ಇಲ್ಲಿನ ಶ್ರೀನಿವಾಸ ನಗರದಲ್ಲಿ ನಡೆದಿದೆ.
ಪಟ್ಟಣದ ಶ್ರೀನಿವಾಸ ನಗರದಲ್ಲಿ ವಿಶ್ವಮೋಹನ್ ಗುಪ್ತಾ ಎನ್ನುವರು ಮನೆಗೆ ಕನ್ನ ಹಾಕಿರುವ ಕಳ್ಳರು,ಒಳಪ್ರವೇಶಿಸಿ ಬಿರುವಿನ ಬೀಗ ಒಡೆದು 80 ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ 50 ಸಾವಿರ ನಗದು ತೆಗೆದುಕೊಂಡು ಪರಾರಿಯಾಗಿರುವುದಾಗಿದ್ದಾರೆ. ಕಳೆದ ಎರಡು ದಿನಗಳಿಂದ ವಿಶ್ವಮೋಹನ್ ಗುಪ್ತಾ ಹಾಗೂ ಕುಟುಂಬ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ತೆರಳಿದ್ದರೆನ್ನಲಾಗಿದೆ. ಇದೇ ಮನೆಯ ಮೇಲ್ಭಾಗದ ಕೊಠಡಿಯಲ್ಲಿ ವಿಶ್ವ ಮೋಹನ ಗುಪ್ತಾ ಅವರ ಅಂಗಡಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ವಾಸವಿದ್ದು ಅವರನ್ನು ಹೊರಬರದಂತೆ ಕೊಠಡಿಯ ಹೊರಬಾಗಿಲಿಗೆ ಬೀಗ ಜಡಿದು ಕೃತ್ಯವೆಸಗಿದ್ದಾರೆ. ಇದಾದ ಕ್ಷಣಹೊತ್ತದಲ್ಲಿ ಆತ ಎಚ್ಚರಗೊಂಡಿದ್ದು ಹೊರಬಾಗಿಲು ಲಾಕ್ ಮಾಡಿದ್ದರಿಂದ ಕಂಗಲಾಗಿ ಕೂಡಲೇ ಸೆಲ್ ಮೂಲಕ ಸ್ಥಳೀಯರಿಗೆ ಕರೆ ಮಾಡಿ ಹೊರ ಲಾಕ್ ಓಪನ್ ಮಾಡಿಸಿ ಹೊರ ಬಂದಿದ್ದಾರೆ. ಆ ಬಳಿಕ ಪರಿಶೀಲಿಸಿದಾಗ ಕಳ್ಳತನ ನಡೆದ ಬಗ್ಗೆ ಖಚಿತವಾಗಿದ್ದು ಕೂಡಲೇ ಬೆಂಗಳೂರಿನಲ್ಲಿದ್ದ ಮನೆಯ ಮಾಲೀಕ ವಿಶ್ವಮೋಹನ್‌ಗುಪ್ತಾರಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ವಿಷಯ ತಿಳಿಯುತ್ತಿದ್ದಂತೆ ಪಾವಗಡ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.