ಸಾರಾಂಶ
ಮಂಗಳೂರಿನ ಸಂಸದ ನಳಿನ್ ಕುಮಾರ್ ರಾಜ್ಯದ ನಂ. 1 ಸಂಸದ ಎಂದು ಹೇಳುತಿದ್ದರು, ಹಾಗಿದ್ದರೇ ಬಿಜೆಪಿ ಎಲ್ಲರಿಗಿಂತ ಮೊದಲು ಅವರಿಗೆ ಟಿಕೆಟ್ ನಿರಾಕರಿಸಿದ್ದು ಯಾಕೆ ? ಅವರು ಸಂಸದರಾಗಿ ಕೆಲಸವನ್ನೇ ಮಾಡ್ಲಿಲ್ಲ, ಗೆಲ್ಲುವ ಗ್ಯಾರಂಟಿ ಇರಲಿಲ್ಲ, ಅದಕ್ಕೆ ಟಿಕೆಟ್ ಕೊಡ್ಲಿಲ್ಲ ಎಂದು ಐವನ್ ವ್ಯಂಗ್ಯವಾಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಮೋದಿ ಅವರು ಕಳೆದ ಚುನಾವಣೆಯ ಸಂದರ್ಭದಲ್ಲಿ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂದು ಹೇಳಿದ್ದರು. ಇದು ಬಿಜೆಪಿಯ ಅತ್ಯಂತ ದೊಡ್ಡ ಡೋಂಗಿ ಘೋಷಣೆ. ಈ ವಿಕಾಸ್‌ನಲ್ಲಿ ಬಿಜೆಪಿಯವರಿಗೆ ಮಾತ್ರ ಪಾಲು, ಶೇ.20ರಷ್ಟಿರುವ ಅಲ್ಪ ಸಂಖ್ಯಾತರಿಗೆ ಇಲ್ಲವೇ? ಇದ್ದರೇ ಎಷ್ಟು ಜನ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದ್ದೀರಿ ಎಂದು ಕೆಪಿಸಿಸಿ ವಕ್ತಾರ ಐವನ್ ಡಿಸೋಜ ಪ್ರಶ್ನಿಸಿದರು.ಅವರು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬುಧವಾರ ನಗರದ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಂಗಳೂರಿನ ಸಂಸದ ನಳಿನ್ ಕುಮಾರ್ ರಾಜ್ಯದ ನಂ. 1 ಸಂಸದ ಎಂದು ಹೇಳುತಿದ್ದರು, ಹಾಗಿದ್ದರೇ ಬಿಜೆಪಿ ಎಲ್ಲರಿಗಿಂತ ಮೊದಲು ಅವರಿಗೆ ಟಿಕೆಟ್ ನಿರಾಕರಿಸಿದ್ದು ಯಾಕೆ ? ಅವರು ಸಂಸದರಾಗಿ ಕೆಲಸವನ್ನೇ ಮಾಡ್ಲಿಲ್ಲ, ಗೆಲ್ಲುವ ಗ್ಯಾರಂಟಿ ಇರಲಿಲ್ಲ, ಅದಕ್ಕೆ ಟಿಕೆಟ್ ಕೊಡ್ಲಿಲ್ಲ ಎಂದು ಐವನ್ ವ್ಯಂಗ್ಯವಾಡಿದರು.* ಮಂಗಳೂರಿನಲ್ಲಿ ಸೊಳ್ಳೆ ಕಡಿಮೆಯಾಗಿದೆ!
ಪ್ರಧಾನಿ ಮೋದಿ ಬರುವುದಕ್ಕೆ ಮಂಗಳೂರು ನಗರವನ್ನು ಬಹಳ ಸ್ವಚ್ಛ ಮಾಡಿದ್ದರು, ಆದ್ದರಿಂದ ಮಂಗಳೂರಿನಲ್ಲಿ ಸೊಳ್ಳೆ ಕಡಿಮೆಯಾಗಿದೆ, ಹೊರತು ಬೇರೆ ಯಾವುದೇ ಪರಿಣಾಮವಾಗಿಲ್ಲ ಎಂದವರು ಲೇವಡಿ ಮಾಡಿದರು.ಕಾಂಗ್ರೆಸ್‌ನ ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಬಿಜೆಪಿ ಸೇರಿದ್ದರ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ, ಅವರು ಮಾಜಿ ಶಾಸಕ, ಆದರೆ ಬಿಜೆಪಿಯ ಹಾಲಿ ಸಂಸದ ಕರಡಿ ಸಂಗಣ್ಣ ಅವರೇ ಬಿಜೆಪಿಯಲ್ಲಿ ಅವಮಾನ ಆಗಿದೆ ಎಂದು ಕಾಂಗ್ರೆಸ್ ಸೇರಿದ್ದಾರೆ ಎಂದರು.
;Resize=(128,128))
;Resize=(128,128))
;Resize=(128,128))
;Resize=(128,128))