ಸಾರಾಂಶ
ಹುಬ್ಬಳ್ಳಿ ರಾಜ್ ನಗರದಲ್ಲಿರುವ ಕೆಎಸ್‌ಸಿಎ ಮೈದಾನದಲ್ಲಿ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಹುಬ್ಬಳ್ಳಿ ಪ್ರಿಮೀಯಂ ಲೀಗ್ (ಎಚ್‌ಪಿಎಲ್) ಜ್ಯೂನಿಯರ್ ಕ್ರಿಕೆಟ್ ಟೂರ್ನಿಯಲ್ಲಿ ಧಾರವಾಡದ ಡ್ರಾಪಿನ್ ವಾರಿಯರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಇಲ್ಲಿನ ರಾಜ್ ನಗರದಲ್ಲಿರುವ ಕೆಎಸ್‌ಸಿಎ ಮೈದಾನದಲ್ಲಿ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಹುಬ್ಬಳ್ಳಿ ಪ್ರಿಮೀಯಂ ಲೀಗ್ (ಎಚ್‌ಪಿಎಲ್) ಜ್ಯೂನಿಯರ್ ಕ್ರಿಕೆಟ್ ಟೂರ್ನಿಯಲ್ಲಿ ಧಾರವಾಡದ ಡ್ರಾಪಿನ್ ವಾರಿಯರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು.ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಸಿಡಿಎಂ ಜೆಮ್ ವಿರುದ್ಧ 11 ರನ್‌ಗಳ ಅಂತರದಿಂದ ಜಯಗಳಿಸಿ ಡ್ರಾಪಿನ್ ವಾರಿಯರ್ಸ್ ಟ್ರೋಫಿ ತನ್ನದಾಗಿಸಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಡ್ರಾಪಿನ್ 19.5 ಓವರ್‌ಗಳಲ್ಲಿ 94 ರನ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. ನಂತರ ಮೈದಾನಕ್ಕಿಳಿದ ಸಿಡಿಎಂ ಜೆಮ್ ತಂಡದ ಆಟಗಾರರು 27 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 83 ರನ್ ಗಳಿಸಲು ಸಶಕ್ತರಾದರು.
ಸಿಡಿಎಂ ಜೆಮ್ಸ್ ತಂಡದ ಅಭಿಷೇಕ ಶಿವಸಿಂಪಿಗೇರ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಡ್ರಾಪಿನ್ ವಾರಿಯರ್ಸ್ ಸ್ವಯಂ ಖೋತ (14 ವರ್ಷ) ಹಾಗೂ ಅಥರ್ವ ಮಾನೆ (16 ವರ್ಷ) ಪಂದ್ಯಶ್ರೇಷ್ಠ, ಆನಂದ್ ಸ್ಪೋರ್ಟ್ಸ್ ಕಂಪನಿಯ ಸ್ಕಂದ ಶೆಟ್ಟಿ (14 ವರ್ಷ) ಹಾಗೂ ಜೇವರ್ ಗ್ಯಾಲರಿ ಡೈಮಂಡ್ಸ್‌ನ ಜಾಯ್ ಸುಳ್ಳದ (16 ವರ್ಷ) ಉತ್ತಮ ಬ್ಯಾಟ್ಸಮನ್, ವಿವಾನ ಭೂಸದ (14 ವರ್ಷ) ಹಾಗೂ ಡ್ರಾಪಿನ್ ವಾರಿಯರ್ಸ್‌ನ ಸಾಗರ ಕಮ್ಮಾರ (16 ವರ್ಷ) ಉತ್ತಮ ಬೌಲರ್ ಪ್ರಶಸ್ತಿ ಪಡೆದರು.ಎಸ್ಟಿ ಕನ್ಸ್‌ಟ್ರಕ್ಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಕೆ. ರಮಣಮೂರ್ತಿ, ಉದ್ಯಮಿ ಭರತ ಬೊಮ್ಮಾಯಿ ಹಾಗೂ ಲೆಕ್ಕ ಪರಿಶೋಧಕ ಚನ್ನವೀರ ಮುಂಗರವಾಡಿ ಬಹುಮಾನ ವಿತರಿಸಿದರು. ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ಟ್ರಸ್ಟಿ ಬಾಬಾ ಭೂಸದ ಅಧ್ಯಕ್ಷತೆ ವಹಿಸಿದ್ದರು. ಉತೇಜ ಕೊಂಡವೀಟಿ, ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ನ ಕಾರ್ಯದರ್ಶಿ ಅಮಿತ ಭೂಸದ ಸೇರಿದಂತೆ ಹಲವರಿದ್ದರು.