ಸಾರಾಂಶ
hree-storey residential building to be inaugurated soon
-21.87 ಕೋಟಿ ಅನುದಾನದಲ್ಲಿ 6ಎಕರೆಯಲ್ಲಿ ನಿರ್ಮಾಣ ಹಂತದ ವಸತಿಗೃಹ ಕಟ್ಟಡಕ್ಕೆ ಸಚಿವ ಈಶ್ವರ ಖಂಡ್ರೆ ಭೇಟಿ, ವೀಕ್ಷಣೆ
-----ಕನ್ನಡಪ್ರಭ ವಾರ್ತೆ ಭಾಲ್ಕಿ
ಹೊರವಲಯದ ನೀರು ಶುದ್ಧೀಕರಣ ಘಟಕದ ಸಮೀಪ ನಿರ್ಮಾಣ ಹಂತದಲ್ಲಿರುವ ಮೂರು ಅಂತಸ್ತಿನ ವಸತಿಗೃಹದ ಕಟ್ಟಡಕ್ಕೆ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ ವೀಕ್ಷಿಸಿದರು.ಅಧಿಕಾರಿಗಳ ತಂಡದೊಂದಿಗೆ ಮಂಗಳವಾರ ಭೇಟಿ ನೀಡಿದ ಅವರು ಕಟ್ಟಡದ ಪ್ರತಿ ಬ್ಲಾಕ್‌ಗೂ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ನಂತರ ಮಾತನಾಡಿದ ಅವರು, ಪಟ್ಟಣದ ಬಡ ಕುಟುಂಬಗಳು, ಕೊಳಗೇರಿ ನಿವಾಸಿಗಳು ಮತ್ತು ಮಧ್ಯಮ ವರ್ಗದವರ ಸ್ವಂತ ಮನೆಯ ಕನಸು ಶೀಘ್ರದಲ್ಲೇ ನನಸಾಗಲಿದೆ. ವಿವಿಧ ಯೋಜನೆಯಡಿ 21.87 ಕೋಟಿ ರು. ಅನುದಾನ ಒದಗಿಸಿ 6 ಎಕರೆ ವಿಶಾಲ ಪ್ರದೇಶದಲ್ಲಿ ಮೂರು ಅಂತಸ್ತಿನ ವಸತಿಗೃಹದ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದರು.34 ಬ್ಲಾಕ್‌ಗಳಿದ್ದು ಪ್ರತಿಯೊಂದರಲ್ಲಿ 12 ಮನೆಗಳಿವೆ. ಒಟ್ಟು 400 ಮನೆಗಳನ್ನು ಇದು ಹೊಂದಿದೆ. ಪ್ರತಿ ಮನೆಯಲ್ಲಿ ಹಾಲ್, ಅಡುಗೆ ಕೋಣೆ, ಮಲಗುವ ಕೋಣೆ, ಸ್ನಾನಗೃಹ, ಶೌಚಾಲಯವಿದ್ದು, 250 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ ಎಂದು ಅವರು ತಿಳಿಸಿದರು.
ಪ್ರತಿ ಮನೆಗೆ 4.98 ಲಕ್ಷ ರು. ವೆಚ್ಚ ತಗಲಿದ್ದು, ಕೇಂದ್ರ ಸರ್ಕಾರದ ಪಾಲು 1.5ಲಕ್ಷ ರು., ರಾಜ್ಯ ಸರ್ಕಾರದ ಪಾಲು ಎಸ್‌ಸಿ/ಎಸ್‌ಟಿ ಫಲಾನುಭವಿಗಳಿಗೆ 2ಲಕ್ಷ ರು,, ಇತರರಿಗೆ 1.2 ಲಕ್ಷ ರು, ಇದ್ದು, ಫಲಾನುಭವಿಗಳ ಪಾಲು ಎಸ್‌ಸಿ/ಎಸ್‌ಟಿ ಶೇ.10 ಮತ್ತು ಇತರರಿಗೆ ಶೇ. 15 ಆಗಿದೆ. ರಸ್ತೆ, ಚರಂಡಿ, ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳೊಂದಿಗೆ ಕಟ್ಟಡ ಮಾದರಿಯಾಗಿ ನಿರ್ಮಾಣಗೊಂಡಿವೆ.ಕಟ್ಟಡದ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಸಣ್ಣಪುಟ್ಟ ಕೆಲಸ ಬಾಕಿ ಇದ್ದು ಪೂರ್ಣಗೊಳ್ಳುತ್ತಲೇ ಕಟ್ಟಡ ಉದ್ಘಾಟಿಸಿ ಬಡ ಜನರ ವಾಸಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ್ ಚವ್ಹಾಣ್, ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರಿ ಸೇರಿದಂತೆ ಹಲವರು ಇದ್ದರು.--
ಫೈಲ್ 25ಬಿಡಿ6ಭಾಲ್ಕಿ ಹೊರವಲಯದ ನೀರು ಶುದ್ಧೀಕರಣ ಘಟಕದ ಸಮೀಪ ನಿರ್ಮಾಣ ಹಂತದಲ್ಲಿರುವ ಮೂರು ಅಂತಸ್ತಿನ ವಸತಿಗೃಹದ ಕಟ್ಟಡಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ ವೀಕ್ಷಿಸಿದರು.