ಸಾರಾಂಶ
ಧಾರವಾಡ: ಹುಬ್ಬಳ್ಳಿಯ ಗಲಭೆ ಪ್ರಕರಣ ಹಿಂಪಡೆದ ಸರ್ಕಾರದ ಕ್ರಮ ಖಂಡಿಸಿ, ಮುಖ್ಯಮಂತ್ರಿ ವಾಹನಕ್ಕೆ ಘೇರಾವ್‌ಗೆ ಯತ್ನಿಸಿದ ಬಿಜೆಪಿ ಮುಖಂಡರನ್ನು ಬಂಧಿಸಿ, ಬಿಡುಗಡೆಗೊಳಿಸಿದ ಘಟನೆ ಭಾನುವಾರ ನಡೆಯಿತು.
ಸವದತ್ತಿಯಿಂದ ಧಾರವಾಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ ಎಂಬ ವಿಷಯ ತಿಳಿದ ಶಾಸಕ ಅರವಿಂದ ಬೆಲ್ಲದ ಹಾಗೂ ಮಾಜಿ ಶಾಸಕ ಅಮೃತ ದೇಸಾಯಿ ನೇತೃತ್ವದಲ್ಲಿ ಹತ್ತಾರು ಬಿಜೆಪಿ ಕಾರ್ಯಕರ್ತರು ನಗರದ ಶಿವಾಜಿ ವೃತ್ತದಲ್ಲಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.ಮುಖ್ಯಮಂತ್ರಿ ಕಾರಿಗೆ ಮುತ್ತಿಗೆ ಹಾಕುವ ವಿಷಯ ತಿಳಿದ ಪೊಲೀಸರು ಶಾಸಕರು, ಮಾಜಿ ಶಾಸಕರನ್ನು ಬಂಧಿಸಿ, ಕರೆದೊಯ್ದರು. ಆನಂತರ ಬಿಡುಗಡೆಗೊಳಿಸಲಾಯಿತು. ಇದಕ್ಕೂ ಮೊದಲು ಮಾತನಾಡಿದ ಶಾಸಕ ಅರವಿಂದ ಬೆಲ್ಲದ, 136 ಸೀಟು ಪಡೆದ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಯಾರ ಕಾಳಜಿಗೆ ಅಧಿಕಾರ ನಡೆಸುತ್ತಿದೆ ಎಂದು ಪ್ರಶ್ನಿಸಿ, ಕೈ ಸರ್ಕಾರ ದೇಶವಿರೋಧಿ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ದೂರಿದರು.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ 120 ಆರೋಪಿಗಳನ್ನು ಜೀವದ ಹಂಗು ತೊರೆದುಪೊಲೀಸರು ಬಂಧಿಸಿದ್ದು, ಸರ್ಕಾರದ ಪ್ರಕರಣ ಹಿಂಪಡೆಯುವ ನಿರ್ಧಾರವನ್ನು ತೀವ್ರ ಖಂಡಿಸಿದರು.
ಮುಡಾ ಹಾಗೂ ವಾಲ್ಮೀಕಿ ಹಗರಣ ಹಿನ್ನೆಲೆ ಮುಖ್ಯಮಂತ್ರಿ ಅಧಿಕಾರ ಕಳೆದುಕೊಳ್ಳುವ ಸ್ಥಿತಿಗೆಬಂದಿದ್ದು, ಮುಸ್ಲಿಮರ ತುಷ್ಟೀಕರಣ ಮಾಡಲು ಹಾಗೂ ರಾಜ್ಯದ ಗಮನ ಬೇರೆಡೆ ಸೆಳೆಯಲು
ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆಯುವ ನಿರ್ಧಾರ ಮಾಡಿರುವುದು ಅಕ್ಷಮ್ಯ ಎಂದು ದೂರಿದರು.ಪ್ರತಿಭಟನೆಯಲ್ಲಿ ಮಾಜಿ ಮಹಾಪೌರ ಶಿವು ಹಿರೇಮಠ, ಮಾಜಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಶಂಕರ ಶೇಳಕೆ,
ಬಸವರಾಜ ಗರಗ, ಗೀತಾ ಪಾಟೀಲ, ಪುಷ್ಪಾ ಮಜ್ಜಗಿ, ಮೋಹನ ರಾಮದುರ್ಗ, ನೂರಾರು ಬಿಜೆಪಿಕಾರ್ಯಕರ್ತರು ಇದ್ದರು.
ಅಧಿಕಾರ ಕಳೆದುಕೊಳ್ಳುವ ಭೀತಿನಮ್ಮ ನಾಯಕ ಪ್ರಹ್ಲಾದ್ ಜೋಶಿ ಅವರಿಗೆ ಭಯೋತ್ಪಾದಕ ಎಂದು ಜರಿದ ಸಿಎಂ ಸಿದ್ದರಾಮಯ್ಯ,
ಅಧಿಕಾರ ಕಳೆದುಕೊಳ್ಳವ ಭೀತಿಯಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಹೀಗಾಗಿಯಾರಿಗೆ ಯಾವ ಪದ ಬಳಸಬೇಕೆಂಬ ಅರಿವು ಇಲ್ಲದೆ, ಬಾಯಿಗೆ ಬಂದಂತೆ ಮಾತನಾಡಿದ್ದಾರೆ.
ಅರವಿಂದ ಬೆಲ್ಲದ, ಶಾಸಕರು;Resize=(128,128))
;Resize=(128,128))
;Resize=(128,128))
;Resize=(128,128))