ಶೀಘ್ರದಲ್ಲೇ ಪೌರ ಕಾರ್ಮಿಕರಿಗೆ ನಿವೇಶನ

| Published : Oct 11 2025, 12:02 AM IST

ಶೀಘ್ರದಲ್ಲೇ ಪೌರ ಕಾರ್ಮಿಕರಿಗೆ ನಿವೇಶನ
Share this Article
  • FB
  • TW
  • Linkdin
  • Email

ಸಾರಾಂಶ

ಪೌರಕಾರ್ಮಿಕರ ಬಗ್ಗೆ ಸ್ವತಃ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಅಪಾರವಾದ ಗೌರವವನ್ನು ತೋರಿದ್ದಾರೆ. ಕಾರ್ಮಿಕರು ಮಳೆ, ಗಾಳಿ, ಚಳಿ ಎನ್ನದೇ ನಸುಕಿನಲ್ಲಿ ಸ್ಚಚ್ಛ ಮಾಡುವ ಪೌರಕಾರ್ಮಿಕರ ಸೇವೆಯನ್ನು ಮರೆಯಲು ಸಾಧ್ಯವಿಲ್ಲ. ಅವರಿಗೆ ಸಲ್ಲಬೇಕಾದ ಸವಲತ್ತು ದೊರಕಬೇಕು. ಪೌರಕಾರ್ಮಿಕರು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ, ಶ್ರದ್ಧೆಯಿಂದ ಮನಃಪೂರ್ವಕವಾಗಿ ಮಾಡುತ್ತಿದ್ದಾರೆ. ಚನ್ನಕೇಶವ ಸ್ವಾಮಿ ರಥೋತ್ಸವ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಆ ಸಂದರ್ಭದ ಸ್ವಚ್ಛತೆಗೊಳಿಸುವ ಕೀರ್ತಿ ಪೌರಕಾರ್ಮಿಕರಿಗೆ ಸಲ್ಲುತ್ತದೆ, ಪ್ರತಿವರ್ಷ ಪುರಸಭಾ ವತಿಯಿಂದ ಕಾರ್ಮಿಕರನ್ನ ಸನ್ಮಾನಿಸುತ್ತಿರುವುದು ಜನಮೆಚ್ಚುವ ಕೆಲಸವಾಗಿದೆ. ನಿವೇಶನ ನೀಡಲು ಮತ್ತು ನೀರು ಸರಬರಾಜುದಾರರಿಗೆ ಎಲ್ಲ ರೀತಿಯ ಸವಲತ್ತು ಕಲ್ಪಿಸಲು ಸದನದಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಪ್ರವಾಸಿಕೇಂದ್ರ ಬೇಲೂರಿಗೆ ದಿನನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಪಟ್ಟಣದ ಸ್ವಚ್ಛತಾ ಕಾರ್ಯದಲ್ಲಿ ಪೌರ ಕಾರ್ಮಿಕರು ತಮ್ಮನ್ನು ತೊಡಗಿಸಿಕೊಂಡು ಸುಂದರವಾಗಿ ಕಾಣಲು ಕಾರಣರಾಗಿದ್ದಾರೆ. ಹಾಗಾಗಿ ಅವರಿಗೆ ಶೀಘ್ರದಲ್ಲೇ ನಿವೇಶನ ನೀಡಲು ಬದ್ಧವಾಗಿರುವೆ ಎಂದು ಬೇಲೂರು ಶಾಸಕ ಎಚ್.ಕೆ.ಸುರೇಶ್ ಹೇಳಿದರು. ಪಟ್ಟಣದ ಜೆಪಿ ನಗರದಲ್ಲಿನ ಆರ್ವಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಪುರಸಭೆ ವತಿಯಿಂದ ಹಮ್ಮಿಕೊಂಡ ಪೌರಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ಪೌರಕಾರ್ಮಿಕರ ಬಗ್ಗೆ ಸ್ವತಃ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಅಪಾರವಾದ ಗೌರವವನ್ನು ತೋರಿದ್ದಾರೆ. ಕಾರ್ಮಿಕರು ಮಳೆ, ಗಾಳಿ, ಚಳಿ ಎನ್ನದೇ ನಸುಕಿನಲ್ಲಿ ಸ್ಚಚ್ಛ ಮಾಡುವ ಪೌರಕಾರ್ಮಿಕರ ಸೇವೆಯನ್ನು ಮರೆಯಲು ಸಾಧ್ಯವಿಲ್ಲ. ಅವರಿಗೆ ಸಲ್ಲಬೇಕಾದ ಸವಲತ್ತು ದೊರಕಬೇಕು. ಪೌರಕಾರ್ಮಿಕರು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ, ಶ್ರದ್ಧೆಯಿಂದ ಮನಃಪೂರ್ವಕವಾಗಿ ಮಾಡುತ್ತಿದ್ದಾರೆ. ಚನ್ನಕೇಶವ ಸ್ವಾಮಿ ರಥೋತ್ಸವ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಆ ಸಂದರ್ಭದ ಸ್ವಚ್ಛತೆಗೊಳಿಸುವ ಕೀರ್ತಿ ಪೌರಕಾರ್ಮಿಕರಿಗೆ ಸಲ್ಲುತ್ತದೆ, ಪ್ರತಿವರ್ಷ ಪುರಸಭಾ ವತಿಯಿಂದ ಕಾರ್ಮಿಕರನ್ನ ಸನ್ಮಾನಿಸುತ್ತಿರುವುದು ಜನಮೆಚ್ಚುವ ಕೆಲಸವಾಗಿದೆ. ನಿವೇಶನ ನೀಡಲು ಮತ್ತು ನೀರು ಸರಬರಾಜುದಾರರಿಗೆ ಎಲ್ಲ ರೀತಿಯ ಸವಲತ್ತು ಕಲ್ಪಿಸಲು ಸದನದಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದರು.ಪುರಸಭಾ ಪ್ರಭಾರ ಅಧ್ಯಕ್ಷರಾದ ಉಷಾ ಸತೀಶ್ ಮಾತನಾಡಿ, ಸ್ವಚ್ಛತೆ ಕೈಗೊಳ್ಳುವಲ್ಲಿ ಪೌರಕಾರ್ಮಿಕರ ಸೇವೆ ಶ್ಲಾಘನೀಯ. ಸ್ವಚ್ಛತೆಯಲ್ಲಿ ಬೇಲೂರಿನ ಕೀರ್ತಿಗೆ ಪೌರಕಾರ್ಮಿಕರ ಶ್ರಮ ಕಾರಣ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡುಗಳನ್ನು ಆಡಿದ ಮಾಜಿ ಅಧ್ಯಕ್ಷೆ ತೀರ್ಥಕುಮಾರಿ, ಪೌರಕಾರ್ಮಿಕರು ಇಂದಿನವರೆಗೂ ನಿವೇಶನ ಮತ್ತು ಮನೆ ಇಲ್ಲದೆ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಶಾಸಕರು ಶೀಘ್ರದಲ್ಲೇ ನಿವೇಶನ ವಿತರಿಸಬೇಕು ಮತ್ತು ಸಾಮಾನ್ಯವಾಗಿ ಪೌರಕಾರ್ಮಿಕರು ಆರೋಗ್ಯದ ಬಗ್ಗೆ ಕಾಳಜಿ ಇಲ್ಲದ ಕಾರಣದಿಂದ ಹೆಚ್ಚು ಹೆಚ್ಚು ಅನಾರೋಗ್ಯ ಪೀಡಿತರಾಗಿದ್ದಾರೆ. ವಿಶೇಷವಾಗಿ ಪೌರಕಾರ್ಮಿಕರು ಮತ್ತು ನೀರು ಸರಬರಾಜುಗಾರರ ನಡುವೆ ಮಲತಾಯಿ ಧೋರಣೆಯನ್ನು ಗುತ್ತಿಗೆದಾರರಿಂದ ಶೋಷಣೆ ನಡೆಯುತ್ತಿದೆ, ಪೌರಕಾರ್ಮಿಕರಿಗೆ ಸೂಕ್ತ ಭದ್ರತೆ ನೀಡಬೇಕು ಎಂದರು.ಕಾರ್ಯಕ್ರಮದಲ್ಲಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ತೌಫಿಕ್‌, ಪೌರಸಭಾ ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾಂ, ಪುರಸಭಾ ಸದಸ್ಯರಾದ ತೀರ್ಥಕುಮಾರಿ ವೆಂಕಟೇಶ, ಎ.ಆರ್.ಅಶೋಕ, ಬಿ.ಗಿರೀಶ, ಜಮಾಲ್ಲುದ್ದೀನ್, ಆಶೋಕ್, ಪ್ರಭಾಕರ್, ಬಿ.ಸಿ.ಜಗದೀಶ್, ಮೀನಾಕ್ಷಿ ವೆಂಕಟೇಶ, ರತ್ನ ಸತ್ಯನಾರಾಯಣ, ಆರೋಗ್ಯ ಸಮಿತಿ ಸದಸ್ಯ ಬಿ.ಸಿ. ಹರೀಶ್, ಪೌರ ಕಾರ್ಮಿಕರ ಅಧ್ಯಕ್ಷ ಜಯರಾಂ, ಆರೋಗ್ಯಾಧಿಕಾರಿ ಲೋಹಿತ್ ಮತ್ತು ಜ್ಯೋತಿ ಇನ್ನೂ ಮುಂತಾದವರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಚಂದನ್ ಮತ್ತು ತಂಡ ಗೀತಾಗಾಯನದ ಮನರಂಜನೆ‌ ನೀಡಿತು.

ಬಾಕ್ಸ್‌: ಮಾಜಿ ಅಧ್ಯಕ್ಷ ಹೇಳಿಕೆಯಿಂದ ಸಭೆಯಲ್ಲಿ ಗೊಂದಲಮಾಜಿ ಅಧ್ಯಕ್ಷ ಎ.ಆರ್ ಅಶೋಕ್ ಮಾತನಾಡಿ, ಪುರಸಭೆಯಲ್ಲಿ ನಾನು ಅಧ್ಯಕ್ಷರಾದ ಸಂದರ್ಭದಲ್ಲಿ ನಿವೇಶನ ನೀಡಬೇಕೆಂದು ತೀರ್ಮಾನ ಮಾಡಿ ಸಿದ್ಧತೆ ಕೂಡ ಆಗಿತ್ತು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಬಿ.ಶಿವರಾಂ ಕುಮ್ಮಕ್ಕಿನಿಂದ ಸದಸ್ಯರಾದ ಬಿ ಗಿರೀಶ್ ಅವರು ನ್ಯಾಯಾಲಯದ ಮೊರೆ ಹೋದರು. ಹೀಗಾದರೆ ಹೇಗೆ ತಾನೇ ನಿವೇಶನ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಕೆಲಕಾಲ ಸಭೆಯಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು. ಸದಸ್ಯ ಜಗದೀಶ್ ಧ್ವನಿಗೂಡಿಸಿ ಸದಸ್ಯರಾದ ಬಿ ಗಿರೀಶ್ ಅವರೇ ನ್ಯಾಯಾಲಯ ಹೋಗಿದ್ದು ಸಭೆಯಲ್ಲಿ ಪೌರಕಾರ್ಮಿಕರಿಗೆ ನಿವೇಶನ ನೀಡಬೇಕೆಂದು ಮಾತನಾಡುತ್ತಾರೆ. ಇವರು ನ್ಯಾಯಾಲಯಕ್ಕೆ ಹೋಗಿ ಸಭೆಯಲ್ಲಿ ಈ ರೀತಿ ಮಾತನಾಡಿದರೆ ಎಲ್ಲಿಂದ ನಿವೇಶನ ನೀಡಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.