ಸಾರಾಂಶ
9 ರಿಂದ 25 ವಯೋಮಿತಿಯೊಳಗಿನ ಬಾಲಕಿಯರು, ಯುವತಿಯರು, ಮಹಿಳೆಯರು ಎಚ್‌ಪಿವಿ ಲಸಿಕೆಯನ್ನು ಪಡೆಯುವುದರಿಂದ ಗರ್ಭಕೊರಳಿನ ಕ್ಯಾನ್ಸರನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದು ಪ್ರಸೂತಿ ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷರಾದ ಡಾ. ಪ್ರೇಮಲತಾ ತಿಳಿಸಿದರು. ಶೇ. ೫೦ಕ್ಕೂ ಮೀರಿ ಮಹಿಳೆಯರು ಮರಣ ಹೊಂದುತ್ತಿದ್ದಾರೆ. ೩೦ ವರ್ಷ ಮೇಲ್ಪಟ್ಟ ಮದುವೆಯಾದ ಮಹಿಳೆಯರು ಕಡ್ಡಾಯವಾಗಿ ಸ್ತ್ರೀರೋಗ ತಜ್ಞರಿಂದ ತಪಾಸಣೆ ಮಾಡಿಸಿಕೊಳ್ಳಬೇಕು. ೯- ೧೪ ವಯಸ್ಸಿನ ಮಕ್ಕಳು ಲಸಿಕೆ ಪಡೆದರೆ ಶೇ. ೧೦೦ ರಷ್ಟು ಕ್ಯಾನ್ಸರ್ ರಹಿತ ಜೀವನ ಸಾಗಿಸಬಹುದು ಎಂದರು.
ಕನ್ನಡಪ್ರಭ ವಾರ್ತೆ ಆಲೂರು
9 ರಿಂದ 25 ವಯೋಮಿತಿಯೊಳಗಿನ ಬಾಲಕಿಯರು, ಯುವತಿಯರು, ಮಹಿಳೆಯರು ಎಚ್‌ಪಿವಿ ಲಸಿಕೆಯನ್ನು ಪಡೆಯುವುದರಿಂದ ಗರ್ಭಕೊರಳಿನ ಕ್ಯಾನ್ಸರನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದು ಪ್ರಸೂತಿ ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷರಾದ ಡಾ. ಪ್ರೇಮಲತಾ ತಿಳಿಸಿದರು.ಪಟ್ಟಣದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ರಾಧಮ್ಮ ಜನಸ್ಪಂದನ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ, ಉಚಿತ ಎಚ್‌ಪಿವಿ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಲಸಿಕೆಯು ಗರ್ಭಾಶಯ, ಗುದದ್ವಾರ, ಗಂಟಲು ಮತ್ತು ಶಿಶ್ನದ ಕ್ಯಾನ್ಸರ್ ಮತ್ತು ಲೈಂಗಿಕ ಮಸೂರಗಳು ಮುಂತಾದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ದೀರ್ಘಕಾಲಿಕ ರಕ್ಷಣೆ ಒದಗಿಸುತ್ತದೆಯಲ್ಲದೆ ಹರಡುವಿಕೆಯನ್ನು ಕಡಿಮೆ ಮಾಡಲು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿರುತ್ತದೆ.
ನಿಮ್ಮ ಲಸಿಕೆ ದಾಖಲೆಗಳು ಮತ್ತು ಪ್ರಕ್ರಿಯೆಗೆ ಸಂಬಂಧಿಸಿದ ವೈಯಕ್ತಿಕ ಆರೋಗ್ಯ ಮಾಹಿತಿ ಗೌಪ್ಯವಾಗಿರತ್ತದೆ. ನೀವು ಅನುಮತಿ ನೀಡಿದರೆ ಮಾತ್ರ ಹಂಚಿಕೊಳ್ಳಲಾಗುತ್ತದೆ. ನೀವು ಯಾವಾಗ ಬೇಕಾದರೂ ಲಸಿಕೆಯನ್ನು ನಿರಾಕರಿಸಬಹುದು ಅಥವಾ ಮುಂದೂಡಬಹುದು. ಗರ್ಭಕೊರಳ ಕ್ಯಾನ್ಸರ್ ಹೆಣ್ಣು ಮಕ್ಕಳ ಮರಣಕ್ಕೆ ಕಾರಣವಾಗುತ್ತಿದೆ. ಶೇ. ೫೦ಕ್ಕೂ ಮೀರಿ ಮಹಿಳೆಯರು ಮರಣ ಹೊಂದುತ್ತಿದ್ದಾರೆ. ೩೦ ವರ್ಷ ಮೇಲ್ಪಟ್ಟ ಮದುವೆಯಾದ ಮಹಿಳೆಯರು ಕಡ್ಡಾಯವಾಗಿ ಸ್ತ್ರೀರೋಗ ತಜ್ಞರಿಂದ ತಪಾಸಣೆ ಮಾಡಿಸಿಕೊಳ್ಳಬೇಕು. ೯- ೧೪ ವಯಸ್ಸಿನ ಮಕ್ಕಳು ಲಸಿಕೆ ಪಡೆದರೆ ಶೇ. ೧೦೦ ರಷ್ಟು ಕ್ಯಾನ್ಸರ್ ರಹಿತ ಜೀವನ ಸಾಗಿಸಬಹುದು ಎಂದರು.ಜಿಪಂ ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪರಮೇಶ್ ಮಾತನಾಡಿ, ಲಸಿಕೆಯನ್ನು ಆಸ್ಪತ್ರೆಗಳಲ್ಲಿ ಪಡೆಯಲು ಕನಿಷ್ಠ ೨೦೦೦ ರು. ಪಾವತಿ ಮಾಡಬೇಕು. ರಾಧಮ್ಮ ಜನಸ್ಪಂದನ ವೇದಿಕೆ ಅಧ್ಯಕ್ಷ ಹೇಮಂತ ಕುಮಾರ್ ರವರು ಸ್ವ ಇಚ್ಚೆಯಿಂದ ಹಣ ನೀಡಿ ಲಸಿಕೆ ಕೊಂಡು ಅರ್ಹರಿಗೆ ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ನಿಸಾರ್ ಫಾತಿಮ, ಡಾ. ಸಾವಿತ್ರಿ, ಡಾ. ಕಿರಣ್, ಜಿ. ಪ್ರಕಾಶ್, ಹೇಮಂತಕುಮಾರ್, ಉಪ ಪ್ರಾಂಶುಪಾಲ ವಿಜಯಕುಮಾರ್, ವಸಂತಕುಮಾರ್ ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ೨೦೪ ಜನರಿಗೆ ಲಸಿಕೆ ಹಾಕಲಾಯಿತು.-----------------