ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ತಾಲೂಕಿನ ರಾಧಮ್ಮ ಜನಸ್ಪಂದನ ಸಂಸ್ಥೆ ವತಿಯಿಂದ ಆಲೂರು ತಾಲೂಕಿನ 50 ವಿದ್ಯಾರ್ಥಿನಿಯರಿಗೆ ಪ್ರಥಮ ಹಂತವಾಗಿ ಸ್ತನ ಕ್ಯಾನ್ಸರ್ ತಡೆಗಟ್ಟುವ ಎಚ್‌ಪಿವಿ ಲಸಿಕೆ ಹಾಕಲಾಯಿತು.ಇನ್ಸ್ಪೈರ್ ಇಂಟರ್‌ನ್ಯಾಷನಲ್ ಶಾಲೆ ಕಾರುಗೋಡಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಳೆದ ತಿಂಗಳು ಮೆಮೋಗ್ರಫಿ ಸ್ಕ್ಯಾನಿಗೆ ಒಳಗಾಗಿದ್ದ 31 ಮಹಿಳೆಯರಿಗೆ ಸ್ಕ್ಯಾನಿಂಗ್ ರಿಪೋರ್ಟನ್ನು ಸಹ ನೀಡಲಾಯಿತು. ಕಾರ್ಯಕ್ರಮದ ಆಯೋಜಕರಾದ ರಾಧಮ್ಮ ಜನಸ್ಪಂದನ ಹೇಮಂತ್ ಕುಮಾರ್ ಮಾತನಾಡಿ, ಇಂತಹ ಕಾರ್ಯಕ್ರಮ ಮಾಡಲು ನನಗೆ ಸ್ಫೂರ್ತಿ ಸುಧಾ ಮೂರ್ತಿ ಅವರ ಮಾತುಗಳು. ಮಹಿಳೆಯರ ಆರೋಗ್ಯಕ್ಕಾಗಿ ಸಮಾಜಕ್ಕೆ ಕೊಡುಗೆ ಕೊಡಬೇಕೆಂಬ ದೃಷ್ಟಿಯಿಂದ ನನ್ನ ವೈಯಕ್ತಿಕ ದುಡಿಮೆಯಲ್ಲಿ ಒಂದು ಸಾವಿರ ಮಕ್ಕಳಿಗೆ ಈ ವ್ಯವಸ್ಥೆ ಮಾಡಿದ್ದೇನೆ. ಇಂತಹ ಕಾರ್ಯಕ್ರಮ ಮಾಡಲು ಎ ಟಿ ರಾಮಸ್ವಾಮಿ ಅವರ ಆದರ್ಶವೇ ಪ್ರಮುಖ ಕಾರಣ. ಅವರು ಅರಕಲಗೂಡಿನಲ್ಲಿ 2000 ಮಕ್ಕಳಿಗೆ ಈಗಾಗಲೇ ಈ ಲಸಿಕೆ ಹಾಕಿಸಿದ್ದಾರೆ. ಇಂತಹ ಕಾರ್ಯಕ್ರಮಕ್ಕೆ ಉಚಿತವಾಗಿ ವೈದ್ಯರು ಬಂದು ಸಹಕರಿಸುತ್ತಿರುವುದು ಅವರ ಸಾಮಾಜಿಕ ಕಳಕಳಿಗೆ ಹೃದಯಪೂರ್ವಕವಾಗಿ ಸ್ವಾಗತ ಎಂದರು. ಈ ಕಾರ್ಯಕ್ರಮಕ್ಕೆ ಎ ಟಿ ರಾಮಸ್ವಾಮಿ ಅವರ ಮಗ ಪ್ರದೀಪ್ ರಾಮಸ್ವಾಮಿಯವರೂ ಬಂದಿದ್ದಾರೆ ಎಂದರು.
ಪ್ರದೀಪ ರಾಮಸ್ವಾಮಿ ಮಾತನಾಡಿ, ನಮ್ಮ ತಂದೆ ಹೋಗುತ್ತಿರುವ ದಾರಿಯಲ್ಲಿ ಹೇಮಂತ್ ಕುಮಾರ್ ಹೋಗುತ್ತಿರುವುದಕ್ಕೆ ಅವರಿಗೆ ಅಭಿನಂದಿಸುತ್ತೇನೆ. ಅರಕಲಗೂಡು ತಾಲೂಕಿನಲ್ಲಿ ನಮ್ಮ ತಂದೆ ಮಾಡಿರುವಮಕ್ಕಳಿಗೆ ಕೆಲಸವನ್ನ ಸ್ಮರಿಸಿ ಹೇಮಂತ್ ಕುಮಾರ್ ಅವರು ಇಟ್ಟಿರುವ ಹೆಜ್ಜೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ನುಡಿದರು.ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಸಾವಿತ್ರಿ ಮಾತನಾಡಿ, ಹೇಮಂತ್ ಕುಮಾರ್ ಅವರು ಇಂತಹ ಕಾರ್ಯ ಮಾಡಲು ಅವರ ತಾಯಿ ಆಶೀರ್ವಾದವೇ ಪ್ರಮುಖ ಕಾರಣ. ಅವರ ತಾಯಿ ನೆನಪಿಗಾಗಿ ದುಡಿಯುತ್ತಿರುವುದು ಆರೋಗ್ಯ ಕ್ಷೇತ್ರದಲ್ಲಿ ರಾಜ್ಯಕ್ಕೆ ಮಾದರಿಯಾಗಬೇಕೆಂದರು.
ಈ ವೇಳೆ ಡಾ. ಭಾರತಿ ರಾಜಶೇಖರ್, ಡಾ. ಪ್ರತೀಕ್ಷ ಇನ್ನು ಅನೇಕ ವೈದ್ಯರು ಹಾಜರಿದ್ದರು. ಇನ್ಸ್ಪೈರ್ ಶಾಲೆಯ ಮುಖ್ಯಸ್ಥ ಅಶೋಕ್, ಪೂವಯ್ಯ, ಸದಾನಂದ ಗೌಡ ಮುಂತಾದವರು ಸಹಕರಿಸಿದರು.