ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಗುದ್ದಲಿಪೂಜೆ

| Published : Nov 25 2025, 01:30 AM IST

ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಗುದ್ದಲಿಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಅರಸೀಕೆರೆ ನಗರದ ಹಳೆಯ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಭಕ್ತ ಕನಕದಾಸರ 538ನೇ ಜಯಂತ್ಯುತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಕಂಚಿನ ಪುತ್ಥಳಿ ನಿರ್ಮಾಣದ ಗುದ್ದಲಿ ಪೂಜಾ ಕಾರ್ಯಕ್ರಮ ಭವ್ಯವಾಗಿ ನೆರವೇರಿತು. ಶೋಷಿತ ವರ್ಗಗಳಿಗೆ ದಾರಿದೀಪವಾದ ಈ ಮಹನೀಯರ ಉಪದೇಶಗಳು ಮುಂದಿನ ಪೀಳಿಗೆಗೆ ಬೆಳಕು ಎಂದು ಹೇಳಿದರು. ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪಟೇಲ್ ಶಿವಪ್ಪ, ಕನಕದಾಸರು ಅಪಮಾನಗಳನ್ನು ಸಹಿಸಿಕೊಂಡು ಸಮಾಜ ಸುಧಾರಣೆಗೆ ಶ್ರಮಿಸಿದ ದಾರ್ಶನಿಕರು ಎಂದು ಹೇಳಿದರು.

ಅರಸೀಕೆರೆ: ನಗರದ ಹಳೆಯ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಭಕ್ತ ಕನಕದಾಸರ 538ನೇ ಜಯಂತ್ಯುತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಕಂಚಿನ ಪುತ್ಥಳಿ ನಿರ್ಮಾಣದ ಗುದ್ದಲಿ ಪೂಜಾ ಕಾರ್ಯಕ್ರಮ ಭವ್ಯವಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿದ ಕೆ.ಆರ್‌. ನಗರದ ಕಾಗಿನೆಲೆ ಮಹಾಸಂಸ್ಥಾನ ಮಠದ ಡಾ. ಶಿವಾನಂದಪುರಿ ಮಹಾಸ್ವಾಮಿಗಳು ಮಾತನಾಡಿ, ಕನಕದಾಸರು ಬಡವರು ಹಾಗೂ ಶ್ರೀಮಂತರ ನಡುವಿನ ಅಂತರವನ್ನು ನಿವಾರಿಸಲು ಜೀವಪೂರ್ಣ ಶ್ರಮಿಸಿದವರು ಎಂದರು.

ಮಹಿಳೆಯರಿಗೆ ನೀಡುವ ಗೃಹಭಾಗ್ಯದಂತೆ ಪುರುಷರಿಗೂ ತಿಂಗಳಿಗೆ 2 ಸಾವಿರ ‘ಗೃಹ ವೆಂಕಟೇಶ್ವರ’ ಅಥವಾ ‘ಗೃಹದಾತ’ ಯೋಜನೆ ಜಾರಿಯಾಗಬೇಕು, ಎಂದು ಅವರು ಅಭಿಪ್ರಾಯಪಟ್ಟರು.ಶಾಸಕ ಹಾಗೂ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಮಹನೀಯರ ಜಯಂತಿ ಆಚರಣೆಗಳನ್ನು ಸಮಾಜಕ್ಕೆ ಸಮಾನತೆ ತರುವುದು ಎಂಬ ಆಶಯದಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ನಿಗಮ ಮಂಡಳಿ ರಚನೆಗಳ ಮೂಲಕ ಸಕ್ರಿಯಗೊಳಿಸಿದೆ ಎಂದು ಹೇಳಿದರು. ಬಸವಣ್ಣನವರು ಹಾಗೂ ಕನಕದಾಸರು ಜಾತ್ಯತೀತ ಸಂದೇಶಗಳ ಮೂಲಕ ಸಮಾಜದಲ್ಲಿ ಮೇಲು–ಕೀಳು ಎಂಬ ಭಾವನೆಗಳನ್ನು ಅಳಿಸಲು ಹೋರಾಡಿದರು ಎಂದರು.

ಇದೇ ಸಂದರ್ಭದಲ್ಲಿ ಅವರು, ನಗರದ ಹೆಂಜಗೊಂಡನಹಳ್ಳಿ ಪ್ರದೇಶದಲ್ಲಿ ಕುರುಬ ಸಮುದಾಯ ಭವನ ನಿರ್ಮಾಣಕ್ಕೆ ಸಾಗುವಿಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಹಾಸನ ಲೋಕಸಭಾ ಸದಸ್ಯ ಶ್ರೇಯಸ್ ಎಂ. ಪಟೇಲ್, ಕೀರ್ತನೆಗಳ ಮೂಲಕ ಸಮಾಜ ಸುಧಾರಣೆಯ ಸಂದೇಶ ನೀಡಿದವರು ಕನಕದಾಸರು. ಶೋಷಿತ ವರ್ಗಗಳಿಗೆ ದಾರಿದೀಪವಾದ ಈ ಮಹನೀಯರ ಉಪದೇಶಗಳು ಮುಂದಿನ ಪೀಳಿಗೆಗೆ ಬೆಳಕು ಎಂದು ಹೇಳಿದರು. ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪಟೇಲ್ ಶಿವಪ್ಪ, ಕನಕದಾಸರು ಅಪಮಾನಗಳನ್ನು ಸಹಿಸಿಕೊಂಡು ಸಮಾಜ ಸುಧಾರಣೆಗೆ ಶ್ರಮಿಸಿದ ದಾರ್ಶನಿಕರು ಎಂದು ಹೇಳಿದರು.ತಹಶೀಲ್ದಾರ್ ಸಂತೋಷಕುಮಾರ್, ಬಿಇಒ ಮೋಹನ್ ಕುಮಾರ್, ಮಾಜಿ ಜಿ.ಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ಮಾಜಿ ನಗರಸಭೆ ಅಧ್ಯಕ್ಷ ಎಂ. ಸಮೀವುಲ್ಲಾ, ಮಾಜಿ ಉಪಾಧ್ಯಕ್ಷ ಮನೋಹರ್, ತಾಲೂಕು ಕುರುಬ ಸಮಾಜದ ಅಧ್ಯಕ್ಷ ತೊಂಡಿಗನಹಳ್ಳಿ ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಣಾವರ ಶ್ರೀನಿವಾಸ್, ಮಂಗಳಾಪುರ ನಾಗರಾಜು, ಗೀಜೀಹಳ್ಳಿ ಧರ್ಮಶೇಖರ್, ಯಶೋದಮ್ಮ, ಗುತ್ತಿನಕೆರೆ ಬಸವರಾಜು, ಶೃತಿಮನು, ಹರೀಶ್, ಲೋಕೇಶ್, ಸಂತೋಷ್, ರವಿ, ಎಚ್.ಡಿ. ರವಿ, ಗಂಗಣ್ಣ, ಕೆ.ಸಿ. ನಟರಾಜು ಹಾಗೂ ಕಾರ್ಯಕ್ರಮ ಸಂಯೋಜಕ ಧನಂಜಯ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.