ಹೊಯ್ಸಳ ವಿದ್ಯುತ್ ಉಪಕರಣಗಳ ರಿಪೇರಿದಾರರ ಮಾಸಿಕ ಸಭೆ

| Published : Jul 19 2025, 01:00 AM IST

ಹೊಯ್ಸಳ ವಿದ್ಯುತ್ ಉಪಕರಣಗಳ ರಿಪೇರಿದಾರರ ಮಾಸಿಕ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂಘದ ಅಧ್ಯಕ್ಷ ಕೇಬಲ್ ವಿಜಯಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಸಂಘದಿಂದ ತಾಲೂಕು ಮಟ್ಟದ ಉಚಿತ ಆರೋಗ್ಯ ಶಿಬಿರವನ್ನು ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದೊಂದೊಂದಿದ ಸಂಘದ ನಿರ್ದೇಶಕರು ಹಾಗೂ ಸದಸ್ಯರ ಅಭಿಪ್ರಾಯಗಳನ್ನು ಪಡೆದು ಶಿಬಿರದ ಆಯೋಜನ ಮಾಡಲಾಗುವುದು ಹಾಗೂ ಹೊಸ ತಂತ್ರಜ್ಞಾನಗಳಿಂದ ಬರುತ್ತಿರುವ ಸವಾಲುಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು. ನಮ್ಮಲ್ಲಿ ಹಲವರು ಹಳೆಯ ಪದ್ಧತಿಯಲ್ಲಿಯೇ ಕೆಲಸ ಮಾಡುತ್ತಿದ್ದೇವೆ. ಆದರೆ, ಈಗ ಮಾರುಕಟ್ಟೆಗೆ ಬರುವ ಹೊಸ ತಲೆಮಾರಿನ ಸ್ಮಾರ್ಟ್ ಉಪಕರಣಗಳನ್ನು ರಿಪೇರಿ ಮಾಡುವುದು ನಮಗೆ ಸವಾಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬೇಲೂರು

ಪ್ರತಿ ತಿಂಗಳಂತೆ, ಈ ಬಾರಿಯೂ ಹಳೇಬೀಡಿನಲ್ಲಿ ಹೊಯ್ಸಳ ವಿದ್ಯುತ್ ಉಪಕರಣಗಳ ರಿಪೇರಿದಾರರ ಕಾರ್ಮಿಕ ಸಂಘದ ಮಾಸಿಕ ಸಭೆ ನಡೆಯಿತು.

ಸಂಘದ ಅಧ್ಯಕ್ಷ ಕೇಬಲ್ ವಿಜಯಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಸಂಘದಿಂದ ತಾಲೂಕು ಮಟ್ಟದ ಉಚಿತ ಆರೋಗ್ಯ ಶಿಬಿರವನ್ನು ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದೊಂದೊಂದಿದ ಸಂಘದ ನಿರ್ದೇಶಕರು ಹಾಗೂ ಸದಸ್ಯರ ಅಭಿಪ್ರಾಯಗಳನ್ನು ಪಡೆದು ಶಿಬಿರದ ಆಯೋಜನ ಮಾಡಲಾಗುವುದು ಹಾಗೂ ಹೊಸ ತಂತ್ರಜ್ಞಾನಗಳಿಂದ ಬರುತ್ತಿರುವ ಸವಾಲುಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು. ನಮ್ಮಲ್ಲಿ ಹಲವರು ಹಳೆಯ ಪದ್ಧತಿಯಲ್ಲಿಯೇ ಕೆಲಸ ಮಾಡುತ್ತಿದ್ದೇವೆ. ಆದರೆ, ಈಗ ಮಾರುಕಟ್ಟೆಗೆ ಬರುವ ಹೊಸ ತಲೆಮಾರಿನ ಸ್ಮಾರ್ಟ್ ಉಪಕರಣಗಳನ್ನು ರಿಪೇರಿ ಮಾಡುವುದು ನಮಗೆ ಸವಾಲಾಗುತ್ತಿದೆ.

ನಮ್ಮ ಸಂಘವು ಒಂದು ಹೊಸ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಲು ನಿರ್ಧರಿಸಿದೆ. ಈ ಕಾರ್ಯಕ್ರಮವು ಇತ್ತೀಚಿನ ವಿದ್ಯುತ್ ಉಪಕರಣಗಳ ರಿಪೇರಿ ತಂತ್ರಜ್ಞಾನ, ಸುಧಾರಿತ ಪರಿಕರಗಳ ಬಳಕೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಸಮಗ್ರ ತರಬೇತಿಯನ್ನು ನೀಡಲಾಗುವುದು ಎಂದರು.

ಸಭೆಯಲ್ಲಿ ಉಪಾಧ್ಯಕ್ಷ ಬಾಬುರಾವ್, ಶಶಿಧರ್, ಅನಿಲ್ ಕುಮಾರ್, ಸುಬ್ರಹ್ಮಣ್ಯ, ಸಮೀರ್, ಸದಸ್ಯರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಪ್ರಧಾನ ಕಾರ್ಯದರ್ಶಿ ಸಮೀರ್, ಖಜಾಂಚಿ ಸುಬ್ರಹ್ಮಣ್ಯ, ನಿರ್ದೇಶಕರು, ಶಶಿಧರ್, ಕುಮಾರ್, ಶ್ರೀ ಹರಿ, ಅನಿಲ್ ಕುಮಾರ್, ವೇಣು, ಮಣಿ, ಸುರೇಶ್, ಸಂಘದ ಸದಸ್ಯರುಗಳಾದ ದರ್ಶನ್, ಸುಮಂತ್, ಜಗದೀಶ್, ನಂಜುಂಡಿ, ಮಹೇಶ್ ಹಾಜರಿದ್ದರು.