ಎಚ್.ಪಿ.ಗ್ಯಾಸ್ ಟ್ಯಾಂಕರ್ ಪಲ್ಟಿ, ತಪ್ಪಿದ ಅನಾಹುತ

| Published : May 07 2025, 12:48 AM IST

ಸಾರಾಂಶ

ಬೀರೂರು, ಮಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಹಿಂದುಸ್ಥಾನ್ ಪೆಟ್ರೋಲಿಯಂ ಗ್ಯಾಸ್ ಟ್ಯಾಂಕರ್ ಮಂಗಳವಾರ ಸಂಜೆ 4.30ರ ಸುಮಾರಿಗೆ ಪಟ್ಟಣ ಸಮೀಪದ ಲಿಂಗದಹಳ್ಳಿ ರಸ್ತೆಯ ತೋಟದ ಸಾಲಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.

ಕನ್ನಡಪ್ರಭ ವಾರ್ತೆ, ಬೀರೂರು.

ಮಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಹಿಂದುಸ್ಥಾನ್ ಪೆಟ್ರೋಲಿಯಂ ಗ್ಯಾಸ್ ಟ್ಯಾಂಕರ್ ಮಂಗಳವಾರ ಸಂಜೆ 4.30ರ ಸುಮಾರಿಗೆ ಪಟ್ಟಣ ಸಮೀಪದ ಲಿಂಗದಹಳ್ಳಿ ರಸ್ತೆಯ ಕೋಡಿಹಳ್ಳಿ ತೋಟದ ಸಾಲಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.ಸಕಲೇಶಪುರ ತಾಲೂಕಿನ ಹೊನ್ನಾಳಿ ಗ್ರಾಮದ ಚಾಲಕ ನಾಗೇಶ್ ಮಂಗಳೂರಿನಿಂದ ಬೆಳಗಿನ ಜಾವ ಸುಮಾರು 17 ಟನ್ 820 ಕೆ.ಜಿ.ತೂಕದ ಟ್ಯಾಂಕರ್ ನ್ನು ಶಿವಮೊಗಕ್ಕೆ ತಲುಪಿಸಬೇಕಾಗಿತ್ತು.

ಸಂಜೆಯಾದ ಕಾರಣ ಚಾಲಕ ನಾಗೇಶ್ ತನ್ನ ಪತ್ನಿ ತವರೂರಾದ ತರಿಕೆರೆಯ ಲಿಂಗದಹಳ್ಳಿಗೆ ಬಂದಿದ್ದ ಪತ್ನಿ, ಮಗಳನ್ನು ನೋಡಲು ಬೀರೂರು ಬಳಿ ಟ್ಯಾಂಕರ್ ಲಾರಿ ತಿರುಗಿಸಿ ಲಿಂಗದಹಳ್ಳಿ ಕಡೆಗೆ ತೆರಳುವಾಗ ತೋಟದ ಸಾಲಿನ ಕ್ರಾಸಿನಲ್ಲಿ ಬೈಕ್ ಸವಾರ ನೋರ್ವ ಎದುರು ಬಂದಿದ್ದರಿಂದ ಅಪಘಾತ ತಪ್ಪಿಸಲು ಚಾಲಕ ಬ್ರೇಕ್ ಹಾಕಿದಾಗ ಟ್ಯಾಂಕರ್ ಪಲ್ಟಿಯಾಗಿದ್ದು, ಚಾಲಕ ನಾಗೇಶ್ ಅಪಾಯದಿಂದ ಪಾರಾಗಿದ್ದಾನೆ.ಘಟನೆ ಹಿನ್ನಲೆಯಲ್ಲಿ ಬೀರೂರು ಪಿಎಸೈ ಸಜಿತ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಪಲ್ಟಿಯಾದ ಟ್ಯಾಂಕರ್ ನಿಂದ ಗ್ಯಾಸ್ ಸೋರಿಕೆಯಾಗುತ್ತಿದ್ದು, ಮುಂಜಾಗ್ರತೆಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿದ್ದಾರೆ. ಅನಿಲ ಸೋರಿಕೆ ತಡೆಗಟ್ಟಲು ಮಂಗಳೂರಿನ ಅವರ ಕಂಪನಿ ಸಿಬ್ಬಂದಿಗಳೆ ಬರಬೇಕಾಗುತ್ತದೆ. ಸದ್ಯ ಅವರಿಗೆ ವಿಷಯ ತಿಳಿಸಲಾಗಿದೆ ಯಾವುದೇ ಅನಾಹುತಗಳಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು. ಸದ್ಯ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.